ಹಾರ್ವರ್ಡ್ ಅಂತಾರಾಷ್ಟ್ರೀಯ ಶೖಂಗಸಭೆಗೆ ಮಡಿಕೇರಿಯ ಯದೀಶ್ ರಮೇಶ್ ಆಯ್ಕೆ

| Published : Aug 17 2025, 03:15 AM IST

ಹಾರ್ವರ್ಡ್ ಅಂತಾರಾಷ್ಟ್ರೀಯ ಶೖಂಗಸಭೆಗೆ ಮಡಿಕೇರಿಯ ಯದೀಶ್ ರಮೇಶ್ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಜಿಲ್ಲೆಯ ಯದೀಶ್‌ ರಮೇಶ್‌ ಹಾರ್ವರ್ಡ್‌ ಏಷ್ಯನ್‌ ಅಂಡ್‌ ಇಂಟರ್‌ನ್ಯಾಷನಲ್‌ ರಿಲೇಷನ್‌ ಸಮ್ಮೇಳನಕ್ಕೆ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಾರ್ತ್‌ಈಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿರುವ ಕೊಡಗು ಜಿಲ್ಲೆಯ ಯದೀಶ್ ರಮೇಶ್, ಹಾರ್ವರ್ಡ್ ಪ್ರಾಜೆಕ್ಟ್ ಫಾರ್ ಏಷ್ಯನ್ ಅಂಡ್ ಇಂಟರ್‌ನ್ಯಾಷನಲ್ ರಿಲೇಶನ್ಸ್ (HPAIR) 2025 ಸಮ್ಮೇಳನಕ್ಕೆ ಭಾರತದ ಪ್ರತಿನಿಧಿಗಳಲ್ಲಿ ಒಬ್ಬರಾಗಿ ಆಯ್ಕೆಯಾಗಿದ್ದಾರೆ. ಮಡಿಕೇರಿ ನಗರಸಭಾ ಸದಸ್ಯ ಕೆ.ಎಸ್. ರಮೇಶ್ ಮತ್ತು ಕೆ.ಆರ್. ರಮ್ಯಾ ಅವರ ಪುತ್ರರಾಗಿರುವ ಯದೀಶ್ ರಮೇಶ್ ಏಷ್ಯಾದಿಂದ ಆಯ್ಕೆಯಾದ ಕೆಲವೇ ಪ್ರತಿನಿಧಿಗಳಲ್ಲಿ ಒಬ್ಬರಾಗಿದ್ದಾರೆ. ಈ ಪ್ರತಿಷ್ಠಿತ ಜಾಗತಿಕ ಸಮ್ಮೇಳನವು ಈ ವರ್ಷ ಆ. 20 ರಿಂದ 24ರವರೆಗೆ ಜಪಾನ್‌ನ ಟೋಕಿಯೋ ನಗರದಲ್ಲಿ ನಡೆಯಲಿದೆ.

ಇದೇ ವರ್ಷ 2025ರಲ್ಲಿ, ಯದೀಶ್ ರಮೇಶ್ ಅವರು ಜಾಗತಿಕ ವೇದಿಕೆಗಳಲ್ಲಿ ಭಾರತದ ಪ್ರತಿನಿಧಿಯಾಗಿ ಹಲವಾರು ಪ್ರಮುಖ ಸಮಾವೇಶಗಳಲ್ಲಿ ಪಾಲ್ಗೊಂಡಿದ್ದರು. ನ್ಯೂಯಾರ್ಕ್‌ನ ವಿಶ್ವಸಂಸ್ಥೆ ಮುಖ್ಯ ಕಚೇರಿಯಲ್ಲಿ ನಡೆದ ಸಂಯುಕ್ತ ರಾಷ್ಟ್ರಗಳ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (ECOSOC) ಯುವ ಸಮ್ಮೇಳನದಲ್ಲಿ MGCY ಭಾರತವನ್ನು ಪ್ರತಿನಿಧಿಸಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿ ನಡೆದ 11ನೇ ಆವೃತ್ತಿಯ ಅಂತಾರಾಷ್ಟ್ರೀಯ ಯುವ ಸಮ್ಮೇಳನ 2025ರಲ್ಲಿ ಕೂಡ ಯದೀಶ್ ರಮೇಶ್ ಭಾರತದ ಪ್ರತಿನಿಧಿಯಾಗಿದ್ದರು.