ಸಾರಾಂಶ
ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ಬೆಳಗೇರಾ ಗ್ರಾಮದಲ್ಲಿ ಬಿಜೆಪಿ ಯುವ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಪಟಾಕಿ ಸಿಡಿಸಿ, ಸಿಹಿ ಹಂಚಿ ಪಕ್ಷದ ಕಾರ್ಯಕರ್ತರ ಸಂಭ್ರಮ । ಪ್ರಧಾನಿ ಅಭಿನಂದನೆಯಾದಗಿರಿ: ದೆಹಲಿಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ, ಬೆಳಗೇರಾ ಗ್ರಾಮದಲ್ಲಿ ಬಿಜೆಪಿ ಯುವ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.
ಬಿಜೆಪಿ ಮಾಜಿ ಯುವ ಜಿಲ್ಲಾಧ್ಯಕ್ಷ ಮೌನೇಶ್ ಬೆಳಗೇರಾ ಮಾತನಾಡಿ, ದೆಹಲಿಯಲ್ಲಿ ಬಿಜೆಪಿ 27 ವರ್ಷಗಳ ಬಳಿಕ ಕಮಲ ಅರಳಿದೆ, ವಿಕಸಿತ ಭಾರತದ ಸಂಕಲ್ಪ ತೊಟ್ಟು ದೇಶವನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಟಗೊಳಿಸಲು ಯೋಜನೆ ರೂಪಿಸುತ್ತಿರುವ ಪ್ರಧಾನಿಯವರಿಗೆ ದೇಶದ ರಾಜಧಾನಿಯ ಗೆಲುವು ಭೀಮ ಬಲವನ್ನು ತಂದು ಕೊಟ್ಟಿದೆ, ದೆಹಲಿಯಲ್ಲಿ ವಿಜಯ ಸಾಧಿಸಿರುವುದು ನಮ್ಮೆಲ್ಲರಿಗೂ ತುಂಬಾ ಸಂತೋಷವಾಗಿದೆ ಎಂದರು.ತಾಲೂಕು ಪಂಚಾಯತ ಸದಸ್ಯರಾದ ಮಾಜಿ ಸದಾಶಿವರೆಡ್ಡಿ ಕೋಡ್ಲಾ, ಬೂತ್ ಅಧ್ಯಕ್ಷ ಸಾಬಣ್ಣ ಕೋಲಕುಂದಿ, ಸಾಬಣ್ಣ ಮಡಿವಾಳ, ಹಣಮಂತ ಕೋಲಕುಂದಿ, ಹಣಮಂತ ಎಲೇರಿ, ಶರಣಪ್ಪ ಬಳಿಚಕ್ರ, ಬಸಪ್ಪ ಚಟ್ಟೆರ, ಹಣಮಂತ ಬಸನಾಯ್ಕ, ಕಾಶಪ್ಪ ಬಸನಾಯ್ಕ, ಅನಿಲ್ ಕಡ್ಡೆರ್, ಹಣಮಂತ ಬಾವನೂರ್, ಚಂದಪ್ಪ ನಾಯ್ಕೋಡಿ, ದೇವಕೆಮ್ಮ ಕಂದರ್, ಭೀಮವ್ವ ಕೊಂಬೆನೂರ್, ಅಯ್ಯಪ್ಪ ನಾಟೆಕಾರ್, ಬೀರಪ್ಪ ಪೂಜಾರಿ, ಮಲ್ಲಿಕಾರ್ಜುನ್ ಮಾನೆಗಾರ್, ಬಾಲರೆಡ್ದಿ ಸಾಹುಕಾರ, ದಸ್ತಗಿರಿ, ಮರೆಪ್ಪ ಎಲ್ಝೇರಿ, ಸಿದ್ಧಲಿಂಗಪ್ಪ ಚಿಂತನಹಳ್ಳಿ, ಶರಣಪ್ಪ ತಂಬಾಕೇ, ಕಾಸಿಂ, ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.