ಬೇಲೂರಿನ ಚನ್ನಕೇಶವ ಸ್ವಾಮಿಯ ಅಂಗಳದಲ್ಲಿ ಯೋಗಾಭ್ಯಾಸ

| Published : Jun 22 2024, 12:53 AM IST

ಬೇಲೂರಿನ ಚನ್ನಕೇಶವ ಸ್ವಾಮಿಯ ಅಂಗಳದಲ್ಲಿ ಯೋಗಾಭ್ಯಾಸ
Share this Article
  • FB
  • TW
  • Linkdin
  • Email

ಸಾರಾಂಶ

ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಬೇಲೂರಿನ ಚನ್ನಕೇಶವಸ್ವಾಮಿ ದೇಗುಲದ ಪ್ರಾಂಗಣದಲ್ಲಿ ಬೃಹತ್ ಯೋಗ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ವಿಶ್ವ ಯೋಗ ದಿನ ಉದ್ಘಾಟಿಸಿದ ಶಾಸಕ ಎಚ್.ಕೆ.ಸುರೇಶ್

ಕನ್ನಡಪ್ರಭ ವಾರ್ತೆ ಬೇಲೂರು

ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಬೇಲೂರಿನ ಚನ್ನಕೇಶವಸ್ವಾಮಿ ದೇಗುಲದ ಪ್ರಾಂಗಣದಲ್ಲಿ ಬೃಹತ್ ಯೋಗ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು

ವಿಶ್ವ ಯೋಗ ದಿನಾಚರಣೆಗೆ ಶಾಸಕ ಎಚ್.ಕೆ.ಸುರೇಶ್ ಉದ್ಘಾಟನೆ ಮೂಲಕ ಚಾಲನೆ ನೀಡಿ ಮಾತನಾಡಿ, ಸದೃಡ ಆರೋಗ್ಯದ ಸಮತೋಲನವನ್ನು ಕಾಪಾಡಿಕೊಳ್ಳಲು ಯೋಗ ಸಹಾಯ ಮಾಡುತ್ತದೆ. ಏರೋಬಿಕ್ಸ್‌ನಂತಹ ಇತರ ವ್ಯಾಯಾಮಗಳು ದೈಹಿಕ ಯೋಗಕ್ಷೇಮವನ್ನು ಮಾತ್ರ ಖಚಿತಪಡಿಸುತ್ತವೆ. ಯೋಗ ಮಾನವನ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಹೆಗ್ಗಳಿಕೆಗೆ ಸಲ್ಲುತ್ತದೆ. ಭಾರತವನ್ನು ಜಗತ್ತಿಗೆ ವಿಶ್ವ ಗುರು ಎಂಬ ಖ್ಯಾತಿಯನ್ನು ನೀಡಿದ್ದಾರೆ ಎಂದು ಹೇಳಿದರು.

ತಹಸೀಲ್ದಾರ್ ಮಮತ ಎಂ. ಮಾತನಾಡಿ, ‘ಅಂತಾರರಾಷ್ಟ್ರೀಯ ಯೋಗವು ನಮ್ಮ ಪುರಾತನ ಭಾರತೀಯ ಸಂಸ್ಕೃತಿಯಲ್ಲಿ ಮಹತ್ತರ ಸ್ಥಾನ ಪಡೆದುಕೊಂಡಿದೆ. ಈಗ ಅದು ಪ್ರಪಂಚದಾದ್ಯಂತ ಅಪಾರ ಜನಪ್ರಿಯತೆಯನ್ನು ಗಳಿಸಿದೆ. ಆಧುನಿಕ ಜೀವನಶೈಲಿಯಿಂದ ಹೆಚ್ಚುತ್ತಿರುವ ಒತ್ತಡದಿಂದ ಬಳಲುತ್ತಿರುವವರಿಗೆ ಯೋಗದ ಅಭ್ಯಾಸವು ಕ್ಷೇಮ ಮತ್ತು ನೆಮ್ಮದಿಯ ದಾರಿದೀಪವಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಶಶಿಕಲಾ, ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ತಾಲೂಕು ಪಂಚಾಯಿತಿ ಇಒ ಸತೀಶ್, ಚನ್ನಕೇಶವಸ್ವಾಮಿ ದೇಗುಲ ಇಒ ಯೋಗೀಶ್, ಆರೋಗ್ಯಾಧಿಕಾರಿ ಡಾ.ವಿಜಯ್, ವಕೀಲ ಪುಟ್ಟಸ್ವಾಮಿಗೌಡ, ಪುರಸಭಾ ಮುಖ್ಯಾಧಿಕಾರಿ ಸುಜಯ್, ಬೆಂಗಳೂರು ‌ನಿಮ್ಸಾನ್ ತಂಡ, ರಾಘವೇಂದ್ರ ಯೋಗ ತರಬೇತಿ ಕೇಂದ್ರ, ಪತಂಜಲಿ ಯೋಗ ಕೇಂದ್ರ ಸದಸ್ಯರು ಇದ್ದರು. ನಿರೂಪಣೆಯನ್ನು ಉಪನ್ಯಾಸಕ ಲಕ್ಷ್ಮೀನಾರಾಯಣ ನಡೆಸಿಕೊಟ್ಟರು.