ತೆಂಕನಿಡಿಯೂರು 1 ಕೋಟಿ ರು. ರಸ್ತೆ ಕಾಮಗಾರಿಗೆ ಯಶ್ಪಾಲ್ ಸುವರ್ಣ ಚಾಲನೆ

| Published : Dec 06 2024, 08:59 AM IST

ತೆಂಕನಿಡಿಯೂರು 1 ಕೋಟಿ ರು. ರಸ್ತೆ ಕಾಮಗಾರಿಗೆ ಯಶ್ಪಾಲ್ ಸುವರ್ಣ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ತೆಂಕನಿಡಿಯೂರು ಗ್ರಾಮ ಪಂಚಾಯಿತಿ ಕೆಳಾರ್ಕಳಬೆಟ್ಟು ಶ್ಯಾಮಿಲಿ ಗ್ಯಾಸ್ ಗೋಡೌನ್ ವರೆಗೆ ಸುಮಾರು 1 ಕೋಟಿ ರು. ವೆಚ್ಚದಲ್ಲಿ ನಡೆಯಲಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ ವಿಧಾನಸಭಾ ಕ್ಷೇತ್ರದ ತೆಂಕನಿಡಿಯೂರು ಗ್ರಾಮ ಪಂಚಾಯಿತಿ ಕೆಳಾರ್ಕಳಬೆಟ್ಟು ಶ್ಯಾಮಿಲಿ ಗ್ಯಾಸ್ ಗೋಡೌನ್ ವರೆಗೆ ಸುಮಾರು 1 ಕೋಟಿ ರು. ವೆಚ್ಚದಲ್ಲಿ ನಡೆಯಲಿರುವ ಕಾಂಕ್ರೀಟ್ ರಸ್ತೆ ಕಾಮಗಾರಿಯ ಗುದ್ದಲಿ ಪೂಜೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್ಪಾಲ್ ಸುವರ್ಣ ನೆರವೇರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತ ಇಲಾಖೆಯ 1 ಕೋಟಿ ರು. ಅನುದಾನದಲ್ಲಿ ಈ ಕಾಮಗಾರಿ ನಡೆಯುತ್ತಿದ್ದು, ತೆಂಕನಿಡಿಯೂರು ಗ್ರಾಮದ ವಿವಿಧ ರಸ್ತೆಗಳ ಅಭಿವೃದ್ಧಿಗೂ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಂತ ಹಂತವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದ ಮೂಲಕ ರಸ್ತೆ ಸಹಿತ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಮುತುವರ್ಜಿ ವಹಿಸಲಾಗುವುದು ಎಂದು ತಿಳಿಸಿದರು.ಈ ಸಂದರ್ಭ ತೆಂಕನಿಡಿಯೂರು ಪಂಚಾಯಿತಿ ಉಪಾಧ್ಯಕ್ಷ ಅರುಣ್ ಜತ್ತನ್, ಸದಸ್ಯರಾದ ಗಾಯತ್ರಿ, ಮಾಲಿನಿ, ಶಾಲಿನಿ, ಪುಷ್ಪ, ರೇಖಾ, ವಿಕಿತ, ಗೀತಾ ಶೆಟ್ಟಿ, ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಪಕ್ಷದ ಪ್ರಮುಖರಾದ ರತ್ನಾಕರ, ಉಮೇಶ್ ಶೆಟ್ಟಿ, ಕೃಷ್ಣ ಶೆಟ್ಟಿ, ರವಿ ಆಚಾರ್ಯ‌, ಕಿರಣ್ ಪಿಂಟೋ, ಕಾವೇರಿ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.