ಸಾರಾಂಶ
ಜಿಲ್ಲಾ ಬ್ರಾಹ್ಮಣ ಸಂಘದಿಂದ ಭಾನುವಾರ ಗದಗ ನಗರದ ಶಂಕರಮಠ ಸಮುದಾಯ ಭವನದಲ್ಲಿ 2024ನೇ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭ ನೆರವೇರಿತು.
ಬ್ರಾಹ್ಮಣ ಸಂಘದ ಗೌರವಾಧ್ಯಕ್ಷ ಧಿರೇಂದ್ರ ಹುಯಿಲಗೊಳ ಉದ್ಘಾಟನೆ
ಗದಗ: ಜಿಲ್ಲಾ ಬ್ರಾಹ್ಮಣ ಸಂಘದಿಂದ ಭಾನುವಾರ ಗದಗ ನಗರದ ಶಂಕರಮಠ ಸಮುದಾಯ ಭವನದಲ್ಲಿ 2024ನೇ ವರ್ಷದ ದಿನದರ್ಶಿಕೆ ಬಿಡುಗಡೆ ಸಮಾರಂಭ ನೆರವೇರಿತು. ರತ್ನಾಕರ ಭಟ್ ಜೋಶಿ ಸಾನಿಧ್ಯ ವಹಿಸಿದ್ದರು. ಹೃದಯರೋಗ ತಜ್ಞ ಡಾ.ಕೆ.ಡಿ. ಗೊಡಖಿಂಡಿ, ಜಿಲ್ಲಾ ಬ್ರಾಹ್ಮಣ ಸಂಘದ ಗೌರವಾಧ್ಯಕ್ಷ ಧಿರೇಂದ್ರ ಹುಯಿಲಗೊಳ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಅತಿಥಿಗಳಾಗಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಸಂಘಟನಾ ಕಾರ್ಯದರ್ಶಿ ವಿಜಯ ನಾಡಜೋಶಿ, ಗದಗ ತಾಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ಶ್ರೀನಿವಾಸ ಹುಯಿಲಗೋಳ, ಡಾ. ಸಂಜೀವ ಜೋಶಿ, ವಿಶ್ವನಾಥ ಕುಲಕರ್ಣಿ, ದತ್ತಾತ್ರೇಯ ಜೋಶಿ, ನಾಗರಾಜ ಕುಲಕರ್ಣಿ, ಅನಿಲ ವೈದ್ಯ, ಕಲ್ಲಿನಾಥ್ ಕುಲಕರ್ಣಿ, ಆನಂದರಾವ್ ಇನಾಮದಾರ, ನರಗುಂದ ತಾಲೂಕು ಅಧ್ಯಕ್ಷ ಮಹದೇವ ಹೊಸೂರ, ಜಿಲ್ಲಾ ಬ್ರಾಹ್ಮಣ ಸಂಘದ ಮಹಿಳಾ ಘಟಕದ ಸಂಚಾಲಕಿ ಕಲಾವತಿ ಅಲಬೂರ, ಸುಮನ ಪಾಟೀಲ ಹಾಗು ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ಸಮಾಜದ ಗಣ್ಯರು ಪ್ರಮುಖರು ಪಾಲ್ಗೊಂಡಿದ್ದರು. ಅಧ್ಯಕ್ಷತೆಯನ್ನು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ವೆಂಕಟೇಶ ಕುಲಕರ್ಣಿ ವಹಿಸಿದ್ದರು. ಸಾಕ್ಷಿ ಪುರಾಣಿಕ ಹಾಗೂ ಶ್ರದ್ಧಾ ಪುರಾಣಿಕ ಪ್ರಾರ್ಥಿಸಿದರು. ಅನೀಲ ವೈದ್ಯ ಸ್ವಾಗತಿಸಿದರು, ದತ್ತಾತ್ರೇಯ ಜೋಶಿ ಪ್ರಾಸ್ತವಿಕವಾಗಿ ಮಾತನಾಡಿದರು, ಪ್ರಕಾಶ ಮಂಗಳೂರು ನಿರೂಪಿಸಿದರು. ಕೃಷ್ಣಾಜಿ ನಾಡಿಗೇರ ವಂದಿಸಿದರು.