ನಗರದ ಕರವೇ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷರಾದ ಟಿ.ಎನ್. ಭೀಮುನಾಯಕ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಆರು ತಾಲೂಕು ಅಧ್ಯಕ್ಷರ ಸಭೆ ನಡೆಸಲಾಯಿತು,
ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಕರವೇ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾಧ್ಯಕ್ಷರಾದ ಟಿ.ಎನ್. ಭೀಮುನಾಯಕ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಆರು ತಾಲೂಕು ಅಧ್ಯಕ್ಷರ ಸಭೆ ನಡೆಸಲಾಯಿತು,ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಂದು ಕಡೆ ಬರಗಾಲ, ಮತ್ತೊಂದು ಕಡೆ ಬಡತನದಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗಿರಿ ಜಿಲ್ಲೆಯ ಹೆಣ್ಣುಮಕ್ಕಳ ಅನುಕೂಲಕ್ಕಾಗಿ ಡಿ.11 ರಂದು ಯಾದಗಿರಿ ನಗರದ ಪಂಪ ಕವಿ ಮಹಾಮಂಟಪದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ರಕ್ತದಾನ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕರವೇ ಕಾರ್ಯಕರ್ತರು ಹಾಗೂ ಯುವಕರು, ಪ್ರಜ್ಞಾನವಂತ ನಾಗರೀಕರು, ಸಂಘ-ಸಂಸ್ಥೆಯ ಮುಖಂಡರು, ಸಾಮಾಜಿಕ ಹೋರಾಟಗಾರರು, ನಾಡಿನ ಭ್ಯವಿಷ್ಯದ ವಿದ್ಯಾರ್ಥಿಗಳು, ಕಾರ್ಮಿಕರು, ಸ್ವಯಂಪ್ರೇರಿತವಾಗಿ ಆಗಮಿಸಿ ರಕ್ತದಾನ ಮಾಡುವ ಮೂಲಕ ಮಾನವೀಯ ಸೇವೆಯಲ್ಲಿ ಕೈಜೋಡಿಸಬೇಕು. ಕರವೇ ಸಂಘಟನೆಯ ಶಕ್ತಿಯನ್ನು ಸಮಾಜಮುಖಿ ಕಾರ್ಯಗಳಿಗೆ ಬಳಸಿಕೊಂಡು ಬಡ ಮತ್ತು ಸಂಕಷ್ಟದಲ್ಲಿರುವ ಜನರಿಗೆ ನೆರವು ನೀಡಬೇಕು ಎಂದು ಕರೆ ನೀಡಿದರು.ಜಿಲ್ಲೆಯಾದ್ಯಂತ ಕರವೇ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಯಿತು. ಸಂಘಟನೆಯ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸದ ಕೆಲವು ಪದಾಧಿಕಾರಿಗಳನ್ನು ಬದಲಿಸಿ, ಸಂಘಟನೆಯ ಬೆಳವಣಿಗೆಗೆ ಶ್ರಮಿಸುವ ಹೊಸ ಮುಖಗಳಿಗೆ ಅವಕಾಶ ನೀಡುವ ಕುರಿತು ಚರ್ಚಿಸಲಾಯಿತು ಎಂದುಹೇಳಿದರು.
ಕರವೇ ಎಂದರೆ ಕೇವಲ ಒಂದು ಸಂಘಟನೆಯಲ್ಲ, ಅದು ಕನ್ನಡ ನಾಡು, ನುಡಿ, ನೆಲ, ಜಲದ ರಕ್ಷಣೆಯ ಜೊತೆಗೆ ಸಾಮಾಜಿಕ ಸೇವೆ, ಶಿಸ್ತು, ಬದ್ಧತೆ ಮತ್ತು ಹೋರಾಟದ ಸಂಕೇತವಾಗಿದೆ. ಪ್ರತಿಯೊಬ್ಬ ಕಾರ್ಯಕರ್ತರೂ ಸಂಘಟನೆಯ ಸಿದ್ಧಾಂತಗಳಿಗೆ ಬದ್ಧರಾಗಿ ನಿಷ್ಠೆಯಿಂದ ಕೆಲಸ ಮಾಡಬೇಕು. ವೈಯಕ್ತಿಕ ಹಿತಾಸಕ್ತಿಗಿಂತ ಸಂಘಟನೆಯ ಹಿತಾಸಕ್ತಿ ಮತ್ತು ಜನಸೇವೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.ಜನರ ಸಂಕಷ್ಟಕ್ಕೆ ಸ್ಪಂದಿಸುವುದೇ ನಿಜವಾದ ಸಂಘಟನೆ. ಸಂಘಟನೆಯ ಶಕ್ತಿ ಜನರ ಸೇವೆಗೆ ಬಳಕೆಯಾದಾಗ ಮಾತ್ರ ಹೋರಾಟಕ್ಕೆ ನಿಜವಾದ ಅರ್ಥ ಬರುತ್ತದೆ ಎಂಬ ಸಂದೇಶವನ್ನು ಸಭೆಯಲ್ಲಿ ನೀಡಲಾಯಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ಸಿದ್ದುನಾಯಕ ಹತ್ತಿಕುಣಿ, ಅಂಬ್ರೇಶ ಹತ್ತಿಮನಿ, ಸಂತೋಷಕುಮಾರ ನಿರ್ಮಲಕರ್, ವಿಶ್ವರಾಜ್ ಹೊನಗೇರಾ, ಹಣಮಂತನಾಯಕ ಖಾನಳ್ಳಿ, ಪ್ರಕಾಶ ಪಾಟೀಲ ಜೈಗ್ರಾಮ್, ನಾಗು ತಾಂಡೂರಕರ್, ವೆಂಕಟೇಶನಾಯಕ ಬೈರಿಮಡ್ಡಿ, ಅಂಬ್ರೇಶ ಕಟ್ಟಿಮನಿ, ಬಸವರಾಜ ಚನ್ನೂರು, ಮೌನೇಶ ಮಾಧ್ವಾರ, ಹಣಮಂತ ತೇಕರಾಳ, ಸಿದ್ದಪ್ಪ ಕೂಯಿಲೂರ, ಅಶೋಕ ನಾಯಕ, ಶಿವರಾಜ ನಾಡಗೌಡ, ದಿಲೀಪಕುಮಾರ ಸೈದಾಪೂರ, ವೆಂಕಟರಾಮುಲು ಸೈದಾಪೂರ, ಮಲ್ಲಿಕಾರ್ಜುನ ದೋರನಹಳ್ಳಿ, ಶ್ರೀನಿವಾಸ ಲಕ್ಷ್ಮೀಪುರ, ಮಲ್ಲಿಕಾರ್ಜುನ ಹಳಿಸಗರ, ಗಿರೀಶ ನೀಲಹಳ್ಳಿ, ಚಂದಪ್ಪ ನಾಯಕ ಹಳಿಗೇರಾ, ಶರಣು ತಿಂಥಣಿ, ವಿರುಪಾಕ್ಷ ಸ್ವಾಮಿ, ತಿಮ್ಮಣ್ಣ ಕಟ್ಟಿಮನಿ, ನಾಗೇಂದ್ರ ದೊರೆ, ಮರೆಪ್ಪ ಕಡ್ಡಿ, ರಮೇಶ.ಡಿ.ನಾಯಕ ಸೇರಿದಂತೆ ಅನೇಕರು ಭಾಗಿಯಾಗಿದ್ದರು.