ಸಾರಾಂಶ
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಹಾಲುಮತ ಸಮಾಜದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವ ಯಲ್ಲಪ್ಪಜ್ಜ ದಳವಾಯಿ ಫೌಂಡೇಶನ್ ಕಾರ್ಯ ಶ್ಲಾಘನೀಯ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು.ಪಟ್ಟಣದ ಶ್ರೀ ಶಿವಬಸವ ಕಾಲ್ಯಾಣ ಮಂಟಪದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘ ಬೆಂಗಳೂರು ಹಾಗೂ ಯಲ್ಲಪ್ಪಜ್ಜ ದಳವಾಯಿ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕನಕಶ್ರೀ ಪ್ರತಿಭಾ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ದೇಶಕ್ಕೆ ಆಧ್ಯಾತ್ಮಿಕ, ಸಾಂಸ್ಕೃತಿಕ, ರಾಜಕೀಯ ಹಾಗೂ ಸಾಮಾಜಿಕವಾಗಿ ಅನೇಕ ರೀತಿಯ ಕೊಡುಗೆ ನೀಡಿದ ಗೌರವ ಹಾಲುಮತಕ್ಕೆ ಸಲ್ಲುತ್ತದೆ. ಯಲ್ಲಪ್ಪಜ್ಜ ದಳವಾಯಿಯವರು ಆಧ್ಯಾತ್ಮಿಕ ಚಿಂತನೆಗಳ ಮೂಲಕ ಸಮಾಜದಲ್ಲಿ ಅಂಧಕಾರ ಅಳೆದು ಜ್ಞಾನದ ಬೆಳಕಿನೆಡೆಗೆ ಸಮಾಜವನ್ನು ಕರೆದೊಯ್ಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಫೌಂಡೇಶನ್ ಮೂಲಕ ಈ ದಿನ ಅನೇಕ ಕ್ಷೇತ್ರದಲ್ಲಿ ಸೇವೆ ಸಲ್ಲಿರುತ್ತಿರುವವರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅವರ ಕೆಲಸಗಳಿಗೆ ಇನ್ನಷ್ಟು ಹುರುಪು ತುಂಬಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.
ಹಾಲುಮತದ ಏಳಿಗೆಗಾಗಿಯೇ ನಮ್ಮ ಸರಕಾರ ಅನೇಕ ರೀತಿಯ ಯೋಜನೆ ಜಾರಿಗೆ ತಂದಿದ್ದು, ಈ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.ಸಾನ್ನಿಧ್ಯ ವಹಿಸಿದ್ದ ಡಾ.ಸಿದ್ದೇಶ್ವರ ದೇವರು ಪ.ಪೂ ಯಲ್ಲಪಜ್ಜ, ಸೋಮೇಶ್ವರ ಸ.ಸ.ಕಾ.ನಿ. ವ್ಯವಸ್ಥಾಪಕ ನಿರ್ದೇಶಕ ಬೀರೇಂದ್ರ ಮಾತನಾಡಿದರು. ಪತಂಜಲಿ ಯೋಗ ಪೀಠ ಹರಿದ್ವಾರ ಶಾಖೆ ಗೋಕಾಕನ ಬ್ರಹ್ಮಾನಂದ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಯಲ್ಲಪ್ಪಜ್ಜ ದಳವಾಯಿ ಸಾನ್ನಿಧ್ಯ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಉಪ ನೋಂದನಾಧಿಕಾರಿ. ವಿದ್ಯಾ ಹಂಡಿಬಾಗ, ಸಹಾಯಕ ಕೃಷಿ ನಿರ್ದೇಶಕ ಬಸವರಾಜ ದಳವಾಯಿ, ಶಂಕರ ಮಾಡಲಗಿ, ಬಸವರಾಜ ಬಿಲ್ಲಶಿವಣ್ಣವರ, ದೇವೇಂದ್ರ ಗರಗದ, ಸಂಗಪ್ಪ ಬೆಳಗಾವಿ, ಸೋಮಪ್ಪ ಮರಗಾಲ, ಲಕ್ಷ್ಮಣ ಸೋಮನಟ್ಟಿ, ಬಸಪ್ಪ ಹಳಿವೂರ, ಮಲ್ಲವ್ವ ಬುಡರಕಟ್ಟಿ ಆಗಮಿಸಿದ್ದರು.ಪತ್ರಕರ್ತರ ಸಂಘದ ಅಧ್ಯಕ್ಷ. ಮಹಾಂತೇಶ ತುರುಮರಿ, ಕನ್ನಡಪರ ಸಂಘಟನೆಗಳ ಮುಖಂಡರಾದ ಸಿ.ಕೆ. ಮೆಕ್ಕೆದ, ವಿಠ್ಠಲ ಕಡಕೋಳ, ಅನಿಲ ಬೋಳನ್ನವರ, ಶಿವಾನಂದ ಕೋಲಕಾರ, ಸುಭಾಷ ತುರಮರಿ, ರವಿ ತುರಮರಿ, ರಾಜು ಸೊಗಲ, ಈರಪ್ಪ ಎತ್ತಿನಮನಿ, ಮಡಿವಾಳಪ್ಪ ಹಿರೇಹೊಳಿ ವಿವಿಧ ಸಂಘಟನೆ ಮುಖಂಡರನ್ನು ತಾಲೂಕು ಅಧ್ಯಕ್ಷ, ವಿಜಯಕುಮಾರ ದಳವಾಯಿ ಸನ್ಮಾನಿಸಿ ಗೌರವಿಸಿದರು.
ಸುನಿಲ ಪಟಾತ್, ಸಂಗಮೇಶ ಹುಲಗನ್ನವರ, ಬಸವರಾಜ ಕುರಿ, ಕುಮಾರ ಪಟ್ಟಿಹಾಳ, ಸಂತೋಷ ಜ್ಯೋತಿ, ಈಶ್ವರ ಶಿಲ್ಲೇದಾರ, ಚಂದ್ರಶೇಖರ ಹೊಸೂರ, ಸಿದ್ದಪ್ಪ ಬಂಡಗಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಬಸವರಾಜ ಬೆಳ್ಳಿಕಟ್ಟಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಕುರಿ ನಿರೂಪಿಸಿದರು. ಮಾರುತಿ ಶೆರೆಗಾರ ವಂದಿಸಿದರು.