ಸಾರಾಂಶ
ಆರೋಗ್ಯವಂತ ಜೀವನಕ್ಕೆ ಯೋಗ ಅತ್ಯಂತ ಸಹಕಾರಿಯಾಗಿದೆ ಎಂದು ಯೋಗ ಶಿಕ್ಷಕ ಹಾಗೂ ತಾಂತ್ರಿಕ ಸಹಾಯಕ ಇಂಜಿನಿಯರ್ ಉದಯಕುಮಾರ್ ಹೇಳಿದರು.
ಕನ್ನಡಪ್ರಭ ವಾರ್ತೆ ಕಮಲಾಪುರ
ಆರೋಗ್ಯವಂತ ಜೀವನಕ್ಕೆ ಯೋಗ ಅತ್ಯಂತ ಸಹಕಾರಿಯಾಗಿದೆ ಎಂದು ಯೋಗ ಶಿಕ್ಷಕ ಹಾಗೂ ತಾಂತ್ರಿಕ ಸಹಾಯಕ ಇಂಜಿನಿಯರ್ ಉದಯಕುಮಾರ್ ಹೇಳಿದರು.ಹೊಳಕುಂದಾ ಗ್ರಾಪಂ ಅಮೃತ್ ಸರೋವರ ಕೆರೆ ದಂಡೆ ಮೇಲೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಹೊಳಕುಂದಾ ಗ್ರಾಮ ಪಂಚಾಯತ್ ಸಂಯೋಗದಲ್ಲಿ ಶುಕ್ರವಾರ ಆಯೋಜಿಸಿದ ಯೋಗಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಯೋಗದ ವಿವಿಧ ಆಸನಗಳು ಪ್ರತ್ಯಕ್ಷಿಕೆ ಮೂಲಕ ತೋರಿಸಿ ಕೊಟ್ಟರು. ಈ ವೇಳೆ ಪ್ರಮುಖರಾದ ತಾಪಂ ಇಒ ಅಂಬರೀಶ ಪಾಟೀಲ್, ಗ್ರಾಪಂ ಅಭಿವೃದ್ಧಿ ಅಧಿಕಾರಿ ಕೃಷ್ಣ ಮೌರ್ಯ, ಗ್ರಾಪಂ ಅಧ್ಯಕ್ಷ ಮಸ್ತಾನ್ ಚಿನ್ನಾ, ಉಪಾಧ್ಯಕ್ಷ ಚೇತನ್ ಡಬರಾಬಾದ್, ಹಾಗೂ ಪಂಚಾಯ್ತಿ ಸಿಬ್ಬಂದಿ ಗ್ರಾಮಸ್ಥರು ಮತ್ತಿತ್ತರು ಇದ್ದರು.