ಕೃಷಿ ಪತ್ತಿನ ಸಂಘಕ್ಕೆ ಯೋಗನರಸಿಂಹೇಗೌಡ ಅಧ್ಯಕ್ಷರಾಗಿ ಆಯ್ಕೆ

| Published : Jul 04 2025, 11:52 PM IST

ಸಾರಾಂಶ

ಚುನಾವಣಾಧಿಕಾರಿ ಹೇಮಲತಾ ಗುಪ್ತಮತದಾನ ನಡೆಸಿದಾಗ ಎಂ.ಬಿ.ಯೋಗನರಸಿಂಹೇಗೌಡ - 8 ಮತ ಪಡೆದು ಕುಮಾರ್- 5 ಮತ ವಿರುದ್ಧ ಗೆಲುವು ಸಾಧಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಎಸ್.ನಾಗೇಂದ್ರ - 8 ಮತ ಪಡೆದು ಜಯಲಕ್ಷ್ಮೀ -5 ಮತ ವಿರುದ್ಧ ಗೆಲುವು ಸಾಧಿಸಿದರು.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ರೈತಸಂಘ - ಕಾಂಗ್ರೆಸ್ ಬೆಂಬಲಿತ ಎಂ.ಬಿ.ಯೋಗನರಸಿಂಹೇಗೌಡ, ಬಿ.ಎಸ್.ನಾಗೇಂದ್ರ ಆಯ್ಕೆಯಾದರು.

12 ಮಂದಿ ನಿರ್ದೇಶಕರು, ಸಹಕಾರ ಪ್ರತಿನಿಧಿ ಸೇರಿ ಒಟ್ಟು 13 ನಿರ್ದೇಶಕರ ಸಂಖ್ಯಾಬಲ ಹೊಂದಿರುವ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ರೈತಸಂಘ- ಕಾಂಗ್ರೆಸ್ ಬೆಂಬಲಿತ- 7 ಹಾಗೂ ಜೆಡಿಎಸ್ ಬೆಂಬಲಿತ- 5 ನಿರ್ದೇಶಕರಿದ್ದರು. ಅಧ್ಯಕ್ಷ ಸ್ಥಾನಕ್ಕೆ ರೈತಸಂಘ- ಕಾಂಗ್ರೆಸ್ ಬೆಂಬಲಿತ ಯೋಗನರಸಿಂಹೇಗೌಡ ಮತ್ತು ಜೆಡಿಎಸ್ ಬೆಂಬಲಿತ ಕುಮಾರ ನಾಮಪತ್ರ ಸಲ್ಲಿಸಿದರು.‌ ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಎಸ್.ನಾಗೇಂದ್ರ ಮತ್ತು ಜಯಲಕ್ಷ್ಮೀ ನಾಮಪತ್ರ ಸಲ್ಲಿಸಿದರು.

ನಂತರ ಚುನಾವಣಾಧಿಕಾರಿ ಹೇಮಲತಾ ಗುಪ್ತಮತದಾನ ನಡೆಸಿದಾಗ ಎಂ.ಬಿ.ಯೋಗನರಸಿಂಹೇಗೌಡ - 8 ಮತ ಪಡೆದು ಕುಮಾರ್- 5 ಮತ ವಿರುದ್ಧ ಗೆಲುವು ಸಾಧಿಸಿ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಎಸ್.ನಾಗೇಂದ್ರ - 8 ಮತ ಪಡೆದು ಜಯಲಕ್ಷ್ಮೀ -5 ಮತ ವಿರುದ್ಧ ಗೆಲುವು ಸಾಧಿಸಿದರು.

ಚುನಾವಣೆಯಲ್ಲಿ ನಿರ್ದೇಶಕರಾದ ರಾಮೇಗೌಡ, ಪಾರ್ವತಮ್ಮ ರಾಮೇಗೌಡ, ಚಲುವಾಚಾರ್, ಅಣ್ಣಯ್ಯ, ರಮೇಶ್, ರವಿ, ಕೃಷ್ಣಯ್ಯ, ಮಹೇಶ್, ಸಹಕಾರ ಸಂಘದ ಪ್ರತಿನಿಧಿ ಬೋರೇಗೌಡ, ಮುಖಂಡರಾದ ಲೋಕೇಶ್, ಮಹೇಶ್, ಸೋಮು, ದಿಲೀಪ್, ವಿಜಯ್ ಕುಮಾರ್, ಗಿರೀಶ್,ಸತೀಶ್ ಕುಮಾರ್, ಗಂಗಾಧರ್, ವಕೀಲ ಸತೀಶ್, ಮಂಜುನಾಥ್, ಚನ್ನಗೇಗೌಡ, ಕನಗೋನಹಳ್ಳಿ ಬೋರೇಗೌಡ, ರವಿ, ಮಂಜುನಾಥ್, ಮಹೇಶ್, ಕೀರ್ತಾಚಾರಿ, ಕೃಷ್ಣೇಗೌಡ, ಕಾರ್ಯದರ್ಶಿ ಸಾಹೆರಬಾನು.ಎ ಸೇರಿ ಸಿಬ್ಬಂದಿ ಇದ್ದರು‌.

ಶಾಸಕ ದರ್ಶನ್ ಪುಟ್ಟಣ್ಣಯ್ಯ ನಿರ್ದೇಶನದಂತೆ ಚುನಾವಣೆಯಲ್ಲಿ ಆಯ್ಕೆಯಾದ ಯೋಗನರಸಿಂಹೇಗೌಡ ಮತ್ತು ನಾಗೇಂದ್ರರನ್ನು ಶಾಸಕರ ಸಹೋದರ ರಾಘವ ಪ್ರಕಾಶ್ , ರೈತ ಸಂಘ ಮತ್ತು ಶಾಸಕರ ಪರ ಅಭಿನಂದಿಸಿದರು.