ಬೆನ್ನುನೋವಿಗೆ ಯೋಗ ಚಿಕಿತ್ಸೆಯಿಂದ ಪರಿಹಾರ ಸಾಧ್ಯ: ಡಾ.ರಾಘವೇಂದ್ರ ಗುರೂಜಿ

| Published : Jun 29 2024, 12:44 AM IST / Updated: Jun 29 2024, 11:53 AM IST

ಬೆನ್ನುನೋವಿಗೆ ಯೋಗ ಚಿಕಿತ್ಸೆಯಿಂದ ಪರಿಹಾರ ಸಾಧ್ಯ: ಡಾ.ರಾಘವೇಂದ್ರ ಗುರೂಜಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆನ್ನುನೋವಿಗೆ ಮುಖ್ಯ ಕಾರಣ ಇಂದಿನ ಆಧುನಿಕ ಜೀವನಶೈಲಿ ಮಾರ್ಪಾಡುಗಳೇ ಕಾರಣ. ಆಧುನಿಕ ಜೀವನಶೈಲಿಗೆ ಮೊರೆಹೋಗಿ ಶರೀರಕ್ಕೆ ಸರಿಯಾದ ವ್ಯಾಯಾಮ ಕೊಡದೇ ಜನರು ಸುಖಃ ಭೋಗಗಳಿಗೆ ದಾಸರಾಗಿದ್ದಾರೆ. ಪ್ರಾರಂಭದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದಲ್ಲಿ ಬೆನ್ನಿನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ದಾವಣಗೆರೆ: ಪ್ರಸ್ತುತ ದಿನಗಳಲ್ಲಿ ಜನಸಾಮಾನ್ಯರು ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದಾರೆ. ಇದೊಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ ಶೇ.60 ರಿಂದ 80 ಭಾಗಶಃ ಮಕ್ಕಳಾದಿಯಾಗಿ ವಯೋವೃದ್ಧರು ತೀವ್ರ ಬೆನ್ನುನೋವಿನಿಂದ ಬಳಲುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಯೋಗತಜ್ಞ ಡಾ.ರಾಘವೇಂದ್ರ ಗುರೂಜಿ ಹೇಳಿದರು.

ನಗರದ ಪಿ.ಜೆ. ಬಡಾವಣೆಯ ಜೆ.ಪಿ. ಸಭಾಂಗಣದಲ್ಲಿ ಭಾವಸಾರ ವಿಷನ್ ಇಂಡಿಯಾ ವಲಯ-102 ವತಿಯಿಂದ ಆಯೋಜಿಸಿದ್ದ ಮಾಸಿಕ ಮಹಾಸಭೆಯಲ್ಲಿ “ಕಾಡುವ ಬೆನ್ನುನೋವು: ಇದಕ್ಕಿದೆ ಯೋಗ ಚಿಕಿತ್ಸೆಯಲ್ಲಿ ಪರಿಹಾರ” ಎಂಬ ವಿಷಯದ ಉಪನ್ಯಾಸ ನೀಡಿದರು. 

ಬೆನ್ನುನೋವಿಗೆ ಮುಖ್ಯ ಕಾರಣ ಇಂದಿನ ಆಧುನಿಕ ಜೀವನಶೈಲಿ ಮಾರ್ಪಾಡುಗಳೇ ಕಾರಣ. ಆಧುನಿಕ ಜೀವನಶೈಲಿಗೆ ಮೊರೆಹೋಗಿ ಶರೀರಕ್ಕೆ ಸರಿಯಾದ ವ್ಯಾಯಾಮ ಕೊಡದೇ ಜನರು ಸುಖಃ ಭೋಗಗಳಿಗೆ ದಾಸರಾಗಿದ್ದಾರೆ. ಪ್ರಾರಂಭದಲ್ಲಿಯೇ ಸೂಕ್ತ ಚಿಕಿತ್ಸೆ ಪಡೆದಲ್ಲಿ ಬೆನ್ನಿನ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಸಂದೀಪ್ ವದೋನಿ, ಕಾರ್ಯದರ್ಶಿ ರಮೇಶ ಬಾಬು ಗುಜ್ಜರ್, ಅನಿಲ್ ಕುಮಾರ ಮಾಲದಕರ್, ಇತರರು ಇದ್ದರು. ಓಂಕಾರ್ ಪ್ರಾರ್ಥಿಸಿದರೆ, ಭಾವಸಾರ್ ಮಿಷನ್ ಇಂಡಿಯಾ ವಲಯದ ಜಿಲ್ಲಾಧ್ಯಕ್ಷೆ ಸರಳ ಆಮ್ಟೆ ಸ್ವಾಗತಿಸಿದರು. ಪ್ರಾತ್ಯಕ್ಷಿಕೆಯಲ್ಲಿ ಮಹಾಂತೇಶ್, ಅಶ್ವಿನಿ ವದೋನಿ, ಯೋಗಿಕ್, ವಿ.ಕೆ.ರಾಹುಲ್ ಕೆಲವು ಚಿಕಿತ್ಸೆಯ ಭಂಗಿಯ ಆಸನಗಳನ್ನು ಪ್ರದರ್ಶಿಸಿದರು.