ಸಾರಾಂಶ
ಯಾಂತ್ರೀಕೃತ ಭತ್ತದ ನಾಟಿ ಮಾಡುವುದರಿಂದ ಸಮಯ ಉಳಿತಾಯ ಆಗಲಿದೆ. ಜೊತೆಗೆ ಕೂಲಿ ಕಾರ್ಮಿಕರಿಗಾಗಿ ಕಾಯಬೇಕಾದ ಅವಶ್ಯಕತೆಯೂ ಇರುವುದಿಲ್ಲ. ಕಡಿಮೆ ಸಮಯದಲ್ಲಿ, ಗುಣಮಟ್ಟದ ಕೃಷಿ ಚಟುವಟಿಕೆ ಮಾಡಲು ಯಂತ್ರ ಶ್ರೀ ಯೋಜನೆ ಸಹಕಾರಿ ಎಂದು ಬಸವಾಪಟ್ಟಣ ಹೋಬಳಿ ಸಹಾಯಕ ಕೃಷಿ ಅಧಿಕಾರಿ ಲತಾ ಹೇಳಿದರು.
ಕನ್ನಡಪ್ರಭ ವಾರ್ತೆ ಚನ್ನಗಿರಿ
ಯಾಂತ್ರೀಕೃತ ಭತ್ತದ ನಾಟಿ ಮಾಡುವುದರಿಂದ ಸಮಯ ಉಳಿತಾಯ ಆಗಲಿದೆ. ಜೊತೆಗೆ ಕೂಲಿ ಕಾರ್ಮಿಕರಿಗಾಗಿ ಕಾಯಬೇಕಾದ ಅವಶ್ಯಕತೆಯೂ ಇರುವುದಿಲ್ಲ. ಕಡಿಮೆ ಸಮಯದಲ್ಲಿ, ಗುಣಮಟ್ಟದ ಕೃಷಿ ಚಟುವಟಿಕೆ ಮಾಡಲು ಯಂತ್ರ ಶ್ರೀ ಯೋಜನೆ ಸಹಕಾರಿ ಎಂದು ಬಸವಾಪಟ್ಟಣ ಹೋಬಳಿ ಸಹಾಯಕ ಕೃಷಿ ಅಧಿಕಾರಿ ಲತಾ ಹೇಳಿದರು.ಶುಕ್ರವಾರ ತಾಲೂಕಿನ ಕಣಿವೆಬಿಳಚಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಯಂತ್ರ ಶ್ರೀ ಯಾಂತ್ರೀಕೃತ ಭತ್ತ ನಾಟಿ ಮಾಡುವ ಬೇಸಾಯದ ಪ್ರಾತ್ಯಕ್ಷಿತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೃಷಿ ಇಲಾಖೆಯಿಂದ ಮಾಹಿತಿ ಪಡೆದು ತಾಂತ್ರಿಕ ಮಾಹಿತಿಯೊಂದಿಗೆ ಯಂತ್ರಿಕೃತ ಭತ್ತ ನಾಟಿ ಮಾಡುತ್ತೀರುವುದು ಶ್ಲಾಘನೀಯ. ರೈತರು ಕೃಷಿ ಇಲಾಖೆ, ಸಂಘ, ಸಂಸ್ಥೆಗಳ ಒಡನಾಟ ಇಟ್ಟುಕೊಂಡರೆ ಕೃಷಿಯಲ್ಲಿ ಉತ್ತಮ ಸಾಧನೆ ಮಾಡಬಹುದು ಎಂದು ಹೇಳಿದರು.ಯಂತ್ರಶ್ರೀ ಯಂತ್ರದ ಚಾಲನೆಯನ್ನು ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ನೆರವೇರಿಸಿ. ಯಂತ್ರಶ್ರೀ ಕಾರ್ಯಕ್ರಮದ ಉದ್ದೇಶ ಮತ್ತು ಇದರ ಬಳಕೆಯಿಂದ ಖರ್ಚು ಕಡಿಮೆಯಾಗುವ ಜೊತೆಗೆ ಬೆಳೆಯ ಇಳುವರಿಯಲ್ಲಿ ದ್ವಿಗುಣವಾಗುವ ಜೊತೆಗೆ ಆದಾಯ ಹೆಚ್ಚಲಿದೆ ಎಂದ ಅವರು, ಬಿತ್ತನೆ ಬೀಜದಲ್ಲಿ ಉಳಿಕೆ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಂತ್ರಿಕ ಅಭಿಯಂತರ ಅವಿನಾಶ್, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ದೊರೆಬಾಬು, ರೈತ ಮುಖಂಡರಾದ ಮಹೇಶ್ವರಪ್ಪ, ತಾಲೂಕು ಜನಜಾಗೃತಿ ವೇದಿಕೆ ಸದಸ್ಯರಾದ ದೇವೆಂದ್ರಪ್ಪ, ವೆಂಕಟೇಶ ನಾಯ್ಕ್, ಕೃಷಿ ಅಧಿಕಾರಿ ಹನುಮಂತಪ್ಪ, ರಂಗಸ್ವಾಮಿ ಹಾಜರಿದ್ದರು.