ಸಾರಾಂಶ
ಸಾಧಕರಾದ ಸೌಂದರ್ಯ ರಮೇಶ್, ಪ್ರಭಾಕರ ಪೂಜಾರಿ, ಉದಯಕುಮಾರ್ ಅವರಿಗೆ ಯಕ್ಷ ಕಿರೀಟ ಇಟ್ಟು ಯಕ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಕ್ಷಗಾನ ಸೇರಿ ವಿವಿಧ ಕ್ಷೇತ್ರದ ಕಲಾವಿದರನ್ನು ಸನ್ಮಾನಿಸಲಾಯಿತು
ಕನ್ನಡಪ್ರಭವಾರ್ತೆ ಮೂಲ್ಕಿ
ಯಕ್ಷಗಾನ ತುಳುನಾಡಿನ ಬಹು ದೊಡ್ಡ ಕಲೆಯಾಗಿದ್ದು ಕಲೆಗೆ ಪ್ರೋತ್ಸಾಹ ಕೊಟ್ಟು ಉಳಿಸುವ ಕೆಲಸ ಆಗಬೇಕು. ಸೀತಾರಾಮ್ ಕುಮಾರ್ ಕಟೀಲ್ ಉತ್ತಮ ಕಲಾವಿದನಾಗಿದ್ದು ಅವರ 50 ವರ್ಷದ ಕಲಾ ಸಾಧನೆಗೆ ಪ್ರೋತ್ಸಾಹ ಸಿಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಹೇಳಿದರು.ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜರುಗಿದ ಯಕ್ಷಗಾನ ರಂಗದಲ್ಲಿ 50 ವರ್ಷವನ್ನು ಪೂರೈಸಿರುವ ಕಲಾವಿದ ಸೀತಾರಾಮ್ ಕುಮಾರ್ ಕಟೀಲು ಅವರ ‘ಕಟೀಲ್ ಕನಕ ಸಂಭ್ರಮ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಲಕ್ಷ್ಮಿ ನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿ ಯಕ್ಷಗಾನವು ಮನರಂಜನೆಯ ಜೊತೆಗೆ ಸಂಸ್ಕೃತಿಯನ್ನು ಕಲಿಸುವ ಕಲೆ ಎಂದು ಹೇಳಿದರು.ಸಾಧಕರಾದ ಸೌಂದರ್ಯ ರಮೇಶ್, ಪ್ರಭಾಕರ ಪೂಜಾರಿ, ಉದಯಕುಮಾರ್ ಅವರಿಗೆ ಯಕ್ಷ ಕಿರೀಟ ಇಟ್ಟು ಯಕ್ಷ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಯಕ್ಷಗಾನ ಸೇರಿ ವಿವಿಧ ಕ್ಷೇತ್ರದ ಕಲಾವಿದರನ್ನು ಸನ್ಮಾನಿಸಲಾಯಿತು.
ಪಾವಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್, ಯಕ್ಷಗಾನ ವಿದ್ವಾಂಸರಾದ ಪ್ರಭಾಕರ ಜೋಷಿ, ಕಿನ್ನಿಗೋಳಿಯ ಯುಗಪುರುಷದ ಕೆ ಭುವನಾಭಿರಾಮ ಉಡುಪ, ಡಾ.ಗಣೇಶ್ ಅಮೀನ್ ಸಂಕಮಾರ್, ಉದ್ಯಮಿ ಸೌಂದರ್ಯ ರಮೇಶ್, ಸಾಹಿತಿ ವಿಜಯಲಕ್ಷ್ಮೀ ಶೆಟ್ಟಿ ಕದ್ರಿ, ಉದ್ಯಮಿ ಪ್ರಭಾಕರ ಪೂಜಾರಿ, ಮೋಹನ್ ಪೂಜಾರಿ, ಹಳೆಯಂಗಡಿ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ, ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಗುರುರಾಜ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಪ್ರಕಾಶ್ ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು.