ಹನೂರು ತಾಲೂಕಿನ ವಿವಿಧೆಡೆ ಯೋಗ ದಿನಾಚರಣೆ

| Published : Jun 22 2024, 12:54 AM IST

ಸಾರಾಂಶ

ಹನೂರು ತಾಲೂಕಿನ ವಿವಿಧೆಡೆ ಯೋಗ ದಿನವನ್ನು ಆಚರಿಸಲಾಯಿತು. ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಸಾಲೂರು ಬೃಹನ್ ಮಠದ ಬಳಿ ಶಾಲಾ ವಿದ್ಯಾರ್ಥಿಗಳಿಂದ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ಹನೂರು: ತಾಲೂಕಿನ ವಿವಿಧೆಡೆ ಯೋಗ ದಿನವನ್ನು ಆಚರಿಸಲಾಯಿತು.

ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಸಾಲೂರು ಬೃಹನ್ ಮಠದ ಬಳಿ ಶಾಲಾ ವಿದ್ಯಾರ್ಥಿಗಳಿಂದ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಾಲೂರು ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಓದಿನ ಜೊತೆಗೆ ದೇಹವನ್ನು ಕಟ್ಟು ಮಸ್ತಾಗಿ ಇಟ್ಟುಕೊಳ್ಳಲು ಯೋಗ ಮಾಡಬೇಕು ಎಂದರು.

ಯೋಗದಿಂದ ಮಕ್ಕಳು ತಮ್ಮ ಜ್ಞಾನವನ್ನು ಸಹ ಹೆಚ್ಚಿಸಿಕೊಳ್ಳಬಹುದು ಯೋಗ ದಿನಾಚರಣೆ ನಡೆಯುತ್ತಿರುವುದು ವಿದ್ಯಾರ್ಥಿಗಳಿಗೆ ಅನುಕೂಲದಾಯಕವಾಗಿದೆ. ವರ್ಷವೆಲ್ಲ ವಿದ್ಯಾರ್ಥಿಗಳು ಯೋಗ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರು.

ಜಿ.ವಿ ಗೌಡ ಪ್ರೌಢಶಾಲೆಯಲ್ಲಿ

ಪಟ್ಟಣದ ಜಿ.ವಿ. ಗೌಡ ಪ್ರೌಢಶಾಲೆ ಆವರಣದಲ್ಲಿ ವಿದ್ಯಾರ್ಥಿಗಳಿಂದ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಶಿಕ್ಷಕರು ಸಹ ವಿದ್ಯಾರ್ಥಿಗಳ ಜೊತೆ ಯೋಗ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು.

ಸೇಂಟ್ ಮೇರಿ ಶಾಲೆಯಲ್ಲಿ

ಮಾರ್ಟಳ್ಳಿ ಸೆಂಟ್ ಮೇರಿಸ್ ಶಾಲೆಯಲ್ಲಿ ಯೋಗ ದಿನ ಆಚರಿಸಲಾಯಿತು. ಅಂತಾರಾಷ್ಟ್ರೀಯ ಯೋಗ ದಿನದ ಪ್ರಯುಕ್ತ ವಿದ್ಯಾರ್ಥಿಗಳ ಜೊತೆ ಶಿಕ್ಷಕರು ಸಹ ಯೋಗ ಮಾಡುವ ಮೂಲಕ ಮಕ್ಕಳಿಗೆ ಶಿಕ್ಷಣ ನೀಡುವ ಜೊತೆಗೆ ಯೋಗ ಸಹ ಮಾಡುವುದರಿಂದ ರೋಗ ಮುಕ್ತರಾಗಬಹುದು ಎಂದು ಶಾಲಾ ಮುಖ್ಯ ಶಿಕ್ಷಕ ಸುನಿಲ್ ಮಾಲ್ಟಿಷ್ ದೈಹಿಕ ಶಿಕ್ಷಕರಾದ ಆಗಸ್ಟಿನ್ ಮತ್ತು ಸಹ ಶಿಕ್ಷಕ ಅಲೆಕ್ಸ್ ಉಪಸ್ಥಿತರಿದ್ದರು. ವ್ಯಾಯಾಮ ನಿರಂತರವಾಗಿ ಮನುಷ್ಯನ ಜೊತೆಗೆ ಇರಲಿ: ನ್ಯಾ.ಬಸವರಾಜ ತಳವಾರಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಮನುಷ್ಯನ ಆರೋಗ್ಯ ಇರಬೇಕು ಅಂದ್ರೆ ವ್ಯಾಯಾಮ ನಿರಂತರವಾಗಿ ಮನುಷ್ಯನ ಜೊತೆಗೆ ಇರಲಿ ಎಂದು ಹಿರಿಯ ಸಿವಿಲ್ ಮತ್ತು ಜೆಎಂಎಫ್ ಸಿ ನ್ಯಾಯಾಧೀಶ ಬಸವರಾಜ ತಳವಾರ ಹೇಳಿದರು.ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು‌ ಸೇವೆಗಳ ಸಮಿತಿ, ವಕೀಲರ ಸಂಘ, ಅರಣ್ಯ ಇಲಾಖೆ, ಸಹಯೋಗದಲ್ಲಿ ನಡೆದ ಯೋಗ ದಿನಾಚರಣೆಯಲ್ಲಿ ಮಾತನಾಡಿದರು.ಯೋಗ ದೇಶದ ಪ್ರಾಚೀನ ಕಾಲದ್ದು, ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗ ಎಂದು ಹೆಸರು ಬಂದಿದೆ. ಆರೋಗ್ಯ ಇರಬೇಕಾದ್ರೆ ರಕ್ತ ಸಂಚಲನ ಆಗಬೇಕು ಅಂದ್ರೆ ವ್ಯಾಯಾಮ ರೂಢಿಸಿಕೊಳ್ಳಿ ಎಂದರು.ಯೋಗ ದಿನಾಚರಣೆಯಲ್ಲಿ ಪ್ರಧಾನ‌ ಸಿವಿಲ್ ನ್ಯಾಯಾಧೀಶ ಶಿವಕುಮಾರ್ ಜಿ.ಜೆ,ಅಪರ ಸಿವಿಲ್ ನ್ಯಾಯಾಧೀಶೆ ಕಾಂತಮ್ಮ‌ ಎ.ಎಸ್, ವಕೀಲರು ಹಾಗೂ ನ್ಯಾಯಾಂಗ ಇಲಾಖೆಯ ಸಿಬ್ಬಂದಿ ಇದ್ದರು.

ಕೊಳ್ಳೇಗಾಲ ಸ.ಹಿ.ಪ್ರಾ ನ್ಯಾಷನಲ್ ಶಾಲೆಯಲ್ಲಿ ಯೋಗಕೊಳ್ಳೇಗಾಲ: ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ನ್ಯಾಷನಲ್ ಶಾಲೆಯಲ್ಲಿ ಶುಕ್ರವಾರ 10 ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಣೆ ಮಾಡಲಾಯಿತು.ಶಾಲಾ ಮೈದಾನದಲ್ಲಿ ಶುಕ್ರವಾರ ಯೋಗ ಶಿಕ್ಷಕ ಪರಶಿವಮೂರ್ತಿ ಅವರು ವೃಕ್ಷಾಸನ, ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋಣಾಸನ, ಭದ್ರಾಸನ, ವಜ್ರಾಸನ, ಭುಜಾಂಗಸನ, ಪ್ರಾಣಾಯಮ, ಸೇರಿದಂತೆ ಇತರೆ ಆಸಾನಗಳನ್ನು ಮಕ್ಕಳಿಗೆ ಹೇಳಿಕೊಡಲಾಯಿತು.ಈ ಸಂದರ್ಭದಲ್ಲಿ ಸರ್ಕಾರಿ ನ್ಯಾಷನಲ್ ಶಾಲೆಯ ಮುಖ್ಯ ಶಿಕ್ಷಕಿ ಸುನೀತಾ, ಹಾಗೂ ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.