ಯಕ್ಸಂಬಾ ಬೀರೇಶ್ವರ ಸಹಕಾರಿ ಸಂಸ್ಥೆಗೆ ₹45.35 ಕೋಟಿ ಲಾಭ

| Published : Apr 04 2025, 12:49 AM IST

ಯಕ್ಸಂಬಾ ಬೀರೇಶ್ವರ ಸಹಕಾರಿ ಸಂಸ್ಥೆಗೆ ₹45.35 ಕೋಟಿ ಲಾಭ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯದ ವಿವಿಧೆಡೆ 226 ದಕ್ಷಿಣ ಭಾರತದಲ್ಲಿಯೇ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ಚಿಕ್ಕೋಡಿ ತಾಲೂಕಿನ ಯಕ್ಸಂಬಾದ ಬೀರೇಶ್ವರ ಕೋ-ಆಫ್ ಕ್ರೆಡಿಟ್ ಸೊಸೈಟಿ ಲಿ, ಸಂಸ್ಥೆ (ಮಲ್ಟಿಸ್ಟೇಟ್)ಯು ಮೂರು ರಾಜ್ಯಗಳ ಕಾರ್ಯಕ್ಷೇತ್ರವನ್ನು ವ್ಯಾಪಿಸಿರುವ ಸಹಕಾರಿಯು 2024-25ನೇ ಸಾಲಿನ ಆರ್ಥಿಕ ವರ್ಷದಲ್ಲಿ ₹45.35 ಕೋಟಿಗಳಷ್ಟು ಲಾಭ ಗಳಿಸಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ತಾಲೂಕಿನ ಯಕ್ಸಂಬಾ ಪಟ್ಟಣದ ಬೀರೇಶ್ವರ ನೂತನ ಆಡಳಿತ ಕಚೇರಿಯ ಸಭಾಗೃಹದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಸಂಸ್ಥೆಯ ಮಹಾನಗರಗಳಲ್ಲಿ ಹುಟ್ಟಿ ಗ್ರಾಮೀಣ ಪ್ರದೇಶಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದರೇ ಬೀರೇಶ್ವರ ಸಹಕಾರಿ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಇಂದು ದಕ್ಷಿಣ ಭಾರತದಲ್ಲಿಯೇ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿ 3 ರಾಜ್ಯಗಳಲ್ಲಿ ತನ್ನ ಕ್ಷೇತ್ರವನ್ನು ಹೊಂದಿ ಆರ್ಥಿಕ ವಲಯದಲ್ಲಿ ಹಲವಾರು ಬದಲಾವಣೆಗಳನ್ನು ತಂದಿದ್ದರು. ಸದ್ಯ ಬೀರೇಶ್ವರ ವರ್ಷದಿಂದ ವರ್ಷಕ್ಕೆ ಅರ್ಥಿಕವಾಗಿ ಸದೃಢವಾಗಿ ಬೆಳೆಯುತ್ತಿದೆ. ಕಳೆದ ವರ್ಷಕ್ಕಿಂತ ₹4.79 ಕೋಟಿಗಳಷ್ಟು ಲಾಭಾಂಶದಲ್ಲಿ ಹೆಚ್ಚಳವಾಗಿದೆ ಎಂದರು.ಸಹಕಾರಿಯು 4,08,233 ಸದಸ್ಯರನ್ನು ಒಳಗೊಂಡು 34,92,16,400,00 ಶೇರು ಬಂಡವಾಳ ₹4338. 58 ಕೋಟಿಗಳಿಗೂ ಮೀರಿ ಠೇವು ಸಂಗ್ರಹ, ₹5,030.90 ಕೋಟಿಗಳ ದುಡಿಯುವ ಬಂಡವಾಳ ಹೊಂದಿ ರಾಜ್ಯದಲ್ಲಿ ಅತ್ಯುತ್ತಮ ಸಹಕಾರಿಯಾಗಿ ಹೆಮ್ಮರವಾಗಿ ಬೆಳೆದು ನಿಂತಿದೆ ಎಂದರು.ಬೀರೇಶ್ವರ ಕೋ-ಆಫ್ ಕ್ರೆಡಿಟ್ ಸೊಸೈಟಿ ಲಿ, ಸಂಸ್ಥೆ (ಮಲ್ಟಿಸ್ಟೇಟ್)ಯು ಅಂತಾರಾಜ್ಯ ಕಾಯ್ದೆಯಡಿ ಕರ್ನಾಟಕದಲ್ಲಿ 176, ಮಹಾರಾಷ್ಟ್ರದಲ್ಲಿ 46 ಹಾಗೂ ಗೋವಾದಲ್ಲಿ 4 ಶಾಖೆಗಳು ಸೇರಿದಂತೆ 226 ಶಾಖೆಗಳಲ್ಲಿ ಪಾರದರ್ಶಕವಾಗಿ ಸೇವೆಯನ್ನು ನೀಡುತ್ತಿದ್ದು, ಬರುವ ದಿನಗಳಲ್ಲಿ ಹೆಚ್ಚಿನ ಶಾಖೆಗಳನ್ನು ಪ್ರಾರಂಭಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರ ಇಲಾಖೆ ಅನುಮತಿ ನೀಡಿದೆ ಎಂದರು.ಗೋಷ್ಠಿಯಲ್ಲಿ ಪ್ರಧಾನ ವ್ಯವಸ್ಥಾಪಕ ಬಹದ್ದುರ ಗುರವ, ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೇರಮನ್ ಅಪ್ಪಾಸಾಹೇಬ ಜೊಲ್ಲೆ, ವೈ.ಚೇರಮನ್ ಆನಂದ ಪಾಟೀಲ ಹಾಗೂ ನೂತನವಾಗಿ ಆಯ್ಕೆಯಾದ ನಿರ್ದೇಶಕ ಮಂಡಳಿ ಸದಸ್ಯರು ಹಾಗೂ ಸಿಬ್ಬಂದಿಯರಾದ ಉಪಪ್ರಧಾನ ವ್ಯವಸ್ಥಾಪಕರಾದ ಮಹಾದೇವ ಮಂಗಾವತೆ, ರಮೇಶ ಕುಂಭಾರ, ಎಸ್.ಕೆ.ಮಾನೆ, ಶಿವಪುತ್ರ ಡಬ್ಬ, ಶೇಖರ ಪಾಟೀಲ, ಪ್ರವೀಣ ತೋರಿ ಇದ್ದರು.

ಬೀರೇಶ್ವರ ಕೋ-ಆಫ್ ಕ್ರೆಡಿಟ್ ಸೊಸೈಟಿ ಲಿ., ಸಂಸ್ಥೆ (ಮಲ್ಟಿಸ್ಟೇಟ್)ಯು ತನ್ನ ಸಿಬ್ಬಂದಿಗೆ ಉಳಿದುಕೊಳ್ಳಲು ಕ್ವಾಟರ್ಸ್‌ ವ್ಯವಸ್ಥೆ, ಸಿಬ್ಬಂದಿಗೆ ಉತ್ತಮ ವೇತನ, ವಿಮೆ ಸೌಲಭ್ಯ ಹಾಗೂ ನಿವೃತ್ತಿ ಪಿಂಚಣಿ ವ್ಯವಸ್ಥೆಯನ್ನು ಸಹಕಾರಿ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಜಾರಿಗೆ ತಂದಿದೆ.

-ಅಣ್ಣಾಸಾಹೇಬ ಜೊಲ್ಲೆ,

ಸಂಸ್ಥೆಯ ಸಂಸ್ಥಾಪಕರು.