ನಗರಸಭೆಯ ನಿಟ್ಟೂರು ವಾರ್ಡಿನ ಪಡುನಿಟ್ಟೂರಿನಲ್ಲಿ ನೂತನ ಅಂಗನವಾಡಿ ಕಟ್ಟಡದ ಕಾಮಗಾರಿಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಶಿಲಾನ್ಯಾಸ ನೆರವೇರಿಸಿದರು.

ಉಡುಪಿ: ನಗರಸಭೆಯ ನಿಟ್ಟೂರು ವಾರ್ಡಿನ ಪಡುನಿಟ್ಟೂರಿನಲ್ಲಿ ನೂತನ ಅಂಗನವಾಡಿ ಕಟ್ಟಡದ ಕಾಮಗಾರಿಗೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಶಿಲಾನ್ಯಾಸ ನೆರವೇರಿಸಿದರು. ಪಡುನಿಟ್ಟೂರು ಭಾಗದ ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆಯಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೂಲಕ ಸುಮಾರು 20 ಲಕ್ಷ ರು. ವೆಚ್ಚದಲ್ಲಿ ನೂತನ ಅಂಗನವಾಡಿ ನಿರ್ಮಾಣಕ್ಕೆ ಚಾಲನೆ ನೀಡಿದ್ದು, ಶೀಘ್ರದಲ್ಲೇ ಅಂಗನವಾಡಿ ಲೋಕಾರ್ಪಣೆಗೊಂಡು ಸ್ಥಳೀಯ ಪುಟಾಣಿಗಳಿಗೆ ಶಿಕ್ಷಣದ ಜೊತೆಗೆ ಪೌಷ್ಟಿಕ ಆಹಾರ ಒದಗಿಸಲು ಸಹಕಾರಿಯಾಗಲಿದೆ ಎಂದರು. ಈ ಸಂದರ್ಭ ನಗರಸಭೆ ಮಾಜಿ ಸದಸ್ಯ ಸಂತೋಷ್ ಜತ್ತನ್, ಸ್ಥಳೀಯ ಮುಖಂಡರಾದ ಅಣ್ಣಪ ಸನಿಲ್, ಜಗದೀಶ್ ಶೆಟ್ಟಿ, ರಂಜನ್ ಶೆಟ್ಟಿ, ನವೀನ್ ಸನಿಲ್, ಪ್ರಸಾದ್ ಶೆಟ್ಟಿ, ಪ್ರಜ್ವಲ್, ಅರವಿಂದ, ಅಶ್ವಿನ್ ಕುಂದರ್, ದಿನೇಶ್ ಜತ್ತನ್, ಸುರೇಂದ್ರ, ಅಂಗನವಾಡಿ ಶಿಕ್ಷಕಿ ರೇವತಿ, ಸುರೇಖ, ಜಯಶ್ರೀ ಮೊದಲಾದವರು ಉಪಸ್ಥಿತರಿದ್ದರು.