ಯಕ್ಷಗಾನ ಸಂಸ್ಕೃತಿ ಬೆಸೆಯಲು ಸಹಕಾರಿ: ಶಾಸಕ ಕೊಡ್ಗಿ

| Published : Dec 25 2024, 12:48 AM IST

ಸಾರಾಂಶ

ಬಿದ್ಕಲ್‌ಕಟ್ಟೆಯ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ಉಡುಪಿ, ಪ್ರದರ್ಶನ ಸಂಘಟನಾ ಸಮಿತಿ ಬಿದ್ಕಲ್ ಕಟ್ಟೆ ಸಹಯೋಗದಲ್ಲಿ ಆಯೋಜಿಸಲಾದ, ಕಿಶೋರ ಯಕ್ಷಗಾನ ಸಂಭ್ರಮದ ಸಮಾರೋಪ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಕುಂದಾಪುರ

ಯಕ್ಷಗಾನ ಕಲಿಕೆಯು ವಿದ್ಯಾರ್ಥಿಗಳನ್ನು ಅವರ ಸಂಸ್ಕೃತಿಯಲ್ಲಿ ಬೆಸೆಯಲು ಸಹಕಾರಿಯಾಗಿದೆ ಎಂದು ಕುಂದಾಪುರ ಶಾಸಕ ಹಾಗೂ ಪ್ರದರ್ಶನ ಸಂಘಟನಾ ಸಮಿತಿಯ ಗೌರವ ಅಧ್ಯಕ್ಷ ಎ. ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಬಿದ್ಕಲ್‌ಕಟ್ಟೆಯ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಯಕ್ಷಶಿಕ್ಷಣ ಟ್ರಸ್ಟ್ ಉಡುಪಿ, ಪ್ರದರ್ಶನ ಸಂಘಟನಾ ಸಮಿತಿ ಬಿದ್ಕಲ್ ಕಟ್ಟೆ ಸಹಯೋಗದಲ್ಲಿ ಆಯೋಜಿಸಲಾದ, ಕಿಶೋರ ಯಕ್ಷಗಾನ ಸಂಭ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದೇ ವೇಳೆ ಸ್ವಯಂ ಸೇವಕರಾಗಿ ಗುರುತಿಸಿಕೊಂಡಿರುವ ರಂಜಿತ್ ಮೊಗವೀರ ಅವರನ್ನು ಸನ್ಮಾನಿಸಲಾಯಿತು. ನಿರಂತರ ನಾಲ್ಕು ದಿವಸಗಳ ಕಾಲ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಆಯೋಜಿಸಲಾದ ಯಕ್ಷಗಾನದ ವಿಚಾರದ ಬಗ್ಗೆ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಎಸ್.ವಿ. ಭಟ್, ವಿ.ಜಿ. ಶೆಟ್ಟಿ, ಸದಸ್ಯರಾದ ಯು.ಎಸ್. ರಾಜಗೋಪಾಲ ಆಚಾರ್ಯ, ಯಕ್ಷಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ಮುರಲಿ ಕಡೆಕಾರ್, ಬಿದ್ಕಲ್ ಕಟ್ಟೆ ಪ್ರದರ್ಶನ ಸಂಘಟನಾ ಸಮಿತಿ ಅಧ್ಯಕ್ಷ ಪ್ರಶಾಂತ್ ಎಂಜಿನಿಯರ್ ಮೊಳಹಳ್ಳಿ, ಸಂಘಟನಾ ಸಮಿತಿ ಸದಸ್ಯರಾದ ದಯಾನಂದ ಬಾಸ್ ಬೈಲು, ದೀನ್‌ಪಾಲ್ ಶೆಟ್ಟಿ ಮೊಳಹಳ್ಳಿ, ಜಯಪ್ರಕಾಶ್ ಶೆಟ್ಟಿ ಚಿಟ್ಟೆಬೈಲು ಉಪಸ್ಥಿತರಿದ್ದರು.ಪ್ರದರ್ಶನ ಸಂಘಟನಾ ಸಮಿತಿಯಿಂದ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟ ಗ್ರಾಮ ಪಂಚಾಯಿತಿಯವರಿಗೆ ಕೃತಜ್ಞತೆ ಸಲ್ಲಿಸಲಾಯಿತು.ನಂತರ ಪ್ರಸಾದ್ ಕುಮಾರ್ ಮೊಗೆಬೆಟ್ಟು, ಮಂಜುನಾಥ್ ಕುಲಾಲ್ ಐರೋಡಿ ಇವರ ಸಂಯೋಜನೆಯಲ್ಲಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಡಾಡಿ ಮತ್ಯಾಡಿ ವಿದ್ಯಾರ್ಥಿಗಳಿಂದ ಕುಶ ಲವ ಕಾಳಗ, ಸರ್ಕಾರಿ ಪದವಿ ಪೂರ್ವ ಕಾಲೇಜು ಬಿದ್ಕಲ್ ಕಟ್ಟೆ ವಿದ್ಯಾರ್ಥಿಗಳಿಂದ ಯಕ್ಷೋತ್ತಮ ಕಾಳಗಘೆಂವೆಂಬ ಪೌರಾಣಿಕ ಯಕ್ಷಗಾನ ನೆರವೇರಿತು.