ಸಾರಾಂಶ
Yadgiri District Co-operative Union Federation meeting
ಯಾದಗಿರಿ:ಆಡಳಿತ ಮಂಡಳಿಯ ನಿರ್ದೇಶಕರ ಸಭೆ ಜಿಲ್ಲಾ ಸಹಕಾರಿ ಯುನಿಯನ್ ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ನಡೆಯಿತು. ಯಾದಗಿರಿ ಜಿಲ್ಲಾ ಸಹಕಾರಿ ಯೂನಿಯನ್ ಒಕ್ಕೂಟದ ಅಧ್ಯಕ್ಷ ವಿಶ್ವನಾಥರಡ್ಡಿ ಎಸ್. ದರ್ಶನಾಪೂರ ನೇತೃತ್ವದಲ್ಲಿ ನಡೆದ ಸರ್ವ ನಿರ್ದೇಶಕರ ಆಡಳಿತ ಮಂಡಳಿಯ ಸಭೆಯಲ್ಲಿ ವಾರ್ಷಿಕ ಮಹಾಸಭೆ ಹಾಗೂ ಜಿಲ್ಲಾ ಮಟ್ಟದ ತಾಲೂಕು ಮಟ್ಟದ ಮತ್ತು ಲೆಕ್ಕಪರಿಶೋಧನೆ ಮತ್ತು ಜಿಲ್ಲಾ ಮಟ್ಟದ ಸಹಕಾರಿ ಸಂಘಗಳ ತರಬೇತಿ ನಿವೇಶನ ಬಗ್ಗೆ ಅನೇಕ ಚರ್ಚೆಗಳು ನಡೆದವು. ಜಿಲ್ಲಾ ಉಪಾಧ್ಯಕ್ಷ ಎಂ. ನಾರಾಯಣ, ನಿರ್ದೇಶಕ ಕೆಂಚಪ್ಪ ನಗನೂರ, ಬಾಪುಗೌಡ ಹುಣಸಗಿ, ಮಲ್ಲಣ್ಣಗೌಡ ಹತ್ತಿಕುಣಿ, ವೈಜನಾಥ ಪಾಟೀಲ್, ಸಿದ್ದಪ್ಪ ಹೊಟ್ಟಿ, ಕೃಷ್ಣಾರಡ್ಡಿ ಗುರುಮಠಕಲ್, ಶಶಿಧರ ಶಹಾಪೂರ ಸಹಕಾರ ಸಂಘದ ಜಿಲ್ಲಾ ಉಪನಿಬಂಧಕರು ಪವನ ಕುಮಾರ್ ರಾಠೋಡ ಇದ್ದರು.
-----ಫೋಟೊ: 20ವೈಡಿಆರ್18
ಯಾದಗಿರಿ ಜಿಲ್ಲಾ ಸಹಕಾರಿ ಯುನಿಯನ್ ಒಕ್ಕೂಟದ ಕೇಂದ್ರ ಕಚೇರಿಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರ ಸಭೆಯನ್ನು ಯಾದಗಿರಿ ಜಿಲ್ಲಾ ಸಹಕಾರಿ ಯೂನಿಯನ್ ಒಕ್ಕೂಟದ ಅಧ್ಯಕ್ಷರ ವಿಶ್ವನಾಥರಡ್ಡಿ ಎಸ್. ದರ್ಶನಾಪೂರ ನೇತೃತ್ವದಲ್ಲಿ ಸಭೆ ನಡೆಯಿತು.