ಸದೃಢ ಆರೋಗ್ಯಕ್ಕೆ ಯೋಗ ಸಹಾಯಕಾರಿ

| Published : Jun 21 2024, 01:07 AM IST

ಸಾರಾಂಶ

ಮನುಷ್ಯನ ಸದೃಢ ಆರೋಗ್ಯ ಕಾಪಾಡುವಲ್ಲಿ ಯೋಗ ಮಹತ್ವದ ಪಾತ್ರ ವಹಿಸುತ್ತದೆ ಎಂದು ಯೋಗ ಶಿಕ್ಷಕಿ ಪ್ರಭಾವತಿ ಎಸ್. ಮೇತ್ರಿ ಹೇಳಿದರು.

ಕನ್ನಡಪ್ರಭ ವಾರ್ತೆ ಅಫಜಲ್ಪುರ

ಮನುಷ್ಯನ ಸದೃಢ ಆರೋಗ್ಯ ಕಾಪಾಡುವಲ್ಲಿ ಯೋಗ ಮಹತ್ವದ ಪಾತ್ರ ವಹಿಸುತ್ತದೆ ಎಂದು ಯೋಗ ಶಿಕ್ಷಕಿ ಪ್ರಭಾವತಿ ಎಸ್. ಮೇತ್ರಿ ಹೇಳಿದರು.

ಅವರು ತಾಲೂಕಿನ ಮಣ್ಣೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಯೋಗೋತ್ಸವ 2024 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಂದಿನ ದಿನಮಾನಗಳಲ್ಲಿ ಯೋಗ ಮನುಷ್ಯನ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಲು ಬಹಳ ಮುಖ್ಯವಾಗಿದೆ. ಆದ್ದರಿಂದ ಪ್ರತಿಯೊಬ್ಬರು ಯೋಗವನ್ನು ಕ್ರಮಬದ್ಧವಾಗಿ ಮಾಡಬೇಕು.ಇಂದಿನ ಆಧುನಿಕ ಯುಗದಲ್ಲಿ ಅನೇಕರು ಹಲವು ಒತ್ತಡಗಳ ಮದ್ಯೆ ಕಾರ್ಯನಿರ್ವಹಿಸುತ್ತಿದ್ದಾರೆ. ಯೋಗದಿಂದ ಮಾತ್ರ ಒತ್ತಡದಿಂದ ಹೊರ ಬರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಬಳೂರ್ಗಿ ಆಯುಷ್ ಆಸ್ಪತ್ರೆ ವೈದ್ಯಾಧಿಕಾರಿ ಡಾ ಶ್ರೀಶೈಲ ಪಾಟೀಲ ಮಾತನಾಡಿ, ಒತ್ತಡ ನಿವಾರಣೆ ಮತ್ತು ದೈನಂದಿನ ಜೀವನ ಶೈಲಿಯನ್ನು ಸುಧಾರಿಸಲು ಯೋಗದಿಂದ ಮಾತ್ರ ಸಾಧ್ಯ. ಯೋಗದಿಂದ ಮನಸ್ಸಿನ ನಿಗ್ರಹವೂ ಆಗಲಿದೆ. ಯೋಗ ಮಾಡುವುದರಲ್ಲಿ ಶ್ರದ್ಧೆ ಮತ್ತು ನಿರಂತರತೆ ಇರ­ಬೇಕು.ಯೋಗ ಪದ್ಧತಿಯು ಅಂತರ ರಾಷ್ಟ್ರೀಯ ಖ್ಯಾತಿ ಪಡೆದಿದ್ದು, ಯೋಗಾಸನಗಳನ್ನು ಮಾಡುವುದರಿಂದ ಮನಸ್ಸಿಗೆ ಉಲ್ಲಾಸವಾಗುತ್ತದೆ.

ಈ ಸಂದರ್ಭದಲ್ಲಿ ಪ್ರತಿಭಾ ಮಹಿಂದ್ರಕರ ಡಾ ಶ್ರೀಶೈಲ ಪಾಟೀಲ ಪ್ರೌಢಶಾಲೆ ಮುಖ್ಯ ಗುರು ಸುನಿತಾ ವಟಕರ ಚನ್ನನಗೌಡ ಮಾಲಿಪಾಟೀಲ ಶ್ರೀಶೈಲ ಸನದಿ ಶ್ರೀಶೈಲ ಭಾವಿಕಟ್ಟಿ ದತ್ತಪ್ಪ ಡೊಂಬಾಳೆ ಭಾಗೀರಥಿ ಬಿರಾದಾರ ಶೈಲಾ ಎಚ್ ಎಸ್ ಸಂಗೀತಾ, ಸುಮಲತಾ ಕುಂಬಾರ ಕಲಾವತಿ ಕೊಳಲಗಿ ಸೇರಿದಂತೆ ವಿಧ್ಯಾರ್ಥಿಗಳಿದ್ದರು.