ಸಾರಾಂಶ
ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಆರ್.ಎಂ.ಶಹಾ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಯೋಗದಿನ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಇಂಡಿ
ಪಟ್ಟಣದ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಆರ್.ಎಂ.ಶಹಾ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಯೋಗದಿನ ಆಚರಿಸಲಾಯಿತು.ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಿ.ಆರ್.ಶಹಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಪೂರ್ವಜರು ರೂಢಿಸಿಕೊಂಡು ಬಂದ ಯೋಗ ಅಭ್ಯಾಸವು ವಿಶ್ವಕ್ಕೆ ತಿಳಿಸಿಕೊಟ್ಟ ಭವ್ಯ ಪರಂಪರೆ ಮತ್ತು ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಮಕ್ಕಳು ದಿನನಿತ್ಯ ಯೋಗಾಭ್ಯಾಸ ಮಾಡುವ ಮೂಲಕ ಸರ್ವರೋಗಗಳಿಂದ ಮುಕ್ತರಾಗಬೇಕೆಂದು ಹೇಳಿದರು.ಸಂಸ್ಥೆಯ ಶೈಕ್ಷಣಿಕ ಮಾರ್ಗದರ್ಶಕ ನಜೀರ್ ಹುಂಡೇಕರ್ ಮಾತನಾಡಿ, ಪ್ರತಿಯೊಬ್ಬರು ಆರೋಗ್ಯಕರ ಜೀವನವನ್ನು ನಡೆಸಲು, ಮಾನಸಿಕ ಒತ್ತಡ ನಿವಾರಣೆಗೆ, ಖಿನ್ನತೆ ಮತ್ತು ಹೃದಯಾಘಾತ ತಡೆಗೆ ಯೋಗಾಭ್ಯಾಸವು ಒಂದು ವರದಾನವಾಗಿದೆ. ಆದ ಕಾರಣ ಪ್ರತಿಯೊಬ್ಬ ವಿದ್ಯಾರ್ಥಿ ಯೋಗಾಭ್ಯಾಸವನ್ನು ರೂಢಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ ಯೋಗ ಶಿಕ್ಷಕ ವೈ.ಎಂ.ಬಾಗೇವಾಡಿ ಯೋಗಾಸನಗಳನ್ನು ಮಾಡುವ ಮೂಲಕ ಮಕ್ಕಳಿಗೆ ಪ್ರತಿಯೊಂದು ಆಸನಗಳ ಮಹತ್ವವನ್ನು ತಿಳಿಸಿಕೊಟ್ಟರು. ವಿದ್ಯಾರ್ಥಿಗಳಾದ ಶರಣಬಸು ಕುಂಬಾರ, ರಾಹಿಲ್ ಬೀಳಗಿ ಮತ್ತು ಕುಮಾರಿ ಶ್ವೇತಾ ಮದರಖಂಡಿ ಯೋಗದಿನದ ಇತಿಹಾಸ ಮತ್ತು ಮಹತ್ವದ ಕುರಿತು ಭಾಷಣ ಮಾಡಿದರು. ಈ ಕಾರ್ಯಕ್ರಮದಲ್ಲಿ ವಿವಿಧ ಆಸನಗಳನ್ನು ಗುರುತಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಜಯಶಾಲಿಯಾದ ಕುಮಾರ ಸ್ವಯಂ ಚಿಮ್ಮಲಗಿ ಹಾಗೂ ಕುಮಾರ ಶ್ರೀರಾಜ ಬೀಳಗಿ ಅವರಿಗೆ ಬಹುಮಾನ ನೀಡಲಾಯಿತು.ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತಾಧಿಕಾರಿ ಕಲ್ಪನಾ ಶಹಾ, ಎಫ್. ಕೆ. ದೋಶಿ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ದಯಾನಂದ ದಳವಾಯಿ, ಶಾಲಾ ವಿಭಾಗದ ಪ್ರಾಂಶುಪಾಲ ಪ್ರಕಾಶ್ ಪಾಟೀಲ್ ಹಾಗೂ ದೈಹಿಕ ಶಿಕ್ಷಕ ಗೌರೀಶ್ ಪಾಟೀಲ್, ಮುಬಾರಕ್ ಸೈಯ್ಯದ್ ಎಲ್ಲಾ ಸಿಬ್ಬಂದಿ ವರ್ಗದವರು, ಎನ್.ಸಿ.ಸಿ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕುಮಾರ ಬಾಹುಬಲಿ ಪಂಡಿತ ಸ್ವಾಗತಿಸಿದರು.ಕುಮಾರ ಸಂದೀಪ ನಾಗೋಡ ಮತ್ತು ಕುಮಾರಿ ಮಹೇಕ್ ಗೌಂಡಿ ನಿರೂಪಿಸಿದರು. ಕುಮಾರಿ ನಾಗಮ್ಮ ಮದರಿ ವಂದಿಸಿದರು.