ಮಾಹೆಯಲ್ಲಿ ಯೋಗ ದಿನಾಚರಣೆ: ಯೋಗ ಸಾಧಕರಿಗೆ ಸನ್ಮಾನ

| Published : Jun 24 2024, 01:35 AM IST

ಮಾಹೆಯಲ್ಲಿ ಯೋಗ ದಿನಾಚರಣೆ: ಯೋಗ ಸಾಧಕರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಮರೇನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನ ಒಳಾಂಗಣ ಫುಟ್ಬಾಲ್ ಕೋರ್ಟ್‌ನಲ್ಲಿ ಯೋಗಾಭ್ಯಾಸ ನಡೆಯಿತು. ಯೋಗ ವಿಭಾಗದ ಮುಖ್ಯಸ್ಥೆ ಡಾ.ಅನ್ನಪೂರ್ಣ ಕೆ. ಅವರ ನೇತೃತ್ವದಲ್ಲಿ ವಿವಿಧ ಆಸನಗಳು, ಪ್ರಾಣಾಯಾಮಗಳನ್ನು ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಣಿಪಾಲ್ ಮಾಹೆ ವಿವಿಯಲ್ಲಿ ಯೋಗ ವಿಭಾಗದ ವತಿಯಿಂದ ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂಬ ವಿಷಯದೊಂದಿಗೆ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಮರೇನಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನ ಒಳಾಂಗಣ ಫುಟ್ಬಾಲ್ ಕೋರ್ಟ್‌ನಲ್ಲಿ ಬೆಳಗ್ಗೆ 8 ಗಂಟೆಗೆ ಯೋಗಾಭ್ಯಾಸದೊಂದಿಗೆ ಆಚರಣೆಯು ಪ್ರಾರಂಭವಾಯಿತು. ಯೋಗ ವಿಭಾಗದ ಮುಖ್ಯಸ್ಥೆ ಡಾ.ಅನ್ನಪೂರ್ಣ ಕೆ. ಅವರ ನೇತೃತ್ವದಲ್ಲಿ ವಿವಿಧ ಆಸನಗಳು, ಪ್ರಾಣಾಯಾಮಗಳನ್ನು ನಡೆಸಲಾಯಿತು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಆರೋಗ್ಯ ವಿಜ್ಞಾನ ವಿಭಾಗದ ಸಹ ಕುಲಪತಿ ಡಾ. ಶರತ್ ಕುಮಾರ್ ರಾವ್, ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ಅಧ್ಯಕ್ಷ ಟಿ.ಸತೀಶ್ ಯು. ಪೈ, ಮಾಹೆ ಕುಲಸಚಿವ ಡಾ.ಪಿ.ಗಿರಿಧರ್ ಕಿಣಿ, ಇಂದಿರಾ ಬಲ್ಲಾಳ್ ಮತ್ತು ಮಣಿಪಾಲ್ ಸ್ಕೂಲ್ ಆಫ್ ಲೈಫ್ ಸೈನ್ಸ್‌ನ ನಿರ್ದೇಶಕ ಡಾ. ಸತೀಶ್ ರಾವ್ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಯೋಗ ಕ್ಷೇತ್ರಕ್ಕೆ ಗಣನೀಯ ಸೇವೆ ಸಲ್ಲಿಸಿದ ಯೋಗ ಚಿಕಿತ್ಸಕಿ ಧ್ಯಾನ ಮಂದಿರ ಉಡುಪಿಯ ಲಕ್ಷ್ಮೀ ದಿವಾಕರ್ ಮತ್ತು ಅಯ್ಯಂಗಾರ್ ಯೋಗ ತರಬೇತುದಾರರಾದ ವನಿತಾ ಪೈ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಸಹಾಯಕ ಪ್ರಾಧ್ಯಾಪಕಿ ಡಾ.ಲಾವ್ಯಾ ಶೆಟ್ಟಿ, ಪಿಜಿ ವಿದ್ಯಾರ್ಥಿನಿ ಡಾ.ದಿವ್ಯಾ ಪೂಜಾರಿ ನಿರ್ವಹಿಸಿದರು. ಸಹ ಪ್ರಾಧ್ಯಾಪಕ ಡಾ.ನಿತಿನ್‌ ಕುಮಾರ್ ಜೆ. ಪಾಟೀಲ್ ವಂದಿಸಿದರು.