ಯರಗಟ್ಟಿ ಉಪಪೊಲೀಸ್ ಠಾಣೆಗಿಲ್ಲ ಮೇಲ್ದರ್ಜೇಯ ಭಾಗ್ಯ

| Published : Jun 01 2024, 12:46 AM IST

ಯರಗಟ್ಟಿ ಉಪಪೊಲೀಸ್ ಠಾಣೆಗಿಲ್ಲ ಮೇಲ್ದರ್ಜೇಯ ಭಾಗ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಯರಗಟ್ಟಿ ತಾಲೂಕು ಕೇಂದ್ರವಾಗಿ 3 ವರ್ಷಗಳು ಕಳೆದರೂ ಯರಗಟ್ಟಿ ಉಪಪೊಲೀಸ್ ಠಾಣೆಯು ಮೇಲ್ದರ್ಜೆಗೆ ಏರುವ ಭಾಗ್ಯ ಮಾತ್ರ ಇನ್ನೂ ಕೂಡಿ ಬಂದಿಲ್ಲ. ಯರಗಟ್ಟಿ ಪಟ್ಟಣವು ಬೃಹತ್ ಕೈಗಾರಿಕೆಗಳನ್ನು ಹೊಂದಿರುವ ಪ್ರದೇಶವಾಗಿದ್ದು, ಪಟ್ಟಣದ ವ್ಯಾಪ್ತಿಯ ವಾಸಿಸುವ ಜನರ ಸಂಖ್ಯೆ ಹೆಚ್ಚಿದೆ. ಅಲ್ಲದೇ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಸಂಖ್ಯೆಯೂ ಹೆಚ್ಚಿದೆ. ಸುತ್ತಲಿನ 30ಕ್ಕೂ ಹೆಚ್ಚು ಹಳ್ಳಿಗಳು ಯರಗಟ್ಟಿ ಠಾಣೆಯ ವ್ಯಾಪ್ತಿಗೆ ಬರುತ್ತಿದ್ದು, ಪಟ್ಟಣಕ್ಕೆ ಪ್ರತ್ಯೇಕ ಪೊಲೀಸ್ ಠಾಣೆ ಅಗತ್ಯವಿದೆ.

ಶಶಿಧರ ಎಂ.ಪಾಟೀಲ

ಕನ್ನಡಪ್ರಭ ವಾರ್ತೆ ಯರಗಟ್ಟಿ

ತಾಲೂಕು ಕೇಂದ್ರವಾಗಿ 3 ವರ್ಷಗಳು ಕಳೆದರೂ ಯರಗಟ್ಟಿ ಉಪಪೊಲೀಸ್ ಠಾಣೆಯು ಮೇಲ್ದರ್ಜೆಗೆ ಏರುವ ಭಾಗ್ಯ ಮಾತ್ರ ಇನ್ನೂ ಕೂಡಿ ಬಂದಿಲ್ಲ.

ಯರಗಟ್ಟಿ ಪಟ್ಟಣವು ಬೃಹತ್ ಕೈಗಾರಿಕೆಗಳನ್ನು ಹೊಂದಿರುವ ಪ್ರದೇಶವಾಗಿದ್ದು, ಪಟ್ಟಣದ ವ್ಯಾಪ್ತಿಯ ವಾಸಿಸುವ ಜನರ ಸಂಖ್ಯೆ ಹೆಚ್ಚಿದೆ. ಅಲ್ಲದೇ ಕೈಗಾರಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರು ಸಂಖ್ಯೆಯೂ ಹೆಚ್ಚಿದೆ. ಸುತ್ತಲಿನ 30ಕ್ಕೂ ಹೆಚ್ಚು ಹಳ್ಳಿಗಳು ಯರಗಟ್ಟಿ ಠಾಣೆಯ ವ್ಯಾಪ್ತಿಗೆ ಬರುತ್ತಿದ್ದು, ಪಟ್ಟಣಕ್ಕೆ ಪ್ರತ್ಯೇಕ ಪೊಲೀಸ್ ಠಾಣೆ ಅಗತ್ಯವಿದೆ.ಪಟ್ಟಣದ ಪೊಲೀಸ್ ಉಪಠಾಣೆಯಲ್ಲಿ ಸಿಬ್ಬಂದಿ ಸಂಖ್ಯೆ ಕಡಿಮೆಯಿದೆ. ಇದರಿಂದ ಜನರಿಗೆ ಹಾಗೂ ಕಾರ್ಮಿಕರಿಗೆ, ರಕ್ಷಣೆ ಕೊಡಲು ಹಾಗೂ ಶನಿವಾರದ ಜಾನುವಾರು ಸಂತೆ ರಾಜ್ಯದಲ್ಲಿ ಎಲ್ಲಿಯೂ ಆಗದ ರೀತಿಯಲ್ಲಿ ಜರುಗುವುದರಿಂದ ವಾಹನ ಸಂಚಾರ ನಿಯಂತ್ರಣಕ್ಕೆ ಪೊಲೀಸ್ ಸಿಬ್ಬಂದಿಗೆ ಸಮಸ್ಯೆಯಾಗುತ್ತಿದೆ. ಅಪರಾಧ ಪ್ರಕರಣ ಹಾಗೂ ಇತತ ವಿಚಾರಗಳಿಗಾಗಿ 10-15 ಕಿಲೋ ಮೀಟರ್ ದೂರದ ಮುರಗೋಡ ಠಾಣೆಗೆ ಹೋಗುವ ಪರಿಸ್ಥಿತಿಯಿದೆ. ಪಟ್ಟಣವು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಇರುವುದರಿಂದ ಹೆಚ್ಚಿನ ಅಪಘಾತ ಹಾಗೂ ಅಪರಾಧ ಕೃತ್ಯಗಳು ನಡೆಯುತ್ತಿವೆ.

ಪ್ರತ್ಯೇಕ ಠಾಣೆ ಆರಂಭಿಸುವಂತೆ ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ವಿವಿಧ ಸಂಘಟನೆಗಳ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪೊಲೀಸ್ ಉಪಠಾಣೆಯನ್ನು ಮೇಲ್ದರ್ಜೇಗೆ ಏರಿಸಲು ಜಾಗದ ಅನುಕೂಲವಿದೆ. ಉಪಠಾಣೆ ಜಮೀನನ್ನು ಇದಕ್ಕೆ ಬಳಸಿಕೊಳ್ಳಬಹುದಾಗಿದ್ದರೂ ಇನ್ನೂ ಕಾರ್ಯಗತಕ್ಕೆ ಬಂದಿಲ್ಲ ಎನ್ನುವುದೇ ಅಸಮಧಾನದ ವಿಷಯ.

-----------

ಕೋಟ್‌...

ಯರಗಟ್ಟಿ ಉಪಠಾಣೆಯನ್ನು ಮೇಲ್ದರ್ಜೆಗೇರಿಸಿ ಪೂರ್ಣಪ್ರಮಾಣದ ಪೊಲೀಸ್ ಠಾಣೆ ನಿರ್ಮಿಸುವ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿದೆ. ಆದರೆ, ಆರ್ಥಿಕ ಮುಗ್ಗಟ್ಟು ಇನ್ನಿತರ ಕಾರಣಗಳಿಂದ ಅನುಷ್ಠಾನಗೊಂಡಿಲ್ಲ. ನಿರಂತರ ಪ್ರಯತ್ನದ ಫಲವಾಗಿ ಸರ್ಕಾರವು ಈಗ ಯರಗಟ್ಟಿ ಉಪಠಾಣೆಗೆ ಪಿಎಸೈ ಹುದ್ದೆ ಮಂಜೂರು ಮಾಡಿದೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಠಾಣೆ ಕಾರ್ಯಾರಂಭ ಮಾಡಲಿದೆ.-ವಿಶ್ವಾಸ ವೈದ್ಯ, ಶಾಸಕರು ಸವದತ್ತಿ ಯಲ್ಲಮ್ಮ ಮತಕ್ಷೇತ್ರ.-------------

ಜಿಲ್ಲೆಯಲ್ಲಿ ಹೊಸ ಠಾಣೆಗಳ ಸ್ಥಾಪನೆ ಮತ್ತು ಉಪಠಾಣೆಗಳ ಮೇಲ್ದರ್ಜೆಗೇರಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ಅನುಮೋದನೆ ಸಿಕ್ಕಿಲ್ಲ. ಯರಗಟ್ಟಿ ಪೊಲೀಸ್ ಠಾಣೆಯ ಸ್ಥಾಪನೆ ಅನುಮೋದನೆ ಹಂತದಲ್ಲಿದೆ.

-ಡಾ.ಭೀಮಾಶಂಕರ ಗುಳೆದ ಎಸ್ಪಿ ಬೆಳಗಾವಿ.

-------------