ಸಾರಾಂಶ
ಬೆಳಗಾವಿ ಜಿಲ್ಲೆಯ ಅಮಟೂರಿನಲ್ಲಿ ಆಯೋಜನೆ । ಗೊಲ್ಲ ಸಂಘದ ರಾಜ್ಯಾಧ್ಯಕ್ಷ ಡಿ.ಟಿ.ಶ್ರೀನಿವಾಸ್ ಮಾಹಿತಿಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕರ್ನಾಟಕ ರಾಜ್ಯ ಗೊಲ್ಲ (ಯಾದವ) ಸಂಘದ ಶತಮಾನೋತ್ಸವ ಹಾಗೂ ಯಾದವಾನಂದ ಸ್ವಾಮಿಗಳ 16ನೇ ಪಟ್ಟಾಭಿಷೇಕ ಮಹೋತ್ಸವ ಸಮಾರಂಭವನ್ನು ಏ.20 ರಂದು ಮಧ್ಯಾಹ್ನ 3 ಗಂಟೆಗೆ ಬೆಳಗಾವಿ ಜೆಲ್ಲೆಯ ಚಿಕ್ಕೂಡಿ ಲೋಕಸಭಾ ಕ್ಷೇತ್ರದ ಅಮಟೂರು ಬಾಳಪ್ಪರವರ ಸ್ಮರಣಾರ್ಥ ಮಂಟಪದ ಹಮ್ಮಿಕೊಳ್ಳಲಾಗಿದೆ ಎಂದು ಮೇಲ್ಮನೆ ಸದಸ್ಯ ಹಾಗೂ ಕರ್ನಾಟಕ ರಾಜ್ಯ ಗೊಲ್ಲ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಹೇಳಿದರು.ಪಟ್ಟಾಭಿಷೇಕ ಮಹೋತ್ಸವ ಕುರಿತಂತೆ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಕರ್ನಾಟಕ ರಾಜ್ಯ ಗೊಲ್ಲ (ಯಾದವ) ಸಂಘವು 1924ರಲ್ಲಿ ಸ್ಥಾಪನೆಯಾಗಿದ್ದು ಶತಮಾನೋತ್ಸವ ಸಂಭ್ರಮದಲ್ಲಿದೆ. ಕರ್ನಾಟಕದಲ್ಲಿ ಸುಮಾರು 25 ರಿಂದ 30 ಲಕ್ಷಗಳಷ್ಟು ಗೊಲ್ಲ ಜನಾಂಗದ ಜನಸಂಖ್ಯೆಯಿದೆ. ಗೊಲ್ಲ, ಗೋಪಾಲ, ಹಣಬರು, ಯಾದವ, ಕಾಡುಗೊಲ್ಲ, ಆಸ್ತನಾಗೊಲ್ಲ, ಯಾದವ್, ಅಡವಿಗೊಲ್ಲ, ಗೋಪಾಲಿ, ಗೌಳಿ, ಗೌಲಿ, ಗಾವಲಿ, ಗಾವಿ, ಹಣಬರು, ಕಾವಡಿ, ಕೊಲಾಯನ್, ಕೋನಾರ್, ಕೊನ್ನೂರ್. ಕೃಷ್ಣ ಗಾವಲಿ, ಕೃಷ್ಣಗೊಲ್ಲ, ಮಣಿಯಾನಿ, ಊರಾಲಿ ಜಾತಿಗಳಿಂದ ಗುರುತಿಸಲ್ಪಟ್ಟಿರುತ್ತದೆ. ಕರ್ನಾಟಕ ರಾಜ್ಯದಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಗೊಲ್ಲ ಜನಾಂಗ ಹಿಂದುಳಿದಿದ್ದು, ಸಂಘಟನೆಯ ಮೂಲಕ ಬಲವರ್ಧನೆಗೊಳ್ಳಲು ಎಲ್ಲಾ ಪ್ರಯತ್ನಮಾಡಲಾಗುತ್ತಿದೆ ಎಂದರು.
ಬೆಂಗಳೂರು ದಕ್ಷಿಣ ಜಿಲ್ಲೆ, ಕುಂಬಳಗೋಡು ಗ್ರಾಮದ ಸರ್ವೇ ನಂ.30ರಲ್ಲಿ 4 ಎಕರೆ ಜಮೀನನ್ನು ಯಾದವಾನಂದ ಸ್ವಾಮೀಜಿಗಳ ಶಾಖಾ ಮಠ ಹಾಗೂ ಗೋಶಾಲೆ ನಿರ್ಮಾಣಕ್ಕೆ ಮಂಜೂರು ಮಾಡುವಂತೆ ಕೋರಿ ಪ್ರಸ್ತಾವನೆ ಸರ್ಕಾರದ ಹಂತದಲ್ಲಿದೆ. ಶ್ರೀಗಳ 16ನೇ ವರ್ಷದ ಪಟ್ಟಾಭಿಷೇಕ ಹಾಗೂ ಕರ್ನಾಟಕ ರಾಜ್ಯ ಗೊಲ್ಲರ ಸಂಘದ ಶತಮಾನೋತ್ಸವವನ್ನು ಸಿಎಂ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹಸಚಿವ ಜಿ.ಪರಮೇಶ್ವರ್, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಮಾಜಿ ಶಾಸಕಿ ಕೆ.ಪೂರ್ಜೆಮಾ ಶ್ರೀನಿವಾಸ್, ಹಾಲಿ ಶಾಸಕ ಧೀರಣ್ ಮುನಿರಾಜು ಮತ್ತು ಎಂ.ನಾಗರಾಜ್ ಯಾದವ್ ಮತ್ತು ಬೆಳಗಾವಿ ಜಿಲ್ಲೆ ಶಾಸಕರು ಮಾಜಿ ಸಂಸದ ಪಿ.ಕೋದಂಡರಾಮಯ್ಯ, ಮಾಜಿ ಶಾಸಕರಾದ ಎ.ವಿ.ಉಮಾಪತಿ, ಜಯಮ್ಮ ಬಾಲರಾಜ್ ಭಾಗವಹಿಸಲಿದ್ದಾರೆ ಎಂದರು.ಈ ವೇಳೆ ಯಾದವ ಸಂಘದ ರಾಜ್ಯ ಉಪಾಧ್ಯಕ್ಷ ಸಿದ್ದಪ್ಪ, ಜಿಲ್ಲಾ ಕಾಂಗ್ರೆಸ್ ಕಾರ್ಯಾಧ್ಯಕ್ಷ ಹಾಲಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಬಾಲರಾಜ್, ಕೆ.ಸಿ.ರಮೇಶ್, ಪಾಪಣ್ಣ ಸುದ್ದಿಗೋಷ್ಠಿಯಲ್ಲಿ ಇದ್ದರು.