ಒತ್ತಡದ ಮನಸ್ಥಿತಿಗೆ ಯೋಗ ದಿವ್ಯೌಷಧ : ಮಂಜುಳಾ

| Published : Nov 12 2024, 12:47 AM IST

ಸಾರಾಂಶ

ಸೊರಬ: ಆಧುನಿಕ ಜೀವನ ಪದ್ಧತಿಯಲ್ಲಿ ಒತ್ತಡದ ಮನಸ್ಥಿತಿಗೆ ಯೋಗಾಭ್ಯಾಸ, ಪ್ರಾಣಾಯಾಮ ಮತ್ತು ಧ್ಯಾನ ದಿವ್ಯೌಷಧ ಎಂದು ಮುಖ್ಯ ಶಿಕ್ಷಕಿ ಸಿ.ಬಿ.ಮಂಜುಳಾ ಹೇಳಿದರು.

ಸೊರಬ: ಆಧುನಿಕ ಜೀವನ ಪದ್ಧತಿಯಲ್ಲಿ ಒತ್ತಡದ ಮನಸ್ಥಿತಿಗೆ ಯೋಗಾಭ್ಯಾಸ, ಪ್ರಾಣಾಯಾಮ ಮತ್ತು ಧ್ಯಾನ ದಿವ್ಯೌಷಧ ಎಂದು ಮುಖ್ಯ ಶಿಕ್ಷಕಿ ಸಿ.ಬಿ.ಮಂಜುಳಾ ಹೇಳಿದರು. ಪಟ್ಟಣದ ಶ್ರೀ ರಂಗ ಕನ್ವೆನ್ಷನ್ ಹಾಲ್‌ನಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಸುರಭಿ ಶಾಖೆಯಿಂದ ಉಚಿತ ಯೋಗ ತರಬೇತಿ ಶಿಬಿರದ ನಿಮಿತ್ತ ಹಮ್ಮಿಕೊಂಡ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಿತ್ಯ ಜೀವನದಲ್ಲಿ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳುವುದರಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ. ಯೋಗ ಮಾಡುವುದರಿಂದ ಆನೇಕ ರೋಗಗಳಿಂದ ದೂರವಿರಬಹುದು. ಯೋಗ ಕಲೆಯು ಭಾರತದ ಪ್ರಾಚೀನ ಆರೋಗ್ಯ ಸಂರಕ್ಷಣೆಯ ನೈಸರ್ಗಿಕ ಸಂಜೀವಿನಿಯಾಗಿದೆ ಎಂದರು.

ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಕಳೆದ ೪೫ ವರ್ಷಗಳಿಂದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಚಿತವಾಗಿ ಯೋಗ ಶಿಕ್ಷಣ ನೀಡಲಾಗುತ್ತಿದ್ದು, ಪಟ್ಟಣದಲ್ಲಿ ಕಳೆದ ೫೭ದಿನಗಳಿಂದ ಯೋಗ ಶಿಬಿರ ನಡೆಸಲಾಗುತ್ತಿದೆ. ಸುಮಾರು ಐದು ಸಾವಿರ ವರ್ಷದ ಇತಿಹಾಸವಿರುವ ಯೋಗಕ್ಕೆ ವಿಶ್ವ ಮಾನ್ಯತೆ ದೊರೆತಿರುವುದು ನಮ್ಮೆಲ್ಲರ ಹೆಮ್ಮೆಯ ವಿಷಯವಾಗಿದೆ ಎಂದರು. ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಹಾಗೂ ಹಿರಿಯ ವಕೀಲ ಎಂ.ಆರ್. ಪಾಟೀಲ್, ಯೋಗ ಬಂಧುಗಳಾದ ವಿ.ಕೆ.ದಿನೇಶ್, ಬಿ.ವಿ. ಚಂದ್ರಶೇಖರ್, ಡಾ.ಶ್ರೀಧರ್, ನಾಗರಾಜ್, ಸಿದ್ದು ಪೂಜಾರಿ, ಗಣಪತಿ, ವೈ.ಜಿ.ಗುರುಮೂರ್ತಿ, ರಾಮಚಂದ್ರಪ್ಪ, ಡಿ.ಸಿ.ರಾಘವೇಂದ್ರ, ಈಶ್ವರ್, ಹೂವಪ್ಪ ಯಂಕೇನ್, ಲಕ್ಷ್ಮಣ, ತಿಮ್ಮಪ್ಪ, ಆ.ಕೋ.ವಿರೂಪಾಕ್ಷಪ್ಪ, ರೇಖಾ, ಪರಮೇಶ್ವರ್, ರೂಪಾ ಮಧುಕೇಶ್ವರ, ನೇತ್ರಾ, ವಿದ್ಯಾ, ಲಲಿತಾ, ಶಶಿಕಲಾ, ತಾರಾ, ಪಿ. ಜ್ಯೋತಿ, ಭೂಮಿ, ಪೃಥ್ವಿ, ಸಾತ್ವಿಕ್, ಶಿವಾನಂದ್, ಸುರೇಖಾ ಸೇರಿದಂತೆ ಇತರರಿದ್ದರು.