ಯಲ್ಲಮ್ಮ ದೇವಸ್ಥಾನ ಮಾದರಿಯಾಗಿಸುವ ಗುರಿ: ಶಾಸಕ ವಿಶ್ವಾಸ ವೈದ್ಯ

| Published : Aug 16 2024, 12:59 AM IST

ಯಲ್ಲಮ್ಮ ದೇವಸ್ಥಾನ ಮಾದರಿಯಾಗಿಸುವ ಗುರಿ: ಶಾಸಕ ವಿಶ್ವಾಸ ವೈದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಕ್ಷೇತ್ರ ಯಲ್ಲಮ್ಮನ ಗುಡ್ಡದ ಅಭಿವೃದ್ಧಿಗೋಸ್ಕರ ಪ್ರಾಧಿಕಾರ ರಚನೆಯಾಗಿದ್ದು, ಯಲ್ಲಮ್ಮ ದೇವಸ್ಥಾನವನ್ನು ಮಾದರಿಯಾಗಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಸವದತ್ತಿ

ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡದ ಅಭಿವೃದ್ಧಿಗೋಸ್ಕರ ಪ್ರಾಧಿಕಾರ ರಚನೆಯಾಗಿದ್ದು, ಯಲ್ಲಮ್ಮಾ ದೇವಸ್ಥಾನವನ್ನು ಮಾದರಿಯಾಗಿಸುವ ಗುರಿ ಹೊಂದಲಾಗಿದೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.ಇಲ್ಲಿನ ಎಸ್.ಕೆ. ಹೈಸ್ಕೂಲ್‌ ಮೈದಾನದಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದಲ್ಲಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ಪಟ್ಟಣದಲ್ಲಿ ವಿಶೇಷ ಅಭಿವೃದ್ದಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಒಳ ಚರಂಡಿ ಯೋಜನೆಯನ್ನು ಮತ್ತೆ ಕೈಗೆತ್ತಿಕೊಳ್ಳಲಾಗುತ್ತಿದೆ. ಪಟ್ಟಣದಲ್ಲಿ ನಿರಂತರ ಕುಡಿಯುವ ನೀರಿನ ಯೋಜನೆ 2025ರ ಮಾರ್ಚ್‌ ತಿಂಗಳಲ್ಲಿ ಪೂರ್ಣಗೊಳ್ಳಲಿದ್ದು, ಮುಖ್ಯಮಂತ್ರಿಗಳ ₹ 4 ಕೋಟಿ ವಿಶೇಷ ಅನುದಾನದಲ್ಲಿ ಪುರಸಭೆಯ ವ್ಯಾಪ್ತಿಯಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯಡೆ ₹40 ಕೋಟಿ ತಾಲೂಕಿನ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಮತಕ್ಷೇತ್ರದ ಜನರು ನೀಡಿರುವ ಈ ಸ್ಥಾನಕ್ಕೆ ಚ್ಯುತಿ ಬಾರದಂತೆ ಜನಸೇವೆಯ ಗುರಿಯನ್ನಿಟ್ಟುಕೊಂಡು ಅಭಿವೃದ್ಧಿ ಕಡೆಗೆ ವಿಶೇಷ ಗಮನ ಹರಿಸಲಾಗುತ್ತಿದೆ ಎಂದರು.

ವೇದಿಕೆಯಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಪತ್ರಕರ್ತರನ್ನು, ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಿನಿವಿಧಾನಸೌಧದ ಮುಂದೆ ತಹಸೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗನ್ನವರ ಧ್ವಜಾರೋಹಣ ನೆವೇರಿಸಿದರು. ಎಲ್ಲ ಶಾಲಾ ವಿದ್ಯಾರ್ಥಿಗಳು ಮತ್ತು ರೂಪಕಗಳು ಪ್ರಭಾತ ಪೇರಿ ನಡೆಸಿದರು. ಸಮಾರಂಭದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ಸಂಸ್ಕೃತಿಕ ಮನರಂಜನಾ ಕಾರ್ಯಕ್ರಮ ಜರುಗಿದವು.

ಎಪಿಎಂಸಿ ಅಧ್ಯಕ್ಷ ಚಂದ್ರು ಜಂಬ್ರಿ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಕಾಶೆಪ್ಪ ಕಾರ್ಲಕಟ್ಟಿ, ಪುರಸಭೆ ಸದಸ್ಯರಾದ ಶಿವಾನಂದ ಹೂಗಾರ, ಬಾಪುಸಾಬ ಚೂರಿಖಾನ, ಗ್ರೇಡ್-2 ತಹಸೀಲ್ದಾರ್‌ ಎಂ.ವಿ. ಗುಂಡಪ್ಪಗೋಳ, ಮುಖ್ಯಾಧಿಕಾರಿ ಸಂಗನಬಸಯ್ಯ ಗದಗಿನಮಠ, ಸಿಪಿಐ ಧರ್ಮಾಕರ ಧರ್ಮಟ್ಟಿ, ತಾಪಂ ಇಒ ಯಶವಂತಕುಮಾರ, ಎಚ್.ಎ. ಕದ್ರಾಪುರ, ಟಿಎಚ್‌ಒ ಡಾ.ಶ್ರೀಪಾದ ಸಬನೀಸ್‌, ಅಶ್ವತ್ಥ ವೈದ್ಯ, ಕಿರಣ ಕುರಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.]

ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ ಸ್ವಾಗತಿಸಿದರು. ತಹಸೀಲ್ದಾರ್‌ ಮಲ್ಲಿಕಾರ್ಜುನ ಹೆಗ್ಗನ್ನವರ ಸಂದೇಶ ವಾಚಿಸಿದರು. ಶಿವಾನಂದ ತಾರಿಹಾಳ ನಿರೂಪಿಸಿದರು. ಕ್ಷೇತ್ರ ಸಮನ್ವಯಾಕಾರಿ ಬಿ.ಎನ್. ಬ್ಯಾಳಿ ವಂದಿಸಿದರು.