ಯೋಗ ದಿನಾಚರಣೆ ಅಂಗವಾಗಿ ರಾಮ ಮಂದಿರದಲ್ಲಿ ಸೋಮವಾರ ಯೋಗ ದಿನ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಯೋಗ ದಿನಾಚರಣೆ ಅಂಗವಾಗಿ ರಾಮ ಮಂದಿರದಲ್ಲಿ ಸೋಮವಾರ ಯೋಗ ದಿನ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ವೈದ್ಯಕೀಯ ಶಿಕ್ಷಣ ಸಂಸ್ಥೆ ಪಕೃತಿ ಚಿಕಿತ್ಸಕ ಮತ್ತು ಸಲಹೆಗಾರ ಡಾ. ಪಿ.ಜಿ. ಅರುಣ್ ಕುಮಾರ್ ಅವರು ಯೋಗದ ಪರಿಪೂರ್ಣ ಅರ್ಥ, ಜೀವನ ಶೈಲಿ ಹಾಗೂ ದೃಷ್ಟಿಕೋನಗಳ ಮೇಲೆ ಅದರ ಪ್ರಭಾವವನ್ನು ವಿವರಿಸಿದರು. 45 ನಿಮಿಷಗಳ ಕಾಲ ಯೋಗದ ಮೂಲ ಶಾಂತ ಮತ್ತು ಅನುಶಾಸನಾತ್ಮಕ ತತ್ತ್ವಗಳ ಮೇಲೆ ಗಮನವನ್ನು ಕೇಂದ್ರಿಕೃತಗೊಳಿಸಿ ಜನರಿಗೆ ಯೋಗಭ್ಯಾಗಸದ ಬಗ್ಗೆ ಅವರು ಮಾಹಿತಿ ನೀಡಿದರು. ವೈದ್ಯೆ ಪಾರ್ವತಿ ಮಾತನಾಡಿ, ಆಧುನಿಕ ವಿಜ್ಞಾನ, ಪ್ರಾಚೀನ ಯೋಗ ಪದ್ಧತಿಯ ಸಮ್ಮಿಲನದ ಬಗ್ಗೆ ವಿವರಿಸಿದರು.

ಯೋಗ ಶಿಕ್ಷಕ ರಾಜು ದಿನದ ಮಹತ್ವದ ಕುರಿತು ಮಾತನಾಡಿದರು. ಯೋಗ ತರಬೇತಿ ನೀಡುತ್ತಿರುವ ವಿ.ಎ. ಸಂತೋಷ್, ರಾಜು, ಕನಕ ಜ್ಯೋತಿ ಅವರನ್ನು ಸನ್ಮಾನಿಸಲಾಯಿತು.

ಓಂ ಶಕ್ತಿ ಯೋಗ ಸಂಘದ ಮಹಿಳಾ ಸದಸ್ಯರು, ಮಕ್ಕಳು, ಹಿರಿಯರು ಯೋಗ ಸಮೂಹ ಪ್ರದರ್ಶನ ನೀಡಿದರು.

ಪವಿತ್ರ, ಅಂಕಿತ, ತೃಷಲ್ ಸನ್ಮಾನ್, ಗಂಗೂಬಾಯ್, ಮಹಿಮ ಸತ್ಯ, ಮಂಗಳ ಕಾಮತ್, ಮನು ಅಚ್ಚಮಯ್ಯ, ರಾಕೇಶ್ ಹಾಗೂ ಇನ್ನಿತರರು ಇದ್ದರು.