ದೀರ್ಘಾವಧಿಯಾಗಿ ಬದುಕಲು ಯೋಗಾಭ್ಯಾಸ ಅತ್ಯವಶ್ಯ

| Published : Jun 22 2024, 12:50 AM IST

ದೀರ್ಘಾವಧಿಯಾಗಿ ಬದುಕಲು ಯೋಗಾಭ್ಯಾಸ ಅತ್ಯವಶ್ಯ
Share this Article
  • FB
  • TW
  • Linkdin
  • Email

ಸಾರಾಂಶ

ದೀರ್ಘಾವಧಿಯಾಗಿ ಬದುಕಲು ಮನುಷ್ಯನಿಗೆ ಯೋಗಾಭ್ಯಾಸ ಅತ್ಯವಶ್ಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗಲು ಪ್ರತಿಯೊಬ್ಬರು ಪ್ರಯತ್ನಿಸಬೇಕು ಎಂದು ಯೋಗಗುರು ಸಂಗಮೇಶ ಸವದತ್ತಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬೈಲಹೊಂಗಲ

ದೀರ್ಘಾವಧಿಯಾಗಿ ಬದುಕಲು ಮನುಷ್ಯನಿಗೆ ಯೋಗಾಭ್ಯಾಸ ಅತ್ಯವಶ್ಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಕನಸು ನನಸಾಗಲು ಪ್ರತಿಯೊಬ್ಬರು ಪ್ರಯತ್ನಿಸಬೇಕು ಎಂದು ಯೋಗಗುರು ಸಂಗಮೇಶ ಸವದತ್ತಿಮಠ ಹೇಳಿದರು.ಪಟ್ಟಣದ ಹಳೆ ಹನುಮಂತ ದೇವರ ದೇವಸ್ಥಾನ ಹತ್ತಿರದ ವೈದ್ಯ ಯೋಗ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚಾರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಿತವಾದ ಆಹಾರ, ಹಿತವಾದ ಯೋಗಭ್ಯಾಸ ಮನುಷ್ಯನ ಆಯಸ್ಸನ್ನು ಹೆಚ್ಚಿಸಲಿದ್ದು ನಿತ್ಯ ವ್ಯಾಯಾಮ ಮಾಡಿ ಆರೋಗ್ಯವಾಗಿರಲು ಸಲಹೆ ನೀಡಿದರು. ಅಮೆರಿಕಾದ ಡೆನ್ವರದಲ್ಲಿ ದಂತ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಡಾ.ಜ್ಯೋತಿ ಕುಡಸೋಮಣ್ಣವರ ಮಾತನಾಡಿ, ವಿಶ್ವದೆಲ್ಲೆಡೆ ಯೋಗದ ಮಹತ್ವದ ಪರಿಕಲ್ಪನೆಯನ್ನು ನೀಡಿ ಜೂ.21ನ್ನು ಯೋಗದ ದಿನವೆಂದು ಅಧಿಕೃತವಾಗಿ ಘೋಷಿಸಿ ದೇಶದ ಮತ್ತು ಪಾಶ್ಚಮಾತ್ಯ ಜನರ ಆರೋಗ್ಯ ಕಾಪಾಡಲು ಶ್ರಮಿಸಿದ ಪ್ರಧಾನಿಗೆ ಪ್ರತಿಯೊಬ್ಬರು ಧನ್ಯವಾದ ಹೇಳಬೇಕು ಎಂದರು. ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾಂವಿ, ಸುರೇಶ ಬೈಲಪ್ಪನವರ, ಇಂಜನಿಯರ್‌ ಮಲ್ಲಿಕಾರ್ಜುನ ಭರಮಣ್ಣವರ, ಶಿಕ್ಷಕಿ ರಶ್ಮಿ ಜೋಶಿ, ನ್ಯಾಯವಾದಿ ವಿಜಯ ಪತ್ತಾರ, ತಾಲೂಕು ಕಜಾಪ ವಕ್ತಾರ ಮಹಾಂತೇಶ ರಾಜಗೋಳಿ, ಲೀಲಾವತಿ ಕುಡಸೋಮಣ್ಣವರ, ಬಿ.ಎಂ.ಪಾಟೀಲ, ಉಷಾ ಸವದತ್ತಿಮಠ, ಎಪಿಎಂಸಿಯ ಶಿವಬಸ್ಸು ಅರಳಿಕಟ್ಟಿ, ಆನಂದ ಬೆಳವಡಿ ಮುಂತಾದವರು ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಶಿಕ್ಷಕ ಸಂದೀಪ ಕುಲಕರ್ಣಿ ಸ್ವಾಗತಿಸಿ, ನಿರೂಪಿಸಿದರು. ವಿಶ್ವದೆಲ್ಲೆಡೆ ಯೋಗದ ಮಹತ್ವದ ಪರಿಕಲ್ಪನೆಯನ್ನು ನೀಡಿ ಜೂ.21ನ್ನು ಯೋಗದ ದಿನವೆಂದು ಅಧಿಕೃತವಾಗಿ ಘೋಷಿಸಿ, ದೇಶದ ಮತ್ತು ಪಾಶ್ಚಮಾತ್ಯ ಜನರ ಆರೋಗ್ಯ ಕಾಪಾಡಲು ಶ್ರಮಿಸಿದ ಪ್ರಧಾನಿಗೆ ಪ್ರತಿಯೊಬ್ಬರು ಧನ್ಯವಾದ ಹೇಳಬೇಕು.

-ಡಾ.ಜ್ಯೋತಿ ಕುಡಸೋಮಣ್ಣವರ,

ಅಮೆರಿಕದ ದಂತ ವೈದ್ಯರು.