ಯತ್ನಾಳ್ ಉಚ್ಚಾಟನೆ ಒಳ್ಳೆಯ ನಿರ್ಧಾರ: ಬಿ.ಸಿ. ಪಾಟೀಲ್

| Published : Mar 28 2025, 12:31 AM IST

ಸಾರಾಂಶ

ಬಸನಗೌಡ ಪಾಟೀಲ ಅವರು ಪಕ್ಷದ ಒಳಗೆ ಇದ್ದು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ ಆರೋಪಿಸಿದರು.

ಹಾವೇರಿ: ಪಕ್ಷದಿಂದ ಬಸನಗೌಡ ಪಾಟೀಲ್ ಯತ್ನಾಳ ಉಚ್ಚಾಟನೆ ಬಹಳ ದುರದೃಷ್ಟಕರ. ಆದರೂ ಪಕ್ಷದ ಹೈಕಮಾಂಡ್ ಒಳ್ಳೆಯ ನಿರ್ಧಾರ ಮಾಡಿದ್ದು, ಪಕ್ಷದ ತತ್ವ ಸಿದ್ಧಾಂತಗಳಿಗೆ ಎಲ್ಲರೂ ಬದ್ಧವಾಗಿರಬೇಕು ಎಂದು ಮಾಜಿ ಸಚಿವ ಬಿ.ಸಿ. ಪಾಟೀಲ್ ತಿಳಿಸಿದರು.

ಗುರುವಾರ ಹಿರೇಕೆರೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಬಸನಗೌಡ ಪಾಟೀಲ ಅವರು ಪಕ್ಷದ ಒಳಗೆ ಇದ್ದು ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರು. ಹೀಗಾಗಿ ಅವರಿಗೆ ಎರಡು ಬಾರಿ ನೋಟಿಸ್ ನೀಡಲಾಗಿತ್ತು. ಆದರೂ ತಿದ್ದಿಕೊಳ್ಳಲಿಲ್ಲ. ವ್ಯಕ್ತಿಗಿಂತ ಪಕ್ಷ ದೊಡ್ಡದು. ನಾನು ಹೋದರೂ ಪಕ್ಷಕ್ಕೆ ಏನೂ ಆಗಲ್ಲ. ಪಕ್ಷ ನಿಂತ ನೀರಲ್ಲ ಹರಿಯುವ ನೀರು ಎಂದರು.

ಬಿ.ವೈ. ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಮಾಡಿದ್ದು ಹೈಕಮಾಂಡ್. ಯಡಿಯೂರಪ್ಪನವರು ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ಅವರ ಬಗ್ಗೆ ಬಸನಗೌಡ ಪಾಟೀಲ ಅವರು ಕೀಳುಮಟ್ಟದಲ್ಲಿ ಮಾತನಾಡಿದ್ದರು. ಮಾತೆತ್ತಿದ್ದರೆ ಅಪ್ಪ, ಮಕ್ಕಳು ಅಂತಿದ್ದರು. ಹೊಂದಾಣಿಕೆ ರಾಜಕಾರಣ ಅನ್ನುತ್ತಿದ್ದರು. ಗಾಂಧಿ ಕುಟುಂಬದಲ್ಲಿ ನೆಹರು ಅವರಿಂದ ರಾಹುಲ್ ಗಾಂಧಿಯವೆರಗೆ, ಮಲ್ಲಿಕಾರ್ಜುನ ಖರ್ಗೆ ಅವರಿಂದ ಪ್ರಿಯಾಂಕ್ ಖರ್ಗೆ, ಸಿದ್ದರಾಮಯ್ಯನವರಿಂದ ಅವರ ಮಕ್ಕಳು ಅದು ರಾಜಕಾರಣದಲ್ಲಿದ್ದಾರೆ. ಹಾಗಾಗಿ ಕುಟುಂಬ ರಾಜಕಾರಣ ಸ್ವಾಭಾವಿಕ ಎಂದರು.ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಯತ್ನಾಳ ಪರ ಮಾತನಾಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಸ್ವಾಮೀಜಿ ಧರ್ಮ ಕಾರ್ಯ ಮಾಡಬೇಕು. ನಾವು ರಾಜಕಾರಣ ಮಾಡಬೇಕು. ನಮ್ಮ ಕೆಲಸ ನಾವು ಮಾಡಬೇಕು. ಅವರ ಕೆಲಸ ಅವರು ಮಾಡಬೇಕು ಎಂದರು.

ನಾನು ಲಿಂಗಾಯತ. ಶಿವಧಾರ ಏನಾದರೂ ಬದಲಾವಣೆ ಆಗುತ್ತಾ? ನಾವೆಲ್ಲರೂ ವೀರಶೈವ ಲಿಂಗಾಯತರು ಒಂದೇ. ನಾವೆಲ್ಲ ಹಿಂದೂಗಳು ಅಲ್ಲವೇ? ಬಸನಗೌಡ ಪಾಟೀಲ ಯತ್ನಾಳ, ಅನಂತಕುಮಾರ್ ಹೆಗಡೆ ಅವರಷ್ಟೇ ಹಿಂದೂಗಳಾ ಎಂದು ಪ್ರಶ್ನಿಸಿದರು. ಕರೆಕ್ಯಾತನಹಳ್ಳಿ- ಕೂಸನೂರು ರಸ್ತೆ ಅಭಿವೃದ್ಧಿಗೆ ಚಾಲನೆ

ಹಾನಗಲ್ಲ: ತಾಲೂಕಿನ ಕರೆಕ್ಯಾತನಹಳ್ಳಿ ಹತ್ತಿರ 2023- 24ನೇ ಸಾಲಿನ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಕಾರ್ಯಕ್ರಮದಡಿ ₹34 ಲಕ್ಷ ವೆಚ್ಚದಲ್ಲಿ ಕರೆಕ್ಯಾತನಹಳ್ಳಿ- ಕೂಸನೂರು ರಸ್ತೆಯಿಂದ ಜಾನಮಟ್ಟಿ ತಾಂಡಾ ಕೂಡುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಶ್ರೀನಿವಾಸ ಮಾನೆ ಭೂಮಿಪೂಜೆ ನೆರವೇರಿಸಿದರು.

ಕರೆಕ್ಯಾತನಹಳ್ಳಿ- ಕೂಸನೂರು ರಸ್ತೆಯಿಂದ ಜಾನಮಟ್ಟಿ ತಾಂಡಾ ಕೂಡುವ ರಸ್ತೆ ಹದಗೆಟ್ಟಿದ್ದರಿಂದ ಕೆಲವರಕೊಪ್ಪ, ಮಾಳಾಪುರ, ಬ್ಯಾತನಾಳ ಸೇರಿದಂತೆ ಆ ಭಾಗದ ಗ್ರಾಮಸ್ಥರು ಕೂಸನೂರು ಮಾರ್ಗವಾಗಿ ಹಾನಗಲ್ಲ ಸೇರಿದಂತೆ ಮತ್ತಿತರೆಡೆ ಸಂಚರಿಸಲು ಅನಾನುಕೂಲ ಉಂಟಾಗುತ್ತಿತ್ತು. ಹಾಗಾಗಿ ಆದ್ಯತೆ ಮೇರೆಗೆ ಈ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲಾಗುತ್ತಿದೆ. ಒಳಮಾರ್ಗದ ಈ ರಸ್ತೆ ನಿರ್ಮಾಣದಿಂದ ಕೂಸನೂರು ಗ್ರಾಮವನ್ನು ಸಂಪರ್ಕಿಸಲು ಸುತ್ತಾಡುವುದು ತಪ್ಪಲಿದೆ ಎಂದು ಹೇಳಿದ ಶಾಸಕ ಮಾನೆ, ನಿಗದಿತ ಕಾಲಮಿತಿಯಲ್ಲಿ ಗುಣಮಟ್ಟದ ಕಾಮಗಾರಿ ನಿರ್ವಹಿಸುವಂತೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಿದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಮುಖಂಡರಾದ ಭೀಮಣ್ಣ ಲಮಾಣಿ, ಭಾಷಾಸಾಬ ಕೋಟಿ, ಕುಮಾರ ಗದ್ದಿ, ಮಂಜು ಆಲದಕಟ್ಟಿ, ನಾಗರಾಜ ವಡ್ಡರ, ನಾಗಪ್ಪ ಪೂಜಾರ, ಗುರುಲಿಂಗಪ್ಪ ಡೊಳ್ಳೇಶ್ವರ, ರಬ್ಬಾನಿ ಕೂಸನೂರ, ಅಲ್ತಾಹಿರ್ ಕಚವಿ, ಬಂಗಾರೆಪ್ಪ ಕಲಕೇರಿ, ಪ್ರಕಾಶ ಮಾಸಣಗಿ, ಬಸವಂತ ನಾಯ್ಕ, ವೀರಭದ್ರಪ್ಪ ಕೋಳೂರ ಇದ್ದರು.