ಅಧಿಕಾರ ಮತ್ತು ಆದರ್ಶದ ನಡುವೆ ಯಾವಾಗಲೂ ಸಂಘರ್ಷ ಇರುತ್ತದೆ. ಆದರೆ, ಅಧಿಕಾರ ಬಂದಾಗಲೂ ಆದರ್ಶಗಳನ್ನು ಬಿಡದೇ ಅಧಿಕಾರವನ್ನು ಆದರ್ಶದ ಪಾಲನೆಗೆ ಉಪಯೋಗ ಮಾಡಿಕೊಂಡವರು ಧೀಮಂತ ನಾಯಕರಾಗುತ್ತಾರೆ. ಅವರು ಯಡಿಯೂರಪ್ಪನವರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಹಾವೇರಿ: ಅಧಿಕಾರ ಮತ್ತು ಆದರ್ಶದ ನಡುವೆ ಯಾವಾಗಲೂ ಸಂಘರ್ಷ ಇರುತ್ತದೆ. ಆದರೆ, ಅಧಿಕಾರ ಬಂದಾಗಲೂ ಆದರ್ಶಗಳನ್ನು ಬಿಡದೇ ಅಧಿಕಾರವನ್ನು ಆದರ್ಶದ ಪಾಲನೆಗೆ ಉಪಯೋಗ ಮಾಡಿಕೊಂಡವರು ಧೀಮಂತ ನಾಯಕರಾಗುತ್ತಾರೆ. ಅವರು ಯಡಿಯೂರಪ್ಪನವರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಮೇ 9 ರಂದು ಚಿತ್ರದುರ್ಗದಲ್ಲಿ ನಡೆಯುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಭಿಮಾನೋತ್ಸವ ಕಾರ್ಯಕ್ರಮದ ನಿಮಿತ್ತ ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ನಾವೆಲ್ಲ ಸಾರ್ವಜನಿಕ ಜೀವನಕ್ಕೆ ಬಂದಾಗ ನಮ್ಮದೇ ಆದ ಆದರ್ಶಗಳನ್ನು ಇಟ್ಟುಕೊಂಡಿದಿದ್ದೇವೆ. ನಮ್ಮ ಆದರ್ಶ ಮತ್ತು ಅಧಿಕಾರ ಎರಡರ ನಡುವೆ ಸಂಘರ್ಷ ಇರುತ್ತದೆ. ಆದರ್ಶ ತಾಯಿ ಇದ್ದ ಹಾಗೆ, ಅಧಿಕಾರ ಕಟ್ಟಿಕೊಂಡ ಹೆಂಡತಿ ಇದ್ದ ಹಾಗೇ, ತಾಯಿ ಜನ್ಮ ಕೊಟ್ಟಿದ್ದೇನೆ ನನ್ನ ಮಗ ನನ್ನ ಮಾತು ಕೇಳುತ್ತಾನೆ ಎಂದುಕೊಳ್ಳುತ್ತಾಳೆ. ಹೆಂಡತಿ ನಾನು ಇವನಿಗೋಸ್ಕರ ತವರು ಮನೆ ಬಿಟ್ಟು ಬಂದಿದ್ದೇನೆ ನನ್ನ ಮಾತು ಕೇಳುತ್ತಾನೆ ಎಂದುಕೊಳ್ಳುತ್ತಾಳೆ. ಅಧಿಕಾರ ಮತ್ತು ಆದರ್ಶದ ನಡುವೆ ಯಾವಾಗಲೂ ಸಂಘರ್ಷ ಇರುತ್ತದೆ. ಆದರೆ, ಅಧಿಕಾರ ಬಂದಾಗಲೂ ಕೂಡ ಆದರ್ಶಗಳನ್ನು ಬಿಡದೇ ಅಧಿಕಾರವನ್ನು ಆದರ್ಶದ ಪಾಲನೆಗೆ ಉಪಯೋಗ ಮಾಡಿಕೊಂಡವರು ಧೀಮಂತ ನಾಯಕರಾಗುತ್ತಾರೆ. ಅವರು ಯಡಿಯೂರಪ್ಪನವರು ಎಂದು ಹೇಳಿದರು.
ರೈತರ ಪರವಾಗಿ ರಾಜಕಾರಣ ಮಾಡುವ ನಾಯಕರು ಮೊದಲು ಇರಲಿಲ್ಲ. ವಿರೋಧ ಪಕ್ಷದಲ್ಲಿ ಇದ್ದರೂ ಒಬ್ಬರು, ಇಬ್ಬರೇ. ಶಾಸಕರಿದ್ದರೂ ರೈತರ ಪರ ಹೋರಾಟ ಮಾಡಿ ಅದನ್ನು ಮುಖ್ಯಮಂತ್ರಿಗಳ ವರೆಗೆ ತೆಗೆದುಕೊಂಡು ಹೋಗಿ ರಾಜ್ಯದಲ್ಲಿ ರೈತರ ಪರ ಹೋರಾಟ ಮಾಡುವ ಆಯಾಮ ತಂದವರು ಯಡಿಯೂರಪ್ಪ ಅವರು. ಯಾರು ವಿರೋಧ ಪಕ್ಷ ಇದ್ದಾಗ ಹೋರಾಟ ಮಾಡಿದ್ದರೋ ಅಧಿಕಾರಕ್ಕೆ ಬಂದಾಗ ಅದನ್ನು ಜಾರಿಗೆ ತರುವ ಪ್ರಯತ್ನ ಮಾಡಿದರು. ಅವರು ಮೊದಲು ಅಧಿಕಾರಕ್ಕೆ ಬಂದಾಗ ನಾಲ್ಕು ವರ್ಷದ ಅವಧಿಯಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದರು. 7.36 ಲಕ್ಷ ಎಕರೆ ಹೊಸದಾಗಿ ನೀರಾವರಿ ಮಾಡಿರುವ ದಾಖಲೆ ಮಾಡಿದರು ಎಂದು ಹೇಳಿದರು.ಬಹಳ ಜನರು ಮಂತ್ರಿಗಳಾಗಿ ಹೋಗಿದ್ದಾರೆ. ಆದರೆ, ಎಂಟತ್ತು ಜನ ಮಂತ್ರಿಗಳು ನೆನಪಿದ್ದಾರೆ. ಮುಖ್ಯಮಂತಿಗಳಲ್ಲಿ ನಿಜಲಿಂಗಪ್ಪ, ದೇವರಾಜ್ ಅರಸು, ಯಡಿಯೂರಪ್ಪ ಅವರ ಹೆಸರು ನೆನಪಿಗೆ ಬರುತ್ತವೆ. ಅವರು ಈ ರಾಜ್ಯದಲ್ಲಿ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ ಎಂದರು.
ಮೇ 9ರಂದು ಹಾವೇರಿ ಜಿಲ್ಲೆಯಿಂದ 1 ಲಕ್ಷ ಜನರನ್ನು ಸೇರಿಸುವ ಪಯತ್ನ ಮಾಡಬೇಕು. ನಮ್ಮ ಅಭಿಮಾನದ ಶಕ್ತಿಯನ್ನು ಮೇ 9ಕ್ಕೆ ತೋರಿಸೋಣ ಎಂದು ಹೇಳಿದರು. ಈ ಸಂಧರ್ಭದಲ್ಲಿ ಲೋಕಸಭಾ ಸದಸ್ಯರಾದ ಬಿ.ವೈ. ರಾಘವೇಂದ್ರ, ಪಕ್ಷದ ಜಿಲ್ಲಾಧ್ಯಕ್ಷರಾದ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಸಚಿವ ಬಿ.ಸಿ. ಪಾಟೀಲ್, ಮಾಜಿ ಶಾಸಕ ಅರುಣಕುಮಾರ ಪೂಜಾರ, ಶಿವರಾಜ ಸಜ್ಜನ, ಡಿ.ಎಂ.ಸಾಲಿ, ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.