ರಂಗಕಲೆಗೆ ವಿಶೇಷ ಶಕ್ತಿ, ಮೌಲ್ಯ ತುಂಬಿರುವುದು ಯಕ್ಷಗಾನ

| Published : Sep 21 2024, 01:47 AM IST

ಸಾರಾಂಶ

ನೂರಾರು ವರ್ಷಗಳಿಂದ ನಾಡಿನ ರಂಗಕಲೆಗೆ ವಿಶೇಷ ಶಕ್ತಿ ಹಾಗೂ ಮೌಲ್ಯವನ್ನು ತುಂಬಿರುವುದು ಯಕ್ಷಗಾನ ಕಲೆ. ಕೇವಲ ಕರ್ನಾಟಕಕ್ಕೆ ಮಾತ್ರ ಮೀಸಲಾಗಿದ್ದ ಯಕ್ಷಗಾನ ಇಂದು ಅಂತರಾಷ್ಟ್ರೀಯ ಮಟ್ಟದ ಮನ್ನಣೆ ಪಡೆದಿದೆ. ಯಕ್ಷಗಾನ ಕಲೆ ಪ್ರತಿಯೊಬ್ಬರ ಮನಸ್ಸನ್ನು ಗೆಲ್ಲುವುದರಲ್ಲಿ ಯಶಸ್ವಿಯಾಗಿದೆ ಎಂದು ಹೋಟೆಲ್ ಮತ್ತು ಬೇಕರಿ ಮಾಲೀಕರ ಸಂಘದ ಗೌರವಾಧ್ಯಕ್ಷ, ನಿವೃತ್ತ ಬ್ಯಾಂಕ್ ಅಧಿಕಾರಿ ಚಂದ್ರಶೇಖರಶೆಟ್ಟಿ ತಿಳಿಸಿದರು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ಅವರು, ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ವಿಶ್ವ ಹಿಂದೂಪರಿಷತ್ ಮತ್ತು ಭಜರಂಗದಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಹಿಂದೂಮಹಾಗಣಪತಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕರ್ನಾಟಕದ ಕೆಲವೇ ಜಿಲ್ಲೆಗಳಲ್ಲಿ ಕಾರ್ಯಚಟುವಟಿಕೆ ನಡೆಸುತ್ತಿದ್ದ ಯಕ್ಷಗಾನ, ಈಗ ವಿದೇಶದಲ್ಲೂ ಸಹ ಯಕ್ಷಗಾನ ಕಲೆ ತನ್ನ ಜೀವಂತಿಯನ್ನು ಪ್ರದರ್ಶಿಸಿದೆ. ಸಾವಿರಾರು ಕುಟುಂಬಗಳು ಯಕ್ಷಗಾನ ಕಲೆಯ ವೈವಿಧ್ಯತೆಯನ್ನು ಸಾರಲು ಸಾಕಷ್ಟು ಪರಿಶ್ರಮವಹಿಸುತ್ತಿವೆ. ನಗರದ ಹಿಂದೂ ಮಹಾಗಣಪತಿ ಉತ್ಸವ ಸಮಿತಿ ಪ್ರತಿವರ್ಷವೂ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಯಕ್ಷಗಾನ ಕಲೆಗೆ ವಿಶೇಷ ಗೌರವ ನೀಡುತ್ತಿರುವುದು ಸಂತಸ ತಂದಿದೆ ಎಂದರು.

ಯಕ್ಷಗಾನ ಕಲಾವಿದರಾದ ಉಪ್ಪುಂದ, ನಾಗೇಂದ್ರ, ವಿಶ್ವನಾಥ ಪೂಜಾರಿ, ನಂದೀಶ್‌ ಮೊಗವೀರ, ದಿನಕರ್‌ ಕುಂದೂರ್ ಮುಂತಾದವರ ಪಾತ್ರಗಳು ಜನರ ಗಮನಸೆಳೆದವು. ಯಕ್ಷಗಾನ ಆರಂಭದಿಂದ ಅಂತ್ಯದವರೆಗೆ ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಚಪ್ಪಾಳೆ ಮೂಲಕ ಹರ್ಷ ವ್ಯಕ್ತಪಡಿಸಿದರು.

ಈ ವೇಳೆ ಮಹಾಗಣಪತಿ ಯಕ್ಷಗಾನಮಂಡಳಿ ನಡೂರು ಮಂದಾರ್ತಿ ಉಡುಪಿ ಜಿಲ್ಲೆ ಸದಾಶಿವ ಅಮಿನ್ ಮತ್ತು ಅವರ ತಂಡ ನಡೆಸಿಕೊಟ್ಟ ಮಹಾಶಕ್ತಿ ಶ್ರೀ ವೀರಭದ್ರಸ್ವಾಮಿ ಯಕ್ಷಗಾನ ಪ್ರದರ್ಶನದಕ್ಕೆ ಅಭಿನಂದನೆ ಸಲ್ಲಿಸಲಾಯಿತು.

ಹೋಟೆಲ್ ಮತ್ತು ಬೇಕರಿ ಮಾಲೀಕರ ಸಂಘದ ಅಧ್ಯಕ್ಷ ಗುರುನಾಥ ಭಟ್, ಉಪಾಧ್ಯಕ್ಷ ಲೋಕಮಾನ್ಯ, ಕಾರ್ಯದರ್ಶಿ ಜಯಪ್ರಕಾಶ್‌ ಶೆಟ್ಟಿ, ಗುರುರಾಜ್‌ ಭಟ್, ದಿನೇಶ್, ವಿಜಯಪ್ರಕಾಶ್‌ ಶೆಟ್ಟಿ, ಕಿರಣ್‌ ಶೆಟ್ಟಿ, ವಾಸುದೇವ, ಪ್ರಕಾಶ್‌ ಶೆಟ್ಟಿ, ಕಿಶೋರ್‌ ಶೆಟ್ಟಿ, ಶ್ರೀನಾಥ ಭಟ್, ಹರೀಶ್, ವಿಜಯಪ್ರಸಾದ್, ಉತ್ಸವ ಸಮಿತಿ ಅಧ್ಯಕ್ಷ ಅನಂತರಾಮ್‌ಗೌತಮ್, ಪ್ರಧಾನ ಕಾರ್ಯದರ್ಶಿ ಕೆ.ಎಂ.ಯತೀಶ್, ಕೋಶಾಧ್ಯಕ್ಷ ನಾಗೇಶ್, ಡಾ.ಡಿ.ಎನ್.ಮಂಜುನಾಥ, ಲಕ್ಷಿö್ಮಶ್ರೀವತ್ಸ, ಮಧುಮತಿ, ಮಾತೃಶ್ರೀಎನ್.ಮಂಜುನಾಥ, ಸೋಮಶೇಖರಮಂಡಿಮಠ, ಎಂ.ಸತ್ಯನಾರಾಯಣರಾವ್ ಮುಂತಾದವರು ಉಪಸ್ಥಿತರಿದ್ದರು.