ಯಕ್ಕುಂಡಿ ಬಾಬಾ ಸಂದಲ್, ಉರುಸ್ ಸಂಪನ್ನ

| Published : Jun 01 2024, 12:47 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಬೈಲಹೊಂಗಲಸಮೀಪದ ಯಕ್ಕುಂಡಿ ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸಂಕೇತವಾಗಿರುವ ಹಜರತ್ ಪೀರ ದಿಲಾವರ ಗೋರಿ ಶಾ ವಲಿ ಬಾಬಾ ಸಂದಲ್ ಮತ್ತು ಉರುಸ್ ಕಾರ್ಯಕ್ರಮ ಹಿಂದೂ-ಮುಸ್ಲಿಂ ಭಕ್ತರ ಮಧ್ಯೆ ವಿಧಿ-ವಿಧಾನಗಳಿಂದ ಸಂಭ್ರಮದಿಂದ ನಡೆದಿದ್ದು, ಸಂಪನ್ನಗೊಂಡಿದೆ.

ಮಲಪ್ರಭಾ ನದಿ ದಡದಲ್ಲಿರುವ ಯಕ್ಕುಂಡಿ ಐತಿಹಾಸಿಕ ಮತ್ತು ಧಾರ್ಮಿಕ ಪರಂಪರೆ ಹೊಂದಿದೆ. ಯಜ್ಞಕುಂಡ ಎಂದೇ ಖ್ಯಾತಿ ಗಳಿಸಿದ ಈ ಊರಿಗೆ ಬಂದ ಹಜರತ್ ಪೀರ ದಿಲಾವರ ಗೋರಿ ಶಾವಲಿ ಬಾಬಾ ಅವರು ಅಲ್ಲಾಹುವಿನ ಸಂದೇಶ ಸಾರುತ್ತ ನೆಲೆಸಿದ್ದರು. ಅವರು ನಿಧನರಾದ ನಂತರ ಅವರ ಹೆಸರಿನಲ್ಲಿ ಗ್ರಾಮಸ್ಥರು ದರ್ಗಾ ನಿರ್ಮಿಸಿದರು ಎಂದು ಹೇಳಲಾಗುತ್ತಿದೆ. ಪ್ರತಿವರ್ಷ ಈ ದರ್ಗಾದಲ್ಲಿ ಗ್ರಾಮಸ್ಥರು ಜಾತಿ-ಭೇದ ಮರೆತು ಉರುಸ್‌ನ್ನು ಅದ್ಧೂರಿಯಾಗಿ ಆಚರಿಸುತ್ತ ಬಂದಿದ್ದಾರೆ. ಉರುಸ್‌ಗೆ ವಿವಿಧ ಭಾಗಗಳಿಂದ ಲಕ್ಷಾಂತರ ಜನ ಸೇರುತ್ತಾರೆ. ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಬೇಡಿಕೊಂಡಿದ್ದನ್ನು ಭಕ್ತರು ಅರ್ಪಿಸಿದರು. ಮೊದಲ ದಿನದ ಸಂದಲ್ ಮೆರವಣಿಗೆ ಸಾವಿರಾರು ಭಕ್ತರ ಕಣ್ಮನ ಸೆಳೆಯಿತು.

ಹಜರತ್ ಪೀರ್ ದಿಲಾವರ ಗೋರಿ ಶಾವಲಿ ಅವರ ಉರುಸ್ ನಿಮಿತ್ತ ಗ್ರಾಮದ ತುಂಬೆಲ್ಲ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಸಾವಿರಾರು ಭಕ್ತರು ದರ್ಗಾಗೆ ಭೇಟಿ ನೀಡಿ ಮಾಲೆ-ಸಕ್ಕರೆ ನೈವೇದ್ಯ ಸಲ್ಲಿಸಿ ದರ್ಶನ ಪಡೆದರು.