ಯೋಗ, ಧ್ಯಾನ ಭಾರತೀಯ ಸಂಸ್ಕೃತಿ ಹೆಮ್ಮೆಯ ಪ್ರತೀಕ: ಶಿವಶಂಕರಯ್ಯ

| Published : Jul 22 2024, 01:23 AM IST

ಸಾರಾಂಶ

ಯೋಗ ಮತ್ತು ಧ್ಯಾನ ಭಾರತೀಯ ಸಂಸ್ಕೃತಿ ಹೆಮ್ಮೆಯ ಪ್ರತೀಕಗಳಾಗಿವೆ ಎಂದು ಯೋಗಪಟು ಹಾಗೂ ನಿವೃತ್ತ ಪ್ರಾಂಶುಪಾಲ ಎಂಪಿಎಂ ಶಿವಶಂಕರಯ್ಯ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕಾರ - - - ಹೊನ್ನಾಳಿ: ಯೋಗ ಮತ್ತು ಧ್ಯಾನ ಭಾರತೀಯ ಸಂಸ್ಕೃತಿ ಹೆಮ್ಮೆಯ ಪ್ರತೀಕಗಳಾಗಿವೆ ಎಂದು ಯೋಗಪಟು ಹಾಗೂ ನಿವೃತ್ತ ಪ್ರಾಂಶುಪಾಲ ಎಂಪಿಎಂ ಶಿವಶಂಕರಯ್ಯ ಹೇಳಿದರು.

ಭಾನುವಾರ ತಾಲೂಕು ಪತಂಜಲಿ ಯೋಗ ಸಮಿತಿ ವತಿಯಿಂದ ಗುರು ಪೂರ್ಣಿಮೆ ನಿಮಿತ್ತ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸಮಿತಿ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಯೋಗ ಮತ್ತು ಧ್ಯಾನ ಆರೋಗ್ಯ ಜೀವನದ ಅವಿಭಾಜ್ಯ ಅಂಗವಾಗಿವೆ. ಯೋಗ ಭಾರತ ವಿಶ್ವಕ್ಕೆ ನೀಡಿದ ಬಹುದೊಡ್ಡ ಕೊಡುಗೆ ಎಂದರು.

ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಪ್ರಕಾಶ್ ಹೆಬ್ಬಾರ್ ಅಧ್ಯಕ್ಷತೆ ವಹಿಸಿ, ಗುರುಪೂರ್ಣಿಮೆಯಂತಹ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಇಂದಿನ ಪೀಳಿಗೆಯವರಿಗೆ ಗುರುಪರಂಪರೆ, ಯೋಗ,ಧಾನ್ಯಗಳ ಮಹತ್ವಗಳ ಬಗ್ಗೆ ಅರಿವು ಮೂಡಿಸಬೇಕಿದೆ ಎಂದು ಹೇಳಿದರು.

ರಾಘವೇಂದ್ರ ವೈಶ್ಯರ್, ಸುರೇಶ್ ಕುಂಬಾರ್, ದಿಲೀಪ್ ಶೇಟ್ , ಹಾಲಸ್ವಾಮಿ, ಚಂದ್ರಪ್ಪ, ವಸಂತ್ ರಾಯ್ಕರ್, ಸುಜಾತ ಬೆನ್ನೂರುಮಠ, ಅಂಬಿಕಾ ಹೆಬ್ಬಾರ್, ಶೀಲಾ, ಮೀನಾಗಣೇಶ್, ಹೇಮಲತಾ,ಕವಿತ, ಹಾಗೂ ಸುಲೋಚನಾ ಮುಂತಾದವರು ಇದ್ದರು.

ಪತಂಜಲಿ ಸಮಿತಿ ಮಹಿಳಾ ಸದಸ್ಯೆಯರು ಪ್ರಾರ್ಥನೆ ಮಾಡಿದರು. ಎಂ.ಮಂಜುನಾಥ ಸ್ವಾಗತಿಸಿ, ಎಂ.ಬಿ.ರುದ್ರೇಶ್ ಅತಿಥಿಗಳ ಕಿರುಪರಿಚಯ ಮಾಡಿದರು. ಯೋಗ ಶಿಕ್ಷಕ ಶ್ರೀಕಾಂತ್ ಕುರುಡೇಕರ್ ಗುರುವಿನ ಮಹತ್ವ ತಿಳಿಸಿ ಕಾರ್ಯಕ್ರಮ ನಿರೂಪಿಸಿದರು. ಚನ್ನೇಶ್ ಎಂ. ಜಕ್ಕಾಳಿ ವಂದಿಸಿದರು.

- - - -21ಎಚ್.ಎಲ್.ಐ4:

ಕಾರ್ಯಕ್ರಮದಲ್ಲಿ ಯೋಗಪಟು ಶಿವಶಂಕರಯ್ಯ ಅವರನ್ನು ಸನ್ಮಾನಿಸಲಾಯಿತು.