ಮಂಗಳೂರು: ಪಡೀಲಿನ ಜಿಲ್ಲಾಧಿಕಾರಿ ಕಚೇರಿಯ ಹೊರಾಂಗಣದಲ್ಲಿ ಭಾನುವಾರ 12 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಿತು.ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಆಯುಷ್ ಇಲಾಖೆ ಹಾಗೂ ಶ್ರೀ ಪತಂಜಲಿ ಯೋಗ ಶಿಕ್ಷಣ ಫೌಂಡೇಶನ್ ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ.) ಕರ್ನಾಟಕ ಇದರ ಸಹಯೋಗದೊಂದಿಗೆ ಕಾರ್ಯಕ್ರಮ ಏರ್ಪಟ್ಟಿತು.ಎಸ್.ಪಿ.ವೈ.ಎಸ್.ಎಸ್ ಜಿಲ್ಲಾ ಸಂಚಾಲಕ ನಾರಾಯಣ ಶಬರಾಯ, ಕಾರ್ಯಕ್ರಮದ ಸಂಚಾಲಕ ಪ್ರಜ್ವಲ್ ಕುಮಾರ್ ಕಂಕನಾಡಿ, ಆಯುಷ್ ಅಧಿಕಾರಿ ಡಾ. ಜೆ.ಎ. ಮಣಿಕರ್ಣಿಕ, ಜಿಲ್ಲಾ ವೈದ್ಯಾಧಿಕಾರಿ ಡಾ. ಪ್ರಕಾಶ್, ವಲಯ ಸಂಯೋಜಕ ಜಯರಾಮ ಚೆಂಬುಗುಡ್ಡೆ ಜೊತೆಯಾಗಿ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಮಾನಸಿಕ ಸಿದ್ಧತೆ, ಶ್ವಾಸ ಕ್ರಿಯೆಯನ್ನು, ಶಿಕ್ಷಕರಾದ ಜೀವನ್ ಪ್ರಸಾದ್ ಕಾವೂರು, ಆಯುಷ್ ಇಲಾಖೆಯ ಪಠ್ಯ ಕ್ರಮವನ್ನು ಸೌಮ್ಯ ಐಲ, ಉಪ್ಪಳ ನಡೆಸಿಕೊಟ್ಟರು. 1,500 ಕ್ಕೂ ಮಿಕ್ಕಿದ ಯೋಗಪಟುಗಳು ಜಿಲ್ಲಾಧಿಕಾರಿ ಕಚೇರಿಯ ಹೊರಾಂಗಣದ ಮೂರು ಬದಿಗಳಲ್ಲಿ ಶಿಸ್ತುಬದ್ಧವಾಗಿ ಸಾಲಾಗಿ ಕುಳಿತು, ಉತ್ಸುಕತೆಯಿಂದ, ಲವಲವಿಕೆಯಲ್ಲಿ ಯೋಗಾಭ್ಯಾಸ ಮಾಡಿದರು.ಯೋಗ ದಿನಾಚರಣೆಯ ಉದ್ದೇಶವನ್ನು ರಂಜಿನಿ ಕಾಸರಗೋಡು ತಿಳಿಸಿದರು. ಸುಮನಾ ನವೀನ್ ಸುರತ್ಕಲ್ ಸ್ವಾಗತಿಸಿದರು. ಲತಾ ಕಂಕನಾಡಿ ವಂದಿಸಿದರು. ಶಿಲ್ಪಾ ಉಳ್ಳಾಲ ನಿರೂಪಣೆ ಮಾಡಿದರು.
ಭಜನೆ, ಅಮೃತವಚನ, ಪಂಚಾಂಗ ಪಠಣದೊಂದಿಗೆ ಯೋಗಾಭ್ಯಾಸ ಆರಂಭಿಸಲಾಯಿತು.ಬಳಿಕ ನಡೆದ ಯೋಗ ಪರಿಚಯ ಪರಿಕ್ರಮ ಪ್ರಜಾಸೌದದಿಂದ ಮಹಾವೀರ ಸರ್ಕಲ್ ತನಕ ನಡೆದ ಯೋಗ ನಡಿಗೆ ಕಾರ್ಯಕ್ರಮಕ್ಕೆ ಪೊಲೀಸ್ ನಿರೀಕ್ಷಕ ಕೃಷ್ಣಾನಂದ ಜಿ. ನಾಯಕ್, ಎಸ್ಐ ಶಿವಕುಮಾರ್, ವಲಯ ಚಿಂತನಾಕೂಟ ಪ್ರಮುಖರಾದ ಪ್ರತಾಪ್ ಕೆ.ಎಸ್. ಚಾಲನೆ ನೀಡಿದರು.
ಯೋಗ ನಡಿಗೆ ಕಾರ್ಯಕ್ರಮದ ಸಮಾರೋಪದಲ್ಲಿ ಜೈನ್ ಮಿಲನ್ ಅಧ್ಯಕ್ಷ ಸಚಿನ್ ಜೈನ್, ಮಂಗಳೂರು ಜೈನ್ ಸೊಸೈಟಿ ಅಧ್ಯಕ್ಷ ಪುಷ್ಪರಾಜ್ ಜೈನ್, ಜೈನ್ ಮಿಲನ್ ನಿರ್ದೇಶಕ ಸುಕುಮಾರ್ ಬಳ್ಳಾಲ್, ವಲಯ ಸಂಚಾಲಕ ಅಶೋಕ್ ಜೈನ್ ಭಾಗವಹಿಸಿದರು.
ಸಂಘಟನಾ ವಿಭಾಗದ ಪ್ರಾಂತ ಸಂಚಾಲಕ ಹರೀಶ್ ಕೋಟ್ಯಾನ್, ಪ್ರಶಿಕ್ಷಣ ವಿಭಾಗದ ಲಕ್ಷ್ಮೀನಾರಾಯಣ, ಸಂಸ್ಕಾರ ವಿಭಾಗದ ಹರೀಶ್ ಶೆಟ್ಟಿ ಪಡೀಲ್, ಪ್ರಾಂತ ಪ್ರತಿನಿಧಿ ಶಿವಾನಂದ ರೈ ಮಾರ್ಗದರ್ಶನ ಮಾಡಿದರು.
ಜಿಲ್ಲಾ ಪ್ರಮುಖರಾದ ಶಿವಪ್ರಸಾದ್ ಪೊಳಲಿ, ಲೋಕೇಶ್, ಶೋಭಾ ಸುರತ್ಕಲ್, ಈಶ್ವರ್ ಕೊಟ್ಟಾರಿ, ಶ್ರೀಕಲಾ, ಸುಜಾತ ಪೊಳಲಿ, ಗೀತಾ ಉಳ್ಳಾಲ, ಸೂರಜ್, ಸುಬ್ರಹ್ಮಣ್ಯ ಭಟ್, ದಯಾನಂದ ಕಟೀಲ್, ನಗರ ಸಂಚಾಲಕರಾದ ಸುಂದರ ಉಳ್ಳಾಲ, ಗುರುರಾಜ್ ಶೆಟ್ಟಿ, ಶ್ರೀನಿವಾಸ್ ಕಾವೂರು, ಶ್ಯಾಮಲ, ಶ್ರೀ ಸದ್ಯೋಜಾತ, ನಾರಾಯಣ ಬಿ. ಸಿ.ರೋಡ್, ವಸಂತ, ಜನಾರ್ದನ್, ಪುಂಡಲೀಕ ಮತ್ತಿತರರಿದ್ದರು.