ಮಣಿಪಾಲ: ಇಲ್ಲಿನ ಮಾಧವ ಕೃಪಾ ಶಾಲೆಯ ಬಸ್ಸಿನ ಚಾಲಕರು ಚಾಲನೆಯ ಸಂದರ್ಭದಲ್ಲಿ ಹಠಾತ್ ಅನಾರೋಗ್ಯಕ್ಕೀಡಾಗಿ ಬಸ್ ನಿಯಂತ್ರಣ ತಪ್ಪಿದಾಗ, ದ್ವಿತೀಯ ಪಿಯುಸಿ ವಿದ್ಯಾರ್ಥಿ ಅಂಶೆಲ್ ಶರುನ್ ತಕ್ಷಣ ಬಸ್ಸಿನ ಹ್ಯಾಂಡ್ ಬ್ರೇಕ್ ಹಾಕಿ ಭಾರೀ ಅವಘಡವನ್ನು ಸಮಯ ಪ್ರಜ್ಞೆಯಿಂದ ತಪ್ಪಿಸಿದ್ದರು.

ಈ ಶಾಲಾ ಬಸ್ಸಿನಲ್ಲಿದ್ದ 40 ವಿದ್ಯಾರ್ಥಿಗಳನ್ನು ಅಪಾಯದಿಂದ ರಕ್ಷಿಸಿದ ಅಂಶೆಲ್ ಶರುನ್ ಅವರನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಶಾಲೆಗೆ ಭೇಟಿ ನೀಡಿ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.

ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ರುಡಾಲ್ಫ್ ಡಿಸೋಜಾ, ನಗರ ಬಿಜೆಪಿ ಯುವಮೋರ್ಚದ ಅಧ್ಯಕ್ಷ ಶ್ರೀವತ್ಸ, ಅಲ್ಪ ಸಂಖ್ಯಾತ ಮೋರ್ಚಾದ ಅಧ್ಯಕ್ಷ ಡೆನಿಸ್ ಮಸ್ಕರೇನ್ಹಸ್, ಯುವ ಮೋರ್ಚಾದ ಪದಾಧಿಕಾರಿಗಳಾದ ನಿತಿನ್ ಪೈ, ಧನುಷ್ ಬಿ. ಕೆ., ಭೂಷಣ್ ಕುಮಾರ್, ಶಾಲೆಯ ವ್ಯವಸ್ಥಾಪಕ ರಮೇಶ್ ಭಟ್ ಮೊದಲಾದವರು ಉಪಸ್ಥಿತರಿದ್ದರು.