ಡಿಸೆಂಬರ್ ೨೩ರಂದು ಮಂಚಿಕೇರಿಯಲ್ಲಿ ಯಲ್ಲಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

| Published : Dec 21 2024, 01:17 AM IST

ಡಿಸೆಂಬರ್ ೨೩ರಂದು ಮಂಚಿಕೇರಿಯಲ್ಲಿ ಯಲ್ಲಾಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
Share this Article
  • FB
  • TW
  • Linkdin
  • Email

ಸಾರಾಂಶ

ಅಂದು ಬೆಳಗ್ಗೆ ೮.೩೦ಕ್ಕೆ ತಹಸೀಲ್ದಾರ್ ಯಲ್ಲಪ್ಪ ಗೋನೆಣ್ಣನವರ ರಾಷ್ಟ್ರಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಪರಿಷತ್ತಿನ ಧ್ವಜಾರೋಹಣ ಹಾಗೂ ಕಸಾಪ ತಾಲೂಕಾಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ನಾಡಧ್ವಜಾರೋಹಣ ನೆರವೇರಿಸುವರು.

ಯಲ್ಲಾಪುರ: ತಾಲೂಕಿನ ಮಂಚಿಕೇರಿಯ ರಾಜರಾಜೇಶ್ವರಿ ರಂಗಮಂದಿರದಲ್ಲಿ ಡಿ. ೨೩ರಂದು ನಡೆಯಲಿರುವ ೬ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ರಂಗಕರ್ಮಿ ಆರ್.ಎನ್. ಭಟ್ಟ ಧುಂಡಿ ವಹಿಸಲಿದ್ದಾರೆ.

ಅಂದು ಬೆಳಗ್ಗೆ ೮.೩೦ಕ್ಕೆ ತಹಸೀಲ್ದಾರ್ ಯಲ್ಲಪ್ಪ ಗೋನೆಣ್ಣನವರ ರಾಷ್ಟ್ರಧ್ವಜಾರೋಹಣ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಪರಿಷತ್ತಿನ ಧ್ವಜಾರೋಹಣ ಹಾಗೂ ಕಸಾಪ ತಾಲೂಕಾಧ್ಯಕ್ಷ ಸುಬ್ರಹ್ಮಣ್ಯ ಭಟ್ಟ ನಾಡಧ್ವಜಾರೋಹಣ ನೆರವೇರಿಸುವರು. ಪಪಂ ಉಪಾಧ್ಯಕ್ಷ ಅಮಿತ ಅಂಗಡಿ, ಪಪಂ ಮುಖ್ಯಾಧಿಕಾರಿ ಸುನಿಲ್ ಗಾವಡೆ, ಹಾಸಣಗಿ ಗ್ರಾಪಂ ಉಪಾಧ್ಯಕ್ಷ ಪುರಂದರ ನಾಯ್ಕ, ಕಂಪ್ಲಿ ಗ್ರಾಪಂ ಉಪಾಧ್ಯಕ್ಷ ಸದಾಶಿವ ಚಿಕ್ಕೊತ್ತಿ ಉಪಸ್ಥಿತರಿರುವರು. ನಂತರ ನಡೆಯುವ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಆರ್‌ಎಫ್‌ಒ ಬಸವರಾಜ ಬೋಚಳ್ಳಿ ಉದ್ಘಾಟಿಸುವರು. ಗ್ರಾಪಂ ಅಧ್ಯಕ್ಷ ಕುಪ್ಪಯ್ಯ ಪೂಜಾರಿ ಉಮ್ಮಚಗಿ, ಸತ್ಯನಾರಾಯಣ ಹೆಗಡೆ ಹಿತ್ಲಳ್ಳಿ, ಯಮುನಾ ಸಿದ್ದಿ ಕುಂದರಗಿ, ಪಿಡಿಒಗಳಾದ ಎಸ್.ಸಿ. ವಿರಕ್ತಮಠ ಹಾಸಣಗಿ, ರವಿ ಪಟಗಾರ ಕಂಪ್ಲಿ ಹಾಗೂ ಮಂಚಿಕೇರಿ ಉರ್ದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಇಸ್ರಾಲ್ ಸೇಕ್ ಉಪಸ್ಥಿತರಿರುವರು. ಅಂದು ಬೆಳಗ್ಗೆ ೧೦ ಗಂಟೆಗೆ ಹಿರಿಯ ಸಾಹಿತಿ ಶ್ಯಾಮಸುಂದರ ಬಿದ್ರಕುಂದಿ ಸಮ್ಮೇಳನವನ್ನು ಉದ್ಘಾಟಿಸುವರು. ಶಾಸಕ ಶಿವರಾಮ ಹೆಬ್ಬಾರ ಅವರು ವನರಾಗ ಶರ್ಮ ವಿರಚಿತ ಮರಳಿ ಮಿನುಗಿತು ಕಾಮನಬಿಲ್ಲು ಕಥಾ ಸಂಕಲನವನ್ನು ಲೋಕಾರ್ಪಣೆ ಮಾಡುವರು. ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ದ್ವಾರಗಳನ್ನು ಉದ್ಘಾಟಿಸುವರು. ಪುಸ್ತಕ ಮಳಿಗೆಯನ್ನು ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ ಉದ್ಘಾಟಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಟಿ.ವಿ. ಕೋಮಾರ ಧ್ವಜ ಹಸ್ತಾಂತರ ಮಾಡಲಿದ್ದಾರೆ. ಸಮ್ಮೇಳನದ ಅಧ್ಯಕ್ಷತೆ ವಹಿಸಲಿರುವ ರಾಮಕೃಷ್ಣ ಭಟ್ಟ ಧುಂಡಿ ವಿವಿಧ ಪ್ರಮುಖರ ಉಪಸ್ಥಿತಿಯಲ್ಲಿ ಅಧ್ಯಕ್ಷೀಯ ನುಡಿಗಳನ್ನಾಡುವರು. ಮಧ್ಯಾಹ್ನ ೨ ಗಂಟೆಗೆ ನಡೆಯಲಿರುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸುಬ್ರಾಯ ಬಿದ್ರೆಮನೆ ವಹಿಸಲಿದ್ದು, ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಆಶಯ ಭಾಷಣ ಮಾಡಲಿದ್ದು, ೨೪ ಹಿರಿಕಿರಿಯ ಕವಿಗಳು ತಮ್ಮ ಕವನ ವಾಚನ ಮಾಡುವರು. ಮಧ್ಯಾಹ್ನ ೩.೩೦ಕ್ಕೆ ನಡೆಯಲಿರುವ ಸಮ್ಮೇಳನಾಧ್ಯಕ್ಷರ ಜತೆಗಿನ ಸಂವಾದಗೋಷ್ಠಿಯಲ್ಲಿ ವಾಸುಕಿ ಹೆಗಡೆ ಸಮ್ಮೇಳನಾಧ್ಯಕ್ಷರ ಬದುಕು, ಸಾಧನೆ ಕುರಿತಂತೆ ಮಾತನಾಡಲಿದ್ದು, ಸಂವಾದದಲ್ಲಿ ಡಿ.ಎನ್. ಗಾಂವ್ಕರ, ಜಿ.ಎನ್. ಶಾಸ್ತ್ರಿ, ನಾಗರಾಜ ಹೆಗಡೆ ಜಾಲಿಮನೆ, ನರಸಿಂಹ ಸಾತೊಡ್ಡಿ, ಪಾಲ್ಗೊಳ್ಳುವರು. ಸಂಜೆ ೪ ಗಂಟೆಗೆ ನಡೆಯಲಿರುವ ೩ನೇ ಸಾಹಿತ್ಯಗೋಷ್ಠಿಯ ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ವಹಿಸುವರು. ವಿಶ್ವದರ್ಶನ ಪಪೂ ಕಾಲೇಜು ಪ್ರಾಂಶುಪಾಲ ದತ್ತಾತ್ರೇಯ ಗಾಂವ್ಕರ ಆಶಯ ನುಡಿಗಳನ್ನಾಡುವರು. ಸಂಜೆ ೬ ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ವಹಿಸುವರು. ಪರಿಸರ ತಜ್ಞ ಶಿವಾನಂದ ಹೆಗಡೆ ಕಳವೆ ಸಮಾರೋಪ ಭಾಷಣ ಮಾಡುವರು. ಶಿಕ್ಷಕ ಶ್ರೀಧರ ಹೆಗಡೆ ಮಾಳಕೊಪ್ಪ ಅಭಿನಂದನಾ ನುಡಿಗಳನ್ನಾಡುವರು.