ಶಾರೀರಿಕ, ಮಾನಸಿಕ ಆರೋಗ್ಯವನ್ನು ಸದೃಢಗೊಳಿಸುವಲ್ಲಿ ಯೋಗ ಪ್ರಮುಖ ಪಾತ್ರ

| Published : Jun 22 2024, 12:54 AM IST

ಶಾರೀರಿಕ, ಮಾನಸಿಕ ಆರೋಗ್ಯವನ್ನು ಸದೃಢಗೊಳಿಸುವಲ್ಲಿ ಯೋಗ ಪ್ರಮುಖ ಪಾತ್ರ
Share this Article
  • FB
  • TW
  • Linkdin
  • Email

ಸಾರಾಂಶ

365 ದಿನದಲ್ಲಿ ಜೂ.21 ಅತಿ ದೀರ್ಘ ಹಗಲು ಹೊಂದಿರುವ ದಿನ, ಇಂದು ಭೂಮಿಯ ಉತ್ತರಾರ್ಧ ಗೋಳದಲ್ಲಿ ಸೂರ್ಯ ಅತಿ ಹೆಚ್ಚು ಹೊತ್ತು ಕಂಗೊಳಿಸುತ್ತಾನೆ. ಇಂತಹ ಸುದಿನದಂದು ಯೋಗಾಸನ ಮಾಡುವುದರ ಜೊತೆಗೆ ಹೆಚ್ಚಿನ ಜನರಿಗೆ ಯೋಗ ಮಾಡಲು ಪ್ರೇರೇಪಿಸಬೇಕು, ಕೇವಲ ಸೂರ್ಯ ನಮಸ್ಕಾರದಿಂದಲೇ ಅನೇಕ ಪ್ರಯೋಜನಗಳಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಜನರ ಶಾರೀರಿಕ ಹಾಗೂ ಮಾನಸಿಕ ಆರೋಗ್ಯವನ್ನು ಸದೃಢಗೊಳಿಸುವಲ್ಲಿ ಯೋಗ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಅಧ್ಯಕ್ಷ ರಾಕೇಶ್ ಭಟ್ ಹೇಳಿದರು.

ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ವತಿಯಿಂದ ರಾಮಕೃಷ್ಣನಗರದ ವಿಶ್ವಮಾನವ ಶಾಲೆಯ ಆವರಣದಲ್ಲಿ ಯೋಗ ದಿನವನ್ನು ಆಚರಣೆಯಲ್ಲಿ ಅವರು ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರು ಫಿಟ್ ಇಂಡಿಯಾ ಹಾಗೂ ಯೋಗ ದಿನಾಚರಣೆಗೆ ಕರೆ ನೀಡುವ ಮೂಲಕ ದೇಶದ ನಾಗರೀಕರು ಹಾಗೂ ಬಿಜೆಪಿ ಕಾರ್ಯಕರ್ತರು ಸದೃಢರಾಗಿ ಆರೋಗ್ಯವಂತರಾಗಿ ದೇಶ ಸೇವೆಯಲ್ಲಿ ತೊಡಗಬೇಕೆಂಬ ಇಚ್ಛೆ ಹೊಂದಿದ್ದಾರೆ. 365 ದಿನದಲ್ಲಿ ಜೂ.21 ಅತಿ ದೀರ್ಘ ಹಗಲು ಹೊಂದಿರುವ ದಿನ, ಇಂದು ಭೂಮಿಯ ಉತ್ತರಾರ್ಧ ಗೋಳದಲ್ಲಿ ಸೂರ್ಯ ಅತಿ ಹೆಚ್ಚು ಹೊತ್ತು ಕಂಗೊಳಿಸುತ್ತಾನೆ. ಇಂತಹ ಸುದಿನದಂದು ಯೋಗಾಸನ ಮಾಡುವುದರ ಜೊತೆಗೆ ಹೆಚ್ಚಿನ ಜನರಿಗೆ ಯೋಗ ಮಾಡಲು ಪ್ರೇರೇಪಿಸಬೇಕು, ಕೇವಲ ಸೂರ್ಯ ನಮಸ್ಕಾರದಿಂದಲೇ ಅನೇಕ ಪ್ರಯೋಜನಗಳಿವೆ ಎಂದರು.

ಯುವ ಯೋಗ ಪಟು ಸ್ಪೂರ್ತಿ ಈ.ಗೌಡ ಅವರು ಆಯ್ದ ಆಸನಗಳನ್ನು ಪ್ರದರ್ಶಿವುದರ ಜೊತೆ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಿದರು. ಪ್ರಾಣಾಯಾಮ, ಆಸನಗಳ ನಂತರ ಧ್ಯಾನದ ಮೂಲಕ ಕಾರ್ಯಕ್ರಮವನ್ನು ಸಮಾರೋಪಗೊಳಿಸಲಾಯಿತು.

ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು, ಪಾಲಿಕೆ ಮಾಜಿ ಸದಸ್ಯ ಆರ್.ಕೆ. ಶರತ್ ಕುಮಾರ್, ಮಂಡಲದ ಪ್ರಧಾನ ಕಾರ್ಯದರ್ಶಿ ಈರೇಗೌಡ, ಆರ್. ಸೋಮಶೇಖರ್, ಉಪಾಧ್ಯಕ್ಷ ಎಚ್.ಜಿ. ರಾಜಮಣಿ, ಬಿ.ಸಿ. ಶಶಿಕಾಂತ್, ಶಿವಕುಮಾರ್, ಲಲಿತ, ಜೆಡಿಎಸ್ ಮುಖಂಡರಾದ ದಿನೇಶ್, ಬಿಜೆಪಿ ಮುಖಂಡರಾದ ತುಳಸಿ, ನಾಗರಾಜ್ ಜನ್ನು, ಚಂದ್ರಶೇಖರ ಸ್ವಾಮಿ, ಶುಭಶ್ರೀ, ನವೀನ್, ಸುಬ್ರಮಣಿ, ಪುಟ್ಟಮಣಿ, ಹೇಮಲತಾ, ರವಿಕುಮಾರ್ ಭಾಗವಹಿಸಿದ್ದರು.

ಯೋಗದಲ್ಲಿ ದಾಖಲೆ ನಿರ್ಮಿಸಿದ ಮಕ್ಕಳಿಂದ ಯೋಗ ಪ್ರದರ್ಶನಕನ್ನಡಪ್ರಭ ವಾರ್ತೆ ಮೈಸೂರು

ಶ್ರೀರಾಂಪುರ ಎರಡನೇ ಹಂತದ ಹಾರ್ಟ್ ಬೀಟ್ ಡ್ಯಾನ್ಸ್ ಅಕಾಡೆಮಿಯಲ್ಲಿ ಯೋಗ ತರಬೇತಿ ಪಡೆದು ಅಂತಾರಾಷ್ಟ್ರೀಯ ದಾಖಲೆ ಪುಸ್ತಕದಲ್ಲಿ ಸೇರ್ಪಡೆಯಾದ ಎಂ.ಇಂಚರಾ, ಎಂ.ಆರ್. ಗೌರವ್ ಹಾಗೂ ಡಿ. ಸಾತ್ವಿಕ್ ಅವರು ಯೋಗಾಸನದ ಭಂಗಿಗಳನ್ನು ಪ್ರದರ್ಶಿಸಿದರು.ತಾವು ದಾಖಲೆ ನಿರ್ಮಿಸಲು ಕಾರಣವಾದ ಯೋಗಾಸನ ಭಂಗಿಗಳನ್ನು ಪತ್ರಕರ್ತರ ಭವನದಲ್ಲಿ ಪ್ರದರ್ಶಿಸಿದ ಬಳಿಕ ಮಾತನಾಡಿದ ಇಂಚರಾ, ನಾನು ಸುಮಾರು 12 ವರ್ಷದವಳಾಗಿದ್ದು, ಸುಪ್ತ ವಜ್ಞಾಸನ ಭಂಗಿಯಲ್ಲಿ 1 ಗಂಟೆ 17 ನಿಮಿಷ 20 ಸೆಕೆಂಡ್ ಇದ್ದುದು ದಾಖಲೆಯಾಗಿದೆ ಎಂದರು.

ಎಂ.ಆರ್. ಗೌರವ್ ಮಾತನಾಡಿ, ತಾನು ಸುಮಾರು 10 ವರ್ಷ ವಯಸ್ಸಿನವನಾಗಿದ್ದು, ಯೋಗ ನಿದ್ರಾಸನದಲ್ಲಿ 35 ನಿಮಿಷ ಇದ್ದುದು ದಾಖಲೆ ನಿರ್ಮಿಸಿತು ಎಂದರು. ನಂತರ ಡಿ. ಸಾತ್ವಿಕ್ ಮಾತನಾಡಿ, ತಾನು ಸುಮಾರು 9 ವರ್ಷ ವಯಸ್ಸಿನವನಾಗಿದ್ದು, ಬದ್ಧ ಪದ್ಮಾಸನದಲ್ಲಿ 40 ನಿಮಿಷ 15 ಸೆಕೆಂಡ್ ಇರುವ ಕಾಲ ದಾಖಲೆ ನಿರ್ಮಿಸಿದ್ದಾಗಿ ಅವರು ತಿಳಿಸಿದರು.ಈ ವೇಳೆ ಇವರ ಪೋಷಕರು ಮಾತನಾಡಿ, ತಮ್ಮ ಮಕ್ಕಳ ಸಾಧನೆಯ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಮಕ್ಕಳ ಈ ಸಾಧನೆಗೆ ಕಾರಣರಾದ ಸಂಸ್ಥೆಯ ರಘು ಅವರನ್ನು ಶ್ಲಾಘಿಸಿದರು.