ಕುರಿಯ ಗಣಪತಿ ಶಾಸ್ತ್ರಿಗೆ ಯಕ್ಷಧ್ರುವ ಪಟ್ಲ ಪ್ರಶಸ್ತಿ

| Published : Jun 02 2025, 01:28 AM IST

ಸಾರಾಂಶ

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಆಶ್ರಯದಲ್ಲಿ ಅಡ್ಯಾರ್‌ ಗಾರ್ಡನ್‌ನಲ್ಲಿ ನಡೆದ ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025 ರಾಷ್ಟ್ರೀಯ ಕಲಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಸಂಜೆ, ಯಕ್ಷಧ್ರುವ ಪಟ್ಲ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಭಾಗವತ ಕುರಿಯ ಗಣಪತಿ ಶಾಸ್ತ್ರಿ ಅವರಿಗೆ ಪ್ರದಾನ ಮಾಡಲಾಯಿತು.

ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025 ರಾಷ್ಟ್ರೀಯ ಕಲಾ ಸಮ್ಮೇಳನ ಸಮಾರೋಪ

ಕನ್ನಡಪ್ರಭ ವಾರ್ತೆ ಮಂಗಳೂರು

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಆಶ್ರಯದಲ್ಲಿ ಅಡ್ಯಾರ್‌ ಗಾರ್ಡನ್‌ನಲ್ಲಿ ನಡೆದ ಯಕ್ಷಧ್ರುವ ಪಟ್ಲ ದಶಮ ಸಂಭ್ರಮ 2025 ರಾಷ್ಟ್ರೀಯ ಕಲಾ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಸಂಜೆ, ಯಕ್ಷಧ್ರುವ ಪಟ್ಲ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಭಾಗವತ ಕುರಿಯ ಗಣಪತಿ ಶಾಸ್ತ್ರಿ ಅವರಿಗೆ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಗಣಪತಿ ಶಾಸ್ತ್ರಿ, ಕುರಿಯ ಮನೆತನಕ್ಕೆ ದೊರೆತ ಸನ್ಮಾನ ಇದಾಗಿದೆ. ಪಟ್ಲ ಸತೀಶ್‌ ಶೆಟ್ಟಿ ಅವರು ಮಾಡುತ್ತಿರುವ ಕಾರ್ಯ ಅದ್ವಿತೀಯ ಎಂದು ಹೇಳಿದರು.

ವಿಶೇಷ ಸಮ್ಮಾನ ಸ್ವೀಕರಿಸಿ ಮಾತನಾಡಿದ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಗೌರವಾಧ್ಯಕ್ಷ ಡಾ. ಸದಾಶಿವ ಶೆಟ್ಟಿ ಕನ್ಯಾನ, ಯಕ್ಷಗಾನದಲ್ಲಿ ಪ್ರಖ್ಯಾತ ಭಾಗವತರಾಗಿ, ಯಕ್ಷಗಾನ ಕ್ಷೇತ್ರದ ಸೇವೆ ನಡೆಸುತ್ತಿರುವ ಪಟ್ಲ ಸತೀಶ್‌ ಶೆಟ್ಟಿ ಅವರ ಸಾಧನೆ ಅಮೂಲ್ಯವಾದದ್ದು ಎಂದರು.

ಪಟ್ಲ ಸತೀಶ್‌ ಶೆಟ್ಟಿ ಹಾಗೂ ನಿರ್ಮಿತಾ ಶೆಟ್ಟಿ ದಂಪತಿಯನ್ನು ಸನ್ಮಾನಿಸಲಾಯಿತು.

ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಕಟೀಲಿನ ಶ್ರೀ ಲಕ್ಷ್ಮೀನಾರಾಯಣ ಅಸ್ರಣ್ಣ, ಹೊಟೇಲ್‌ ಕಾಶಿ ಪ್ಯಾಲೇಸ್ ಹಾಗೂ ಶಶಿ ಕೇಟರರ್ಸ್‌ನ ಮಾಲೀಕ ಶಶಿಧರ ಬಿ.ಶೆಟ್ಟಿ ಬರೋಡ, ಟ್ರಸ್ಟ್‌ ಅಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್‌, ಕೋಶಾಧಿಕಾರಿ ಸಿಎ ಸುದೇಶ್‌ ಕುಮಾರ್‌ ರೈ, ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಚಿತ್ರನಟ ರಾಜ್‌ ಬಿ.ಶೆಟ್ಟಿ, ಶಾಸಕ ಸುನಿಲ್‌ ಕುಮಾರ್‌, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ, ರೋಹನ್‌ ಕಾರ್ಪೊರೇಷನ್‌ ರೋಹನ್‌ ಮೊಂತೆರೊ, ಪ್ರಮುಖರಾದ ಪ್ರವೀಣ್‌ ಶೆಟ್ಟಿ, ಉಳ್ತೂರು ಮೋಹನ್‌ದಾಸ್‌ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಹೇಮಂತ್‌ ಶೆಟ್ಟಿ, ದುರ್ಗಾಪ್ರಕಾಶ್‌ ರಾವ್‌, ರಾಜೀವ್‌ ಪೂಜಾರಿ ಕೈಕಂಬ, ಪ್ರದೀಪ್‌ ಆಳ್ವ ಕದ್ರಿ, ದಯಾನಂದ ಶೆಟ್ಟಿ, ಪ್ರೊ.ಎಂ.ಎಲ್‌. ಸಾಮಗ ಮತ್ತಿತರರಿದ್ದರು.

...............ಸಮಾಜಸೇವೆಗೆ ಪಟ್ಲ ಫೌಡೇಶನ್‌ ಉತ್ತಮ ಉದಾಹರಣೆ: ಎಡನೀರುಶ್ರೀಒಂದು ಸಂಘಟನೆ ಮನಸ್ಸು ಮಾಡಿದಲ್ಲಿ 10 ವರ್ಷಗಳಲ್ಲಿ ಸಮಾಜಕ್ಕೆ ಯಾವ ರೀತಿ ಸೇವೆ ಸಲ್ಲಿಸಬಹುದು ಎನ್ನುವುದಕ್ಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಉತ್ತಮ ಉದಾಹರಣೆ ಎಂದು ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದ್ದಾರೆ.ಅಡ್ಯಾರ್‌ ಗಾರ್ಡನ್‌ನಲ್ಲಿ ಭಾನುವಾರ ಪೂರ್ವಾಹ್ನ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ‘ದಶಮ ಸಂಭ್ರಮ’ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.ಯಕ್ಷಧ್ರುವ ಪಟ್ಲ ಫೌಂಡೇಶನ್ ಗೌರವಾಧ್ಯಕ್ಷ, ಹೇರಂಭ ಇಂಡಸ್ಟ್ರಿಸ್ ಸಿಎಂಡಿ ಡಾ. ಕನ್ಯಾನ ಸದಾಶಿವ ಶೆಟ್ಟಿ ಮಾತನಾಡಿ, ಯಕ್ಷಗಾನ ನಮ್ಮ ತುಳುನಾಡಿನ ಶ್ರೇಷ್ಠ ಕಲೆ. ಇಲ್ಲಿ ಹುಟ್ಟಿರುವುದೇ ನಮ್ಮ ಭಾಗ್ಯ. ಪರಿಪೂರ್ಣವಾದ ಕಲೆಯನ್ನು ಬೇರೆ ಯಾವ ಪ್ರದೇಶದಲ್ಲೂ ನಾನು ನೋಡಿಲ್ಲ ಎಂದರು.

15 ಕೋಟಿ ರು.ಗೂ ಅಧಿಕ ಸಂಗ್ರಹ:ದಶಮಾನೋತ್ಸವ ಸಂಭ್ರಮದ ಅಧ್ಯಕ್ಷ ಬರೋಡಾ ಶಶಿಧರ್ ಶೆಟ್ಟಿ ಮಾತನಾಡಿ, ನಾವು ದಶಮಾನೋತ್ಸವ ಸಂಭ್ರಮಕ್ಕೆ 10 ಕೋಟಿ ರು. ಒಟ್ಟುಗೂಡಿಸುವ ಉದ್ದೇಶ ಹೊಂದಿದ್ದೆವು, ಆದರೆ ನಿರೀಕ್ಷೆಗೂ ಮೀರಿ 15 ಕೋಟಿ ರು.ಗೂ ಹೆಚ್ಚು ಸಂಗ್ರಹವಾಗಿದೆ. ನಮ್ಮದು ಸಾವಿರದ ಕನಸು, ಪಟ್ಲ ಫೌಂಡೇಶನ್ ನ ಮುಂದಿನ ಎಲ್ಲ ಕಾರ್ಯಕ್ರಮಗಳು ನಿರ್ವಿಘ್ನವಾಗಿ ನೆರವೇರಲಿ ಎಂದರು.

ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಉದಯ ಕುಮಾರ್ ಶೆಟ್ಟಿ ಮುನಿಯಾಲ್, ಉದ್ಯಮಿ ಕಟೀಲು ದಿವಾಕರ್ ರಾವ್, ಸಂಜೀವಿನಿ ಆಸ್ಪತ್ರೆ ಮುಖ್ಯಸ್ಥ ಡಾ.ಸುರೇಶ್ ರಾವ್ ಕಟೀಲು, ಫೌಂಡೇಶನ್ ಮಹಾದಾನಿ ಎಂ.ಎಲ್. ಸಾಮಗ ಉಡುಪಿ, ನಿಟ್ಟೆ ಯುನಿವರ್ಸಿಟಿಯ ಸತೀಶ್ ಭಂಡಾರಿ, ಕನ್ಯಾನ ರಘುರಾಮ ಶೆಟ್ಟಿ, ಸಿಎ ಸುಭಾಶ್ಚಂದ್ರ ಬೆಹರಿನ್, ಶ್ಯಾಮ್ ಪ್ರಸಾದ್, ಪಳ್ಳಿ ಕಿಶನ್ ಹೆಗ್ಡೆ, ಸಿಎ ಸುರೇಂದ್ರ ಶೆಟ್ಟಿ, ಪೆರ್ಮುದೆ ಅಶೋಕ್ ಶೆಟ್ಟಿ, ಪ್ರೊಫೆಸರ್ ಡಾ.ಮನು ರಾವ್, ಕೆರೆಕಟ್ಟೆ ಉದಯ ಶೆಟ್ಟಿ, ಪ್ರೀತಮ್ ಶೆಟ್ಟಿ, ಕೇಂದ್ರೀಯ ಸಮಿತಿ ಸಂಘಟನಾ ಕಾರ್ಯದರ್ಶಿ ಬಾಳ ಜಗನ್ನಾಥ ಶೆಟ್ಟಿ, ಪ್ರದೀಪ್ ಆಳ್ವ, ಕದ್ರಿ, ಕರುಣಾಕರ ರೈ ದೇರ್ಲ, ಚೆಲ್ಲಡ್ಕ ರಾಧಾಕೃಷ್ಣ ಶೆಟ್ಟಿ, ಸರಪಾಡಿ ಅಶೋಕ್ ಶೆಟ್ಟಿ, ದುರ್ಗಾಪ್ರಸಾದ್, ನಾಗಭೂಷಣ್, ಸವಣೂರು ಸೀತಾರಾಮ್ ರೈ, ಲಯನ್ ತಾರಾನಾಥ್ ಶೆಟ್ಟಿ ಬೋಳಾರ್, ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ ಮತ್ತಿತರರು ಇದ್ದರು.

ಕುಣಿತ ಭಜನಾ ಸ್ಪರ್ಧೆಯನ್ನು ಒಡಿಯೂರು ಕ್ಷೇತ್ರದ ಮಾತಾನಂದಮಯಿ ಉದ್ಘಾಟಿಸಿದರು. ಯಕ್ಷಗಾನ ಕ್ಷೇತ್ರದ ಸಾಧಕಿ ಆರ್ಷಿಯ ತನು ವಿಟ್ಲರನ್ನು ಅತಿಥಿಗಳು ಸನ್ಮಾನಿಸಿದರು.

ಕದ್ರಿ ನವನೀತ್ ಶೆಟ್ಟಿ, ಪೃಥ್ವಿ ಕಾರಿಂಜ ನಿರೂಪಿಸಿದರು. ರವಿಚಂದ್ರ ಶೆಟ್ಟಿ ವಂದಿಸಿದರು.

ದಶಮ ಸಂಭ್ರಮ ಅಂಗವಾಗಿ ಎಂಟು ತಂಡಗಳಿಂದ ತೆಂಕು ಮತ್ತು ಬಡಗು ತಿಟ್ಟಿನ ಯುವ ಕಲಾವಿದರಿಂದ ಯಕ್ಷಗಾನ ಸ್ಪರ್ಧೆ ನಡೆಯಿತು. ವೈದ್ಯಕೀಯ, ಆರ್ಥಿಕ ನೆರವು, ಉಚಿತ ವೈದ್ಯಕೀಯ ತಪಾಸಣೆ, ಕಣ್ಣಿನ ತಪಾಸಣೆ, ಕನ್ನಡಕ ಹಾಗೂ ಔಷಧ ವಿತರಣೆ ನೆರವೇರಿತು. ಯಕ್ಷಗಾನ, ನಾಟಕ ರಂಗಭೂಮಿ, ಕಂಬಳ ಮತ್ತು ದೈವಾರಾಧನೆ ಕ್ಷೇತ್ರದ ಕಲಾವಿದರಿಗೆ ಅಪಘಾತ ವಿಮಾ ಯೋಜನೆ ನೋಂದಣಿ ಮಾಡಲಾಯಿತು.

...................

ಇನ್ನಷ್ಟು ಸಮಾಜಮುಖಿ ಸೇವೆ: ಪಟ್ಲ ಸತೀಶ್‌ ಶೆಟ್ಟಿಪಟ್ಲ ಫೌಂಡೇಶನ್ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಪ್ರಾಸ್ತಾವಿಕದಲ್ಲಿ, ಇಂದು ಮೂರು ವೇದಿಕೆಗಳಲ್ಲಿ ನಿರಂತರ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮ ಇಷ್ಟೊಂದು ಯಶಸ್ವಿಯಾಗಿ ನಡೆಯಬೇಕಾದರೆ ಕೇಂದ್ರೀಯ ಸಮಿತಿಯ ಪ್ರತೀ ಪದಾಧಿಕಾರಿಗಳು, ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರ ಶ್ರಮವಿದೆ. ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಪಟ್ಲ ಫೌಂಡೇಶನ್ ದಾನಿಗಳ ನೆರವಿನಿಂದ ಇನ್ನಷ್ಟು ಸಮಾಜಮುಖಿಯಾಗಿ ಸೇವೆ ಸಲ್ಲಿಸಲು ಎಲ್ಲರ ಒಗ್ಗಟ್ಟಿನಿಂದ ಮಾತ್ರ ಸಾಧ್ಯ ಎಂದರು.

---------------ಐಕಳ ಹರೀಶ್‌ ಶೆಟ್ಟಿ ದಂಪತಿಗೆ ಮಹಾಪೋಷಕ ಪ್ರಶಸ್ತಿ ಪ್ರದಾನಮೂರನೇ ಸಭಾ ಕಾರ್ಯಕ್ರಮವನ್ನು ಎಂಆರ್‌ಜಿ ಗ್ರೂಪ್ ಸಿಎಂಡಿ ಡಾ.ಕೆ.ಪ್ರಕಾಶ್ ಶೆಟ್ಟಿ ಉದ್ಘಾಟಿಸಿದರು.2025ನೇ ಸಾಲಿನ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿಯನ್ನು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ-ಚಂದ್ರಿಕಾ ಹರೀಶ್ ಶೆಟ್ಟಿ ದಂಪತಿಗಳಿಗೆ ಪ್ರದಾನ ಮಾಡಲಾಯಿತು.ಎರಡನೇ ಸಭಾ ಕಾರ್ಯಕ್ರಮವನ್ನು ನಾಡೋಜ ಜಿ.ಶಂಕರ್ ಉದ್ಘಾಟಿಸಿ, ಈಗಿನ ಪೀಳಿಗೆ ಯಕ್ಷಗಾನ ಕಲೆಯ ಬಗ್ಗೆ ಅಷ್ಟಾಗಿ ಅಭಿರುಚಿಯನ್ನು ಹೊಂದಿಲ್ಲ. ಆದರೆ ಪಟ್ಲರ ಕಾರ್ಯ ಸಾಧನೆಯಿಂದ ಯಕ್ಷಗಾನ ಇಂದು ಯುವ ಮನಸುಗಳಿಗೂ ಆಪ್ತವಾಗಿದೆ. ಉಡುಪಿಯಲ್ಲೂ ನಮ್ಮ ಟ್ರಸ್ಟ್ ಪಟ್ಲರ ಜೊತೆಗೆ ಕೈಜೋಡಿಸಲಿದೆ ಎಂದರು.ಕಲಾ ಗೌರವ ಪ್ರಶಸ್ತಿ ಪ್ರದಾನ:ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾ ಗೌರವ-2025 ಅನ್ನು ಅಲಂಗಾರು ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಈಶ್ವರ ಭಟ್, ಮಂಗಳೂರು ವಿವಿ ಮಾಜಿ ಕುಲಪತಿ ಪ್ರೊ. ಬಿ.ಎ. ವಿವೇಕ್ ರೈ, ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ನಿವೃತ್ತ ಯೋಧ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ, ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ ಸುಳ್ಯ ಇದರ ಜೀವನ್ ರಾಮ್ ಸುಳ್ಯ ಅವರಿಗೆ ಪ್ರದಾನ ಮಾಡಲಾಯಿತು.ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಆದಿತ್ಯ ಕಿಮ್ಮನೆ, ಮಂಗಳೂರು ಕುಲಪತಿ ಪ್ರೊ.ಕೆ.ಎಲ್.ಧರ್ಮ, ರಾಜೇಶ್ ಕಾರಂತ್, ಮುನಿಯಾಲ್ ಉದಯ ಕುಮಾರ್ ಶೆಟ್ಟಿ, ದಶಮ ಸಂಭ್ರಮದ ಅಧ್ಯಕ್ಷ ಶಶಿಧರ್ ಶೆಟ್ಟಿ ಬರೋಡ ಇದ್ದರು.