ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ನಾಲ್ನಾಡ್ ಅಂತರ ಗ್ರಾಮ ಹಾಕಿ ಪಂದ್ಯಾವಳಿಯ ಸೋಮವಾರದ ಪಂದ್ಯಗಳಲ್ಲಿ, ಯವಕಪಾಡಿ , ಬಲ್ಲಮಾವಟಿ ಯೆಲ್ಲೋ, ನಾಪೋಕ್ಲು-ಎ, ನೆಲಜಿ, ತಂಡಗಳು ಮುನ್ನಡೆ ಸಾಧಿಸಿದವು.

ದುಗ್ಗಳ ಸದಾನಂದ

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಮೀಪದ ಬಲ್ಲಮಾವಟಿ ಗ್ರಾಮದ ನೇತಾಜಿ ಪ್ರೌಢಶಾಲೆಯ ಆಟದ ಮೈದಾನದಲ್ಲಿ ಆಯೋಜಿಸಲಾಗಿದ್ದ ನಾಲ್ನಾಡ್ ಅಂತರ ಗ್ರಾಮ ಹಾಕಿ ಪಂದ್ಯಾವಳಿಯ ಸೋಮವಾರದ ಪಂದ್ಯಗಳಲ್ಲಿ, ಯವಕಪಾಡಿ , ಬಲ್ಲಮಾವಟಿ ಯೆಲ್ಲೋ, ನಾಪೋಕ್ಲು-ಎ, ನೆಲಜಿ, ತಂಡಗಳು ಮುನ್ನಡೆ ಸಾಧಿಸಿದವು.ಸೋಮವಾರ ಕೊಳಕೇರಿ ಮತ್ತು ಯವಕಪಾಡಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಯವಕಪಾಡಿ ತಂಡ 4 -2 ಅಂತರದಿಂದ ಜಯ ಸಾಧಿಸಿತು. ಯವಕಪಾಡಿ ತಂಡದ ಪರವಾಗಿ ಆಟಗಾರರಾದ ರೋಷನ್ ಮತ್ತು ಬೋಪಣ್ಣ ತಲಾ ಎರಡು ಗೋಲು ಗಳಿಸಿದರು. ಕೊಳಕೇರಿ ತಂಡದ ಗಿಮಿನ್ ಮತ್ತು ತಿಮ್ಮಯ್ಯ ತಲಾ ಒಂದು ಗೋಲು ಗಳಿಸಿದರು ಎರಡನೇ ಪಂದ್ಯ ಬಲಮಾವಟಿ ಯೆಲ್ಲೋ ಮತ್ತು ಮರಂದೋಡ ತಂಡಗಳ ನಡುವೆ ನಡೆಯಿತು. ಬಲ್ಲಮಾವಟಿ ಯೆಲ್ಲೋ ತಂಡ 3- 2 ಅಂತರದಿಂದ ಜಯ ಸಾಧಿಸಿತು. ಬಲ್ಲಮಾವಟಿ ತಂಡದ ಪರವಾಗಿ ಅಪ್ಪಚೆಟ್ಟೋಳಂಡ ಅಯ್ಯಪ್ಪ ಕುಶಾಲ್ ಗೋಲ್ ಗಳಿಸಿದರು. ಮರಂದೋಡ ತಂಡದ ಪರವಾಗಿ ಆಟಗಾರರಾದ ರಾಯಲ್ ಅಯ್ಯಣ್ಣ, ಆಕಾಶ್ ಬಿದ್ದಪ್ಪ ತಲಾ ಒಂದು ಗೋಲು ಗಳಿಸಿದರು.ಕುಂಜಿಲ ತಂಡ ಸ್ಪರ್ಧೆಯಲ್ಲಿ ಪಾಲ್ಗೊಳ್ಳದ ಕಾರಣ ಬಲ್ಲಮಾವಟಿ ವೈಟ್ ತಂಡ ಮುಂದಿನ ಸುತ್ತಿಗೆ ಅರ್ಹತೆ ಗಳಿಸಿತು. ಪೇರೂರು ಮತ್ತು ನಾಪೋಕ್ಲು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ನಾಪೋಕ್ಲು ತಂಡ 2-1 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು. ಪೇರೂರು ತಂಡದ ಪರವಾಗಿ ಸೋಮಣ್ಣ ಒಂದು ಗೋಲು ಗಳಿಸಿದರು. ನಾಪೋಕ್ಲು ತಂಡದ ಪರವಾಗಿ ಆಕಾಶ್ ಮತ್ತು ಪುನೀತ್ ತಲಾ ಒಂದು ಗೋಲು ಗಳಿಸಿದರು. ಬೇತು ತಂಡದ ವಿರುದ್ಧ ನೆಲಜಿ ತಂಡ ಜಯ ಗಳಿಸಿತು. ಬೇತು ತಂಡದ ಪರವಾಗಿ ಜತಿನ್, ಲಿನಿತ್ ತಲಾ ಒಂದು ಗೋಲು ಗಳಿಸಿದರು. ನೆಲಜಿ ತಂಡದ ಪರವಾಗಿ ಕೌಶಿಕ್ 2 ಹಾಗೂ ಡಿವಿನ್ 1 ಗೋಲುಗಳಿಸಿದರು.ಇಂದಿನ ಪಂದ್ಯಗಳು

ಮೊದಲ ಸೆಮಿ ಫೈನಲ್10:30ಕ್ಕೆ ನಾಪೋಕ್ಲು- ಯವಕಪಾಡಿ,

1.30ಕ್ಕೆ ನಾಪೋಕ್ಲುಬ್ಲೂ –ಬಲ್ಲಮಾವಟಿ

ಅಂತರ ಗ್ರಾಮ ಮಹಿಳಾ ತಂಡಗಳ ನಡುವೆ ಹಗ್ಗಜಗ್ಗಾಟ ಸ್ಪರ್ಧೆಯು ನಡೆಯಲಿದೆ.