ಪಾರ್ಶ್ವವಾಯು ತಡೆಗೆ ಯೋಗ ಸೂಕ್ತ

| Published : Oct 30 2024, 12:32 AM IST

ಸಾರಾಂಶ

ಚಿತ್ರದುರ್ಗ: ಚಳಿಗಾಲ ಪ್ರಾರಂಭವಾಗುತ್ತಿದ್ದು, ಅನೇಕ ಜನರು ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಇದೆ. ಹಾಗಾಗಿ ಇದಕ್ಕೆ ನಿತ್ಯ ನಿಯಮಿತವಾಗಿ ಯೋಗಭ್ಯಾಸ ಮಾಡಬೇಕು ಎಂದು ಯೋಗ ಗುರು ರವಿ ಅಂಬೇಕರ್ ತಿಳಿಸಿದರು.

ಚಿತ್ರದುರ್ಗ: ಚಳಿಗಾಲ ಪ್ರಾರಂಭವಾಗುತ್ತಿದ್ದು, ಅನೇಕ ಜನರು ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆ ಇದೆ. ಹಾಗಾಗಿ ಇದಕ್ಕೆ ನಿತ್ಯ ನಿಯಮಿತವಾಗಿ ಯೋಗಭ್ಯಾಸ ಮಾಡಬೇಕು ಎಂದು ಯೋಗ ಗುರು ರವಿ ಅಂಬೇಕರ್ ತಿಳಿಸಿದರು.ವಿಶ್ವ ಪಾರ್ಶ್ವವಾಯು ದಿನಾಚರಣೆ ಅಂಗವಾಗಿ ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯೋಗಭ್ಯಾಸ ಹಾಗೂ ಪ್ರಾಣಾಯಾಮಗಳ ತರಬೇತಿ ಕಾರ್ಯಕ್ರಮದಲ್ಲಿ ಯೋಗ ತರಬೇತಿ ನೀಡಿ ಅವರು ಮಾತನಾಡಿದರು. ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರತಿ ವರ್ಷದ ಅಕ್ಟೋಬರ್ 29ರಂದು ವಿಶ್ವ ಪಾರ್ಶ್ವವಾಯು ದಿನಾಚರಣೆ ಹಮ್ಮಿಕೊಳ್ಳಲಾಗುತ್ತದೆ. ಪಾರ್ಶ್ವವಾಯುಯಿಂದ ಸಾವನ್ನಪ್ಪುವರ ಸಂಖ್ಯೆ ಭಾರತ ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಮೊದಲೆಲ್ಲ 50 ವರ್ಷ ಮೇಲ್ಪಟ್ಟ ವ್ಯಕ್ತಿಗಳಲ್ಲಿ ಪಾರ್ಶ್ವವಾಯು ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತಿತ್ತು. ಇದೀಗ ಯುವ ಜನಾಂಗದಲ್ಲಿಯೂ ರೋಗ ಕಂಡು ಬರುತ್ತಿರುವುದು ಆತಂಕಕಾರಿ. ಮನುಷ್ಯನನ್ನು ಹಾಸಿಗೆ ಹಿಡಿಸುವ ಈ ಮಾರಕ ಪಾರ್ಶ್ವವಾಯು ಬರದಂತೆ ತಡೆಯಲು ಪ್ರತಿದಿನದ ಯೋಗಾಭ್ಯಾಸ ಸೂಕ್ತ ಪರಿಹಾರವಾಗಿದೆ ಎಂದರು. ಪಾರ್ಶ್ವವಾಯು ತಡೆಗೆ ಯೋಗ, ಧ್ಯಾನ, ವ್ಯಾಯಾಮ ಅಗತ್ಯ. ಜತೆಗೆ ಕೊಬ್ಬಿನಾಂಶ ಕಡಿಮೆ ಮಾಡಿಕೊಳ್ಳಬೇಕು. ಮಧುಮೇಹ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಬೇಕು. ನಿತ್ಯ ನಿಯಮಿತವಾಗಿ ವಾಕಿಂಗ್‌ ಮಾಡುವುದು ಮತ್ತು ಸಮರ್ಪಕವಾಗಿ ಒತ್ತಡ ನಿರ್ವಹಿಸುವುದು ಅಗತ್ಯ. ದುಶ್ಚಟಗಳಿಂದ ದೂರ ಇರಬೇಕು ಎಂದು ಎಂದು ತಿಳಿಸಿದರು.ಅಂಗನವಾಡಿ ಕೇಂದ್ರದ ಶಿಕ್ಷಕಿಯರಾದ ಹಿರೇಗುಂಟನೂರು ಲಕ್ಷ್ಮಿದೇವಿ, ಪಲ್ಲವಿ, ಹಳಿಯೂರು ಶಶಿಕಲಾ, ಹಳಿಯೂರು ಶಾಲಾ ಮುಖ್ಯ ಶಿಕ್ಷಕ ಮುಸ್ತಫಾ, ಶೇಖರಪ್ಪ, ಮಮತ‌, ನಿರ್ಮಲ, ಭೂಮಿಕ, ಅಂಗನವಾಡಿ ಸಹಾಯಕಿ ಮಂಜಮ್ಮ ಇದ್ದರು.