ಆಶ್ರಮದಲ್ಲಿ ಯಡಿಯೂರಪ್ಪ ಹುಟ್ಟುಹಬ್ಬ ಆಚರಣೆ

| Published : Mar 02 2025, 01:15 AM IST

ಸಾರಾಂಶ

ಗವೇನಹಳ್ಳಿಯಲ್ಲಿರುವ ಕಾಮಧೇನು ವಿದ್ಯಾಶ್ರಮ ಹಾಗೂ ಚೈತನ್ಯ ಮಂದಿರ ವೃದ್ಧಾಶ್ರಮದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ರೈತನ ನಾಯಕ ಬಿ.ಎಸ್. ಯಡಿಯೂರಪ್ಪನವರ ೮೨ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ರಾಜ್ಯ ಕಂಡ ರೈತ ನಾಯಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ದೇವರು ಇನ್ನೂ ಹೆಚ್ಚು ಕಾಲ ಆರೋಗ್ಯ ಆಯಸ್ಸು ನೀಡಲಿ ಎಂದು ಹಾರೈಸಿದರು. ಜೊತೆಗೆ ಅವರು ಅಧಿಕಾರ ಅವಧಿಯಲ್ಲಿ ಜನರಿಗೆ ಮಾಡಿದ ಸೇವೆಯನ್ನು ನೆನಪಿಸಿಕೊಂಡರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಸಮೀಪ ಬೈಪಾಸ್ ರಸ್ತೆ ಗವೇನಹಳ್ಳಿಯಲ್ಲಿರುವ ಕಾಮಧೇನು ವಿದ್ಯಾಶ್ರಮ ಹಾಗೂ ಚೈತನ್ಯ ಮಂದಿರ ವೃದ್ಧಾಶ್ರಮದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿ ರೈತನ ನಾಯಕ ಬಿ.ಎಸ್. ಯಡಿಯೂರಪ್ಪನವರ ೮೨ನೇ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಅಮಿತ್ ಕುಮಾರ್ ಶೆಟ್ಟ ಮಾತನಾಡಿ, ರಾಜ್ಯ ಕಂಡ ರೈತ ನಾಯಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ದೇವರು ಇನ್ನೂ ಹೆಚ್ಚು ಕಾಲ ಆರೋಗ್ಯ ಆಯಸ್ಸು ನೀಡಲಿ ಎಂದು ಹಾರೈಸಿದರು. ಜೊತೆಗೆ ಅವರು ಅಧಿಕಾರ ಅವಧಿಯಲ್ಲಿ ಜನರಿಗೆ ಮಾಡಿದ ಸೇವೆಯನ್ನು ನೆನಪಿಸಿಕೊಂಡರು.

ಈ ವೇಳೆ ಹಾಸನ ನಗರ ಮಂಡಲದ ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ಯೋಗೀಶ್ (ಮಂಜು), ಜಿಲ್ಲೆಯ ಯುವ ಮೋರ್ಚಾ ಮಾಜಿ ಅಧ್ಯಕ್ಷ ಚೆನ್ನಕೇಶವ ಮುಂತಾದವರು ಇದ್ದರು.