ಶನಿವಾರ ಪಟ್ಟಣ ಪಂಚಾಯ್ತಿಯಲ್ಲಿ ಆಡಳತಾಧಿಕಾರಿಯೂ ಆಗಿರುವ ತಹಸೀಲ್ದಾರ್, ಎಸ್.ಎಲ್. ನಯನಾ ಅವರು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರ ಸಮ್ಮುಖದಲ್ಲಿ 2026-27ನೇ ಸಾಲಿನ ಬಜೆಟ್ ಮಂಡಿಸಿದರು.
ಶಾಸಕ ಕೃಷ್ಣಮೂರ್ತಿ ಸಮ್ಮುಖದಲ್ಲಿ ತಹಸೀಲ್ದಾರ್ ನಯನಾ ಮಂಡನೆ
---ಕನ್ನಡಪ್ರಭ ವಾರ್ತೆ ಯಳಂದೂರುಶನಿವಾರ ಪಟ್ಟಣ ಪಂಚಾಯ್ತಿಯಲ್ಲಿ ಆಡಳತಾಧಿಕಾರಿಯೂ ಆಗಿರುವ ತಹಸೀಲ್ದಾರ್, ಎಸ್.ಎಲ್. ನಯನಾ ಅವರು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರ ಸಮ್ಮುಖದಲ್ಲಿ 2026-27ನೇ ಸಾಲಿನ ಬಜೆಟ್ ಮಂಡಿಸಿದರು.ಪಟ್ಟಣ ಪಂಚಾಯ್ತಿಯ ಸ್ವಂತ ಸಂಪನ್ಮೂಲಗಳಿಂದ 4,44,05,288 ರು.ಗಳ ನಿರೀಕ್ಷಿತ ಆದಾಯವನ್ನು, ಸರ್ಕಾರದಿಂದ 1,59,05,000 ರು.ಗಳ ನಿರೀಕ್ಷಿತ ಅನುದಾನ ಹಾಗೂ ಅಸಾಧಾರಣ ಸ್ವೀಕೃತಿಗಳಿಂದ 2,76,33,492 ರು.ಗಳು ಸೇರಿ ಒಟ್ಟು 8,79,33,780 ರು.ಗಳು. ಪಟ್ಟಣ ಪಂಚಾಯ್ತಿ ಸ್ಧಳೀಯ ಸಂಪನ್ಮೂಲಗಳಿಂದ ಅಂದಾಜು 5,35,92000 ರು.ಗಳನ್ನು ಹಾಗೂ ಬಂಡವಾಳ ಪಾವತಿಗಳಿಂದ 4,56,50,000 ರು.ಗಳು ಅಸಾಧಾರಣ ಪಾವತಿಗಳಿಂದ 3,89,81,493 ರು.ಗಳು ಒಟ್ಟಾರೆ 13,82,23,493 ರು.ಗಳು ಇದರಲ್ಲಿ ಸೇರಿವೆ.ಆಸ್ತಿ ತೆರಿಗೆ, ದಂಡ, ಕರ ಸಂಗ್ರಹಾರ ಶುಲ್ಕಗಳು, ಘನತ್ಯಾಜ್ಯ ನಿರ್ವಹಣಾ ಕರ, ಅಭಿವೃದ್ಧಿ ಶುಲ್ಕ, ಕಟ್ಟಡ ಪರವಾನಿಗೆ, ಉದ್ದಿಮೆ ಪರವಾನಗಿ, ಅಂಗಡಿ ಬಾಡಿಗೆ, ಶುದ್ಧ ಕುಡಿಯುವ ನೀರಿನ ಘಟಕದ ಶುಲ್ಕ, ನೀರು ಸರಬರಾಜು ಮತ್ತು ಒಳಚರಂಡಿ ಶುಲ್ಕ, ಸಾರ್ವಜನಿಕ ಶೌಚಾಲಗಳ ಬಾಡಿಗೆ, ಖಾತೆ, ಜಾಹೀರಾತುಗಳ ಬಸ್ ನಿಲ್ದಾಣದ ಹರಾಜಿನಿಂದ ಆದಾಯವನ್ನು ನಿರೀಕ್ಷಿಸಲಾಗಿದೆ.ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ನೌಕರರ ವೇತನ, ಎಸ್‌ಎಫ್‌ಸಿ ಯೋಜನೆಯಡಿ ಅನುದಾನ, ಎಸ್‌ಎಫ್‌ಸಿ ಮುಕ್ತನಿಧಿ, ಕುಡಿಯುವ ನೀರಿನ ಅನುದಾನ, ಕೇಂದ್ರದ 16ನೇ ಹಣಕಾಸು ಯೋಜನೆ ಅನುದಾನ, ಅನುಸೂಚಿತ ಜಾತಿ, ಬುಡಕಟ್ಟು ಉಪಯೋಜನೆ ಅನುದಾನ, ನಲ್ಮ್ ಯೋಜನೆ, ಎಸ್‌ಎಫ್‌ಸಿ ವಿಶೇಷ ಅನುದಾನ, ಸ್ವಚ್ಛ ಭಾರತ ಅಭಿಯಾನ, ಜೀವ ವೈವಿಧ್ಯತೆ ಅನುದಾನವನ್ನು ನಿರೀಕ್ಷಿಸಲಾಗಿದೆ.ಪಟ್ಟಣದ ರಸ್ತೆ, ಕಾಲುದಾರಿ ಚರಂಡಿ ಒಳಚಂಡಿ ನಿರ್ಮಾಣ ಅಭಿವೃದ್ಧಿ, ಬೀದಿ ದೀಪಗಳ ಅಳವಡಿಕೆ, ದುರಸ್ತಿ, ಅಧುನಿಕ ಕಸಾಯಿಖಾನೆ ಮತ್ತು ಮಾರುಕಟ್ಟೆ ನಿರ್ಮಾಣ, ಕಟ್ಟಡಗಳ ದುರಸ್ತಿ, ನಿರ್ಮಾಣ, ಸ್ವಚ್ಛ ಭಾರತ ಕಾಮಗಾರಿಗಳು, ಘನತ್ಯಾಜ್ಯ ವಿಲೇವಾರಿ ಘಟಕ, ವಾಹನಗಳ ಇಂಧನ, ಯಂತ್ರೋಪಕರಣ ಖರೀದಿ, ದಿನಗೂಲಿ, ಗುತ್ತಿಗೆ, ಹೊರಗುತ್ತಿಗೆ ನೀರು ಸಬರಾಜು, ನೌಕರರ, ಕಂಪ್ಯೂಟರ್, ಡಾಟಾ ಎಂಟ್ರಿ ಆಪರೇಟರ್‌ಗಳು, ಶೌಚಗೃಹ ಅಭಿವೃದ್ಧಿ, ನಿರ್ವಹಣೆ, ಕಚೇರಿ ನಿರ್ವಹಣೆ, ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿ, ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮ, ವಿಶೇಷ ಚೇತನರ ಅಭಿವೃದ್ಧಿ, ಕ್ರೀಡಾ ಯುವಜನ ಸೇವಾ ಚಟುವಟಿಕೆಗಳ ಪ್ರೋತ್ಸಾಹಧನ, ಪಶುಸಂಗೋಪನೆ, ಕಚೇರಿ ಅಧಿಕಾರಿ ಸಿಬ್ಬಂದಿ ವೇತನಗಳಿಗೆ ವೆಚ್ಚ ಮಾಡಲು ಉದ್ದೇಶಿಸಲಾಗಿದೆ.ಇದರೊಂದಿಗೆ 10,40 ಲಕ್ಷ ರು. ಕುಡಿಯುವ ನೀರಿನ ಕ್ರಿಯಾಯೋಜನೆಗೆ ಅನುಮೋದನೆ ಪಡೆಯಲಾಗಿದೆ. ಒಳಚರಂಡಿಗೆ 46 ಕೋಟಿ ರು.ಗಳಿಗೆ ಕೌನ್ಸಿಲ್ ಅನುಮೋದನೆ ಪಡೆದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಘನತ್ಯಾಜ್ಯ ವಸ್ತು ನಿರ್ವಹಣೆ, ವಾಹನ, ಯಂತ್ರೋಪಕರಣ ಖದೀರಿಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಂಡಿದ್ದು 141 ಕೋಟಿ ರು.ಗಳ ಮೊತ್ತದಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಪೌರ ಕಾರ್ಮಿಕರಿಗೆ ಗೃಹಭಾಗ್ಯ ಯೋಜನೆಯಡಿಯಲ್ಲಿ ಮನೆ ನಿರ್ಮಿಸಿಕೊಡಲು 1.86 ಕೋಟಿ ರು.ಗಳ ಅನುದಾನವನ್ನು ಮೀಸಲಿಡಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಿವೇಶನ ನೀಡಲು ಕ್ರಮ-ಶಾಸಕ:ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಪಟ್ಟಣದಲ್ಲಿ ಕೆಸ್ಸಾರ್ಟಿಸಿ ಬಸ್ ನಿಲ್ದಾಣ ನಿರ್ಮಾಣ, ಗ್ರಂಥಾಲಯ, ಪತ್ರಕರ್ತರ ಭವನ, ಶಿಕ್ಷಕರ ಭವನ ಹಾಗೂ ಕನ್ನಡ ಭವನಕ್ಕೆ ಜಾಗವನ್ನು ಗುರುತಿಸಲಾಗಿದೆ. ಶೀಘ್ರದಲ್ಲೇ ಇದನ್ನು ಸಂಬಂಧಪಟ್ಟವರಿಗೆ ಹಸ್ತಾಂತರಿಸುವ ಕಾರ್ಯಕ್ರಮವನ್ನು ಮಾಡಲಾಗುವುದು ಎಂದರು.ಮುಖ್ಯಾಧಿಕಾರಿ ಎಂ.ಪಿ. ಮಹೇಶ್ ಕುಮಾರ್, ಆಹಾರ ನಿರೀಕ್ಷಕ ರಾಘವೇಂದ್ರ, ಜೆಇ ನಾಗೇಂದ್ರ, ಪರಶಿವ ಮೂರ್ತಿ, ಲಕ್ಷ್ಮಿ, ಜಯಲಕ್ಷ್ಮಿ, ರೇಖಾ, ಮಲ್ಲಿಕಾರ್ಜುನ, ರಘು, ಅರವಿಂದ ಸೇರಿದಂತೆ ಅನೇಕರು ಇದ್ದರು.2803ವೈಎಲ್‌ಡಿಪಿ02
ಪಟ್ಟಣ ಪಂಚಾಯ್ತಿಯಲ್ಲಿ ತಹಸೀಲ್ದಾರ್ ಎಸ್.ಎಲ್. ನಯನಾ ಬಜೆಟ್ ಮಂಡಿಸಿದರು.