ರೋಗದಿಂದ ದೂರವಿರಲು ಯೋಗ ರಾಮಬಾಣ: ಆಂಜನೇಯ ಮಾನೆ

| Published : Jun 07 2024, 12:35 AM IST

ರೋಗದಿಂದ ದೂರವಿರಲು ಯೋಗ ರಾಮಬಾಣ: ಆಂಜನೇಯ ಮಾನೆ
Share this Article
  • FB
  • TW
  • Linkdin
  • Email

ಸಾರಾಂಶ

ರೋಗದಿಂದ ದೂರವಿರಲು ಯೋಗ ರಾಮಬಾಣವಾಗಿದೆ.

ವಿಶ್ವ ಪರಿಸರ ದಿನಾಚರಣೆ ಹಾಗೂ ೧೦ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ೧೫ ದಿನಗಳ ಕಾಲ ಉಚಿತ ಯೋಗ ಶಿಬಿರಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ರೋಗದಿಂದ ದೂರವಿರಲು ಯೋಗ ರಾಮಬಾಣವಾಗಿದೆ ಎಂದು ಗದಗ ಪತಂಜಲಿ ಸಮಿತಿ ಜಿಲ್ಲಾ ಪ್ರಭಾರಿ ಆಂಜನೇಯ ಮಾನೆ ಹೇಳಿದರು.

ಪಟ್ಟಣದ ಸಾಯಿ ಪ್ಯಾಲೇಸ್‌ನಲ್ಲಿ ಬುಧವಾರ ಪತಂಜಲಿ ಯೋಗ ತಾಲೂಕು ಸಮಿತಿ ವತಿಯಿಂದ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಹಾಗೂ ೧೦ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ೧೫ ದಿನಗಳ ಕಾಲ ಉಚಿತ ಯೋಗ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿ ನಿತ್ಯ ಯೋಗ ಮಾಡುವ ಮೂಲಕ ಹಲವು ರೋಗದಿಂದ ದೂರವಿರಬಹುದು. ಪ್ರತಿಯೊಬ್ಬರು ಆರೋಗ್ಯವಂತರಾಗಿರಲು ಯೋಗ, ಧ್ಯಾನ, ಪ್ರಾಣಾಯಮ ಅತಿ ಅವಶ್ಯಕವಾಗಿದೆ ಎಂದರು.

ಸಂಸ್ಥಾನ ಹಿರೇಮಠದ ಪೀಠಾಧಿಪತಿ ಸಿದ್ದರಾಮೇಶ್ವರ ಸ್ವಾಮೀಜಿ ಹಾಗೂ ಶ್ರೀಧರ ಮುರುಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಸಸಿ ನೆಡುವ ಕಾರ್ಯಕ್ರಮ ನೆರವೇರಿಸಿ ಮಾತನಾಡಿ, ಪ್ರತಿಯೊಬ್ಬರು ಪರಿಸರ ಉಳಿಸಿ, ಬೆಳೆಸುವ ಕಾರ್ಯಕ್ಕೆ ಮುಂದಾಗಬೇಕು. ಇತ್ತಿಚಿನ ದಿನಗಳಲ್ಲಿ ಯೋಗ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಬಂದಿದ್ದು, ಯೋಗದಿಂದಾಗುವ ಉಪಯುಕ್ತತೆಯನ್ನು ಜನತೆ ಮನಗಂಡಿದ್ದಾರೆ. ಹೀಗಾಗಿ ಮಹಿಳೆಯರು, ಯುವಕರು, ವಯೋವೃದ್ಧರು ಯೋಗಾಭ್ಯಾಸಕ್ಕೆ ಅಣಿಗೊಳ್ಳುತ್ತಿರುವುದು ಸ್ವಾಗತಾರ್ಹ ಎಂದರು.

ಪತಂಜಲಿ ಯೋಗ ಸಮಿತಿ ತಾಲೂಕಾ ಪ್ರಭಾರಿ ಸಂಗಣ್ಣ ಟೆಂಗಿನಕಾಯಿ ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪರಶುರಾಮ ಹೊಸಮನಿ, ಬಸವರಾಜ ಹಳ್ಳಿ, ಫಕೀರಪ್ಪ ಗಾಣಿಗೇರ, ಬಸವರಾಜ ಕೊಂಡಗುರಿ, ಮಂಜುನಾಥ ನಿಂಗೋಜಿ, ವೀರೇಶ ಟೆಂಗಿನಕಾಯಿ, ಎಂ.ಎನ್. ಜನಾದ್ರಿ, ವಿ.ಬಿ. ಹನುಮಶೆಟ್ಟಿ, ಸರೋಜಾ ಗೌಡ್ರ‍್ರ, ರೇಖಾ ಹೊಸಮನಿ, ಲೀಲಾ ಮುಳಗುಂದ, ಜ್ಯೋತಿ ಟೆಂಗಿನಕಾಯಿ, ಚನ್ನಮ್ಮ ಪಾಟೀಲ ಮತ್ತಿತರರು ಇದ್ದರು.