ರಸಪ್ರಶ್ನೆ ಸ್ಪರ್ಧೆ ವಿಜೇತ ವಿದ್ಯಾರ್ಥಿನಿಗೆ ₹7,500 ನಗದು ಬಹುಮಾನ ನೀಡಿದ ಯಲಗುದ್ರಿ

| Published : Jul 31 2025, 01:06 AM IST / Updated: Jul 31 2025, 01:07 AM IST

ರಸಪ್ರಶ್ನೆ ಸ್ಪರ್ಧೆ ವಿಜೇತ ವಿದ್ಯಾರ್ಥಿನಿಗೆ ₹7,500 ನಗದು ಬಹುಮಾನ ನೀಡಿದ ಯಲಗುದ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ಅಥಣಿ ಪಟ್ಟಣದ ಎಸ್‌ಎಸ್‌ಎಂಎಸ್ ಮಹಾವಿದ್ಯಾಲಯದ ಖೋತ ಸಭಾಂಗಣದಲ್ಲಿ ಅಥಣಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಲಾಗಿದ್ದ ಪತ್ರಿಕ ದಿನಾಚರಣೆ, ಸಾಧಕರ ಸನ್ಮಾನ ಹಾಗೂ ಮುಕ್ತ ರಸಪ್ರಶ್ನೆ ಸ್ಪರ್ಧೆಯ ವಿಜೇತರ ಬಹುಮಾನ ವಿತರಣಾ ಸಮಾರಂಭದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ವಿಜೇತ ವಿದ್ಯಾರ್ಥಿನಿ ಶಿರಹಟ್ಟಿ ಗ್ರಾಮದ ಪ್ರೀತಿ ಕುರುಬರ ಅವರಿಗೆ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಎಮಿನೆಂಟ್‌ ಇಂಜನಿಯರ್‌ ಅವಾರ್ಡ್‌ ಪುರಸ್ಕೃತ ಅರುಣಕುಮಾರ ಯಲಗುದ್ರಿಯವರು ತಾವು ನೀಡಿದ ₹7,500 ನಗದು ಸೇರಿದಂತೆ ಪ್ರಮಾಣಪತ್ರ ಹಾಗೂ ಟ್ರೋಪಿ ನೀಡಿ ಗೌರವಿಸಿದರು.

ಅಥಣಿ: ಪಟ್ಟಣದ ಎಸ್‌ಎಸ್‌ಎಂಎಸ್ ಮಹಾವಿದ್ಯಾಲಯದ ಖೋತ ಸಭಾಂಗಣದಲ್ಲಿ ಅಥಣಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಲಾಗಿದ್ದ ಪತ್ರಿಕ ದಿನಾಚರಣೆ, ಸಾಧಕರ ಸನ್ಮಾನ ಹಾಗೂ ಮುಕ್ತ ರಸಪ್ರಶ್ನೆ ಸ್ಪರ್ಧೆಯ ವಿಜೇತರ ಬಹುಮಾನ ವಿತರಣಾ ಸಮಾರಂಭದಲ್ಲಿ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ವಿಜೇತ ವಿದ್ಯಾರ್ಥಿನಿ ಶಿರಹಟ್ಟಿ ಗ್ರಾಮದ ಪ್ರೀತಿ ಕುರುಬರ ಅವರಿಗೆ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಎಮಿನೆಂಟ್‌ ಇಂಜನಿಯರ್‌ ಅವಾರ್ಡ್‌ ಪುರಸ್ಕೃತ ಅರುಣಕುಮಾರ ಯಲಗುದ್ರಿಯವರು ತಾವು ನೀಡಿದ ₹7,500 ನಗದು ಸೇರಿದಂತೆ ಪ್ರಮಾಣಪತ್ರ ಹಾಗೂ ಟ್ರೋಪಿ ನೀಡಿ ಗೌರವಿಸಿದರು.ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಬಾಲ್ಯದಿಂದಲೇ ಸಿದ್ಧಗೊಳಿಸುವುದು ಅನಿವಾರ್ಯವಾಗಿದೆ. ಇಂತದೊಂದು ವಾತಾವರಣ ಸೃಷ್ಟಿಸುತ್ತಿರುವ ಕಾನಿಪ ಸಂಘವು ರಸಪ್ರಶ್ನೆ ಸ್ಪರ್ಧೆ ಆಯೋಜಿಸಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುತ್ತಿರುವ ಕಾರ್ಯ ಶ್ಲಾಘನೀಯ. ಪ್ರತಿ ವರ್ಷವೂ ಈ ತರಹದ ಕಾರ್ಯಕ್ರಮ ಆಯೋಜಿಸುವ ಮೂಲಕ ಪಠ್ಯತೇತರ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಪ್ರೇರೆಪಿಸಿ ಪ್ರೋತ್ಸಾಹಿಸಿ.

-ಅರುಣಕುಮಾರ ಯಲಗುದ್ರಿ, ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್‌ನ ಎಮಿನೆಂಟ್‌ ಇಂಜನಿಯರ್‌ ಅವಾರ್ಡ್‌ ಪುರಸ್ಕೃತರು.