ಪ್ರತಾಪ್‌ಗಿಂತಲೂ ಹೆಚ್ಚು ಲೀಡ್‌ನಲ್ಲಿ ಗೆದ್ದ ಯದುವೀರ್‌

| Published : Jun 05 2024, 01:30 AM IST / Updated: Jun 05 2024, 11:07 AM IST

ಪ್ರತಾಪ್‌ಗಿಂತಲೂ ಹೆಚ್ಚು ಲೀಡ್‌ನಲ್ಲಿ ಗೆದ್ದ ಯದುವೀರ್‌
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರಿನಲ್ಲಿ ರಾಜಮನೆತಕ್ಕೆ ಹೆಚ್ಚಾಗಿ ಗೌರವವಿರುವ ಕಾರಣ ಹಾಗೂ ಜೆಡಿಎಸ್ ಜೊತೆಗಿನ ಮೈತ್ರಿಯಿಂದಾಗಿ ಯದುವೀರ್ ಮೊದಲ ಬಾರಿ ಚುನಾಚಣೆಯಲ್ಲೇ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಮೈಸೂರು: ಮೈಸೂರು- ಕೊಡಗು ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪ್ರತಾಪ್‌ ಸಿಂಹ ಅವರಿಗಿಂತಲೂ ಹೆಚ್ಚು ಮತಗಳ ಅಂತರದಿಂದ ಜಯಗಳಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್‌ 6,88,974 ಮತ ಪಡೆದು, ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿ ಸಿ.ಎಚ್. ವಿಜಯಶಂಕರ್ ವಿರುದ್ಧ 1,38,647 ಮತಗಳ ಅಂತರದಿಂದ ಜಯಗಳಿಸಿದ್ದರು. ಆಗ ವಿಜಯಶಂಕರ್ 5,50,327 ಮತ ಪಡೆದಿದ್ದರು.

ಈ ಬಾರಿ ಯದುವೀರ್ 795503 ಮತ ಪಡೆದಿದ್ದು, 1,39,262 ಮತಗಳ ಅಂತರದಿಂದ ಜಯಭೇರಿ ಬಾರಿಸಿದ್ದಾರೆ.

ಕಾಂಗ್ರೆಸ್ ನ ಎಂ. ಲಕ್ಷ್ಮಣ್ 6,56,241 ಮತಗಳನ್ನು ಪಡೆದು ಸೋಲುಂಡಿದ್ದಾರೆ.