ಯೋಗದಿಂದ ಒತ್ತಡ, ಖಿನ್ನತೆ ನಿವಾರಣೆ: ಶಿವರುದ್ರಸ್ವಾಮಿ

| Published : Sep 26 2024, 09:58 AM IST

ಯೋಗದಿಂದ ಒತ್ತಡ, ಖಿನ್ನತೆ ನಿವಾರಣೆ: ಶಿವರುದ್ರಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಯೋಗಾಸನ ದಿವ್ಯೌಷಧವಾಗಿದೆ. ವಿದ್ಯಾರ್ಥಿಗಳಲ್ಲಿ ಕಾಣಬಹುದಾದ ಬೆನ್ನು ನೋವು, ಮಾನಸಿಕ ಏಕಾಗ್ರತೆ, ಇಚ್ಚಾಶಕ್ತಿ ಹಾಗೂ ಸ್ಮರಣ ಶಕ್ತಿ ಇನ್ನೂ ಹಲವಾರು ಸಣ್ಣ ಪುಟ್ಟ ಸಮಸ್ಯೆಗಳಿಗೆ ಯೋಗ ರಾಮಬಾಣವಾಗಿದೆ. ಆಧುನೀಕ ಜೀವನ ಶೈಲಿಯ ಬದಲಾವಣೆಗೆ ಯೋಗ ಸಹಕಾರಿಯಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಯೋಗ, ಪ್ರಾಣಾಯಾಮದಿಂದ ಒತ್ತಡ, ಭಯ, ಖಿನ್ನತೆ ನಿವಾರಣೆಯಾಗಿ ಆತ್ಮವಿಶ್ವಾಸ, ಏಕಾಗ್ರತೆ, ದೈಹಿಕ ಮತ್ತು ಮಾನಸಿಕ ಸದೃಢತೆ ಹೆಚ್ಚುತ್ತದೆ ಎಂದು ಯೋಗ ಗುರು ಎಚ್.ವಿ.ಶಿವರುದ್ರಸ್ವಾಮಿ ತಿಳಿಸಿದರು.

ತಾಲೂಕಿನ ಸಿದ್ದಯ್ಯನಕೊಪ್ಪಲು ಗೇಟ್ ಸಮೀಪವಿರುವ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ನಡೆದ ಯೋಗ ಕಲಿಕಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಎಲ್ಲರೂ ಯೋಗ, ಧ್ಯಾನ, ಪ್ರಾಣಾಯಾಮಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ದೈಹಿಕ ಆರೋಗ್ಯದ ಜೊತೆಗೆ ಮಾಸಿಕ ಆರೋಗ್ಯಕಾಪಾಡಿಕೊಳ್ಳಲು ಸಾಧ್ಯ ಎಂದರು.

ಯೋಗಾಸನ ದಿವ್ಯೌಷಧವಾಗಿದೆ. ವಿದ್ಯಾರ್ಥಿಗಳಲ್ಲಿ ಕಾಣಬಹುದಾದ ಬೆನ್ನು ನೋವು, ಮಾನಸಿಕ ಏಕಾಗ್ರತೆ, ಇಚ್ಚಾಶಕ್ತಿ ಹಾಗೂ ಸ್ಮರಣ ಶಕ್ತಿ ಇನ್ನೂ ಹಲವಾರು ಸಣ್ಣ ಪುಟ್ಟ ಸಮಸ್ಯೆಗಳಿಗೆ ಯೋಗ ರಾಮಬಾಣವಾಗಿದೆ ಎಂದು ಹೇಳಿದರು.

ಆಧುನೀಕ ಜೀವನ ಶೈಲಿಯ ಬದಲಾವಣೆಗೆ ಯೋಗ ಸಹಕಾರಿಯಾಗುತ್ತದೆ. ಸತತ ಅಭ್ಯಾಸ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಂತೆ ಕರೆ ನೀಡಿದರು.

ಕಾವೇರಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ಎಚ್.ಪಿ.ರಾಜು, ಕಾರ್ಯದರ್ಶಿ ಪ್ರೊ. ಟಿ. ನಾಗೇಂದ್ರ, ಪ್ರಾಂಶುಪಾಲ ಪ್ರೊ. ಎ.ಎಸ್. ಶ್ರೀಕಂಠಯ್ಯ, ಸಂಯೋಜಕ ಬಿ.ಪಿ. ಸಿದ್ದರಾಜು ಇತರರು ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಬನ್ನಿ ಮಂಟಪದ ಆವರಣದಲ್ಲಿ ಸ್ವಚ್ಛತಾ ಕಾರ್ಯ, ಗಿಡನೆಟ್ಟು ಪೋಷಣೆ

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣತಾಲೂಕಿನ ಕಿರಂಗೂರು ಗ್ರಾಮದ ಬಳಿಯ ಐತಿಹಾಸಿಕ ಬನ್ನಿ ಮಂಟಪದ ಆವರಣದಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಯಿತು.

ಮೈಸೂರಿನ ಶೇಷಾದ್ರಿಪುರಂ ಪದವಿ ಕಾಲೇಜಿನ ಎನ್‌ಎಸ್‌ಎಸ್ ಘಟಕ, ಅಚೀವರ್ಸ್ ಅಕಾಡೆಮಿ ಹಾಗೂ ಕಿರಗೂರು ಗ್ರಾಮ ಪಂಚಾಯ್ತಿಯಿಂದ ಬನ್ನಿ ಮಂಟಪದ ಸುತ್ತ ಬೆಳೆದು ನಿಂತಿದ್ದ ಗಿಡ ಗಂಟೆಗಳನ್ನು ಹಾಗೂ ಪ್ಲಾಸ್ಟಿಕ್ ಪೇಪರ್ ಮುಂತಾದ ಕಸಗಳನ್ನು ಶ್ರಮದಾನದ ಮಾಡುವ ಮುಖಾಂತರ ವಿದ್ಯಾರ್ಥಿಗಳು ತೆರವು ಗೊಳಿಸಿ ಸ್ವಚ್ಛತೆ ಮಾಡಿದರು.ಅ.4ರಿಂದ ಆರಂಭಗೊಳ್ಳಲಿರುವ ಶ್ರೀರಂಗಪಟ್ಟಣ ದಸರಾ ಹಿನ್ನೆಲೆಯಲ್ಲಿ ಎನ್‌ಎಸ್‌ಎಸ್ ಘಟಕ ವಿದ್ಯಾರ್ಥಿಗಳು, ಅಜೀವರ್ಸ್ ಹಾಗೂ ಕಿರಂಗೂರು ಗ್ರಾಪಂ ಸಿಬ್ಬಂದಿ ಜೊತೆಗೂಡಿ ಒಂದು ದಿನದ ಶ್ರಮದಾನ ನಡೆಸಿದ ನಂತರ ಬನ್ನಿಮಂಟಪದ ಸುತ್ತ ವಿವಿಧ ಬಗೆಯ ಹತ್ತಾರು ಗಿಡಗಳನ್ನು ನೆಟ್ಟು, ನೀರುಣಿಸಿದರು.ಈ ವೇಳೆ ಕಿರಂಗೂರು ಗ್ರಾಪಂ ಪಿಡಿಒ ಪ್ರಶಾಂತ್ ಬಾಬು, ಎನ್‌ಎಸ್‌ಎಸ್ ಅಧಿಕಾರಿ ಡಾ. ರಾಘವೇಂದ್ರ, ಗ್ರಾಮದ ಮುಖಂಡರಾದ ಯಶವಂತ್, ಸಮರ್ಪಣ ಟ್ರಸ್ಟ್‌ನ ಅಧ್ಯಕ್ಷರಾದ ಜೈ ಶಂಕರ್, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿಗಳಾದ ಗುರುಮೂರ್ತಿ ಭಟ್, ಮುರಳಿ, ವಿದ್ಯಾರ್ಥಿಗಳಾದ ಅಚಲ, ಅಮಿತ್, ವಿದ್ಯಾ, ದರ್ಶನ್, ದಿವಿತ್, ಮುರಳಿ ಸೇರಿದಂತೆ ಇತರರು ಇದ್ದರು.