ಸಾರಾಂಶ
ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಅರಕಲಗೂಡು ತಾಲೂಕಿನ ಕಂಠೇನಹಳ್ಳಿ ಗ್ರಾಮದ ಮೃತ ರೈತ ಕೆ.ಡಿ. ರವಿ ನಿವಾಸಕ್ಕೆ ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಎಚ್.ಯೋಗಾರಮೇಶ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ನೀಡಿದರು. ಕಾನೂನು ಕಟ್ಟಲೆಗಳಿಂದ ರೈತರ ಬದುಕು ಬದಲಾಗುವುದಿಲ್ಲ. ಬದಲಿಗೆ ಮಾರುಕಟ್ಟೆ ವ್ಯವಸ್ಥೆ ಬೆಂಬಲ ಬೆಲೆ ಗುಣಮಟ್ಟದ ಬೀಜಗಳ ಸರಬರಾಜಿಗೆ ಮುಂದಾಗಬೇಕೆಂದು ಅವರು ಕೇಂದ್ರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಅರಕಲಗೂಡು
ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಅರಕಲಗೂಡು ತಾಲೂಕಿನ ಕಂಠೇನಹಳ್ಳಿ ಗ್ರಾಮದ ಮೃತ ರೈತ ಕೆ.ಡಿ. ರವಿ ನಿವಾಸಕ್ಕೆ ಪೊಟ್ಯಾಟೋ ಕ್ಲಬ್ ಅಧ್ಯಕ್ಷ ಎಚ್.ಯೋಗಾರಮೇಶ್ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ನೀಡಿದರು.ಆಧುನಿಕ ತಂತ್ರಜ್ಞಾನದಲ್ಲಿಯೂ ರೈತರ ಆತ್ಮಹತ್ಯೆ ಪ್ರಕರಣ ತಲೆತಗ್ಗಿಸುವಂತಾಗಿದೆ. ಸರ್ಕಾರ ಈ ಸಮಸ್ಯೆ ಪರಿಹಾರಕ್ಕೆ ಬೆಂಬಲ ಬೆಲೆಯಿಂದ ಮಾತ್ರ ಸಾಧ್ಯ. ಕಾನೂನು ಕಟ್ಟಲೆಗಳಿಂದ ರೈತರ ಬದುಕು ಬದಲಾಗುವುದಿಲ್ಲ. ಬದಲಿಗೆ ಮಾರುಕಟ್ಟೆ ವ್ಯವಸ್ಥೆ ಬೆಂಬಲ ಬೆಲೆ ಗುಣಮಟ್ಟದ ಬೀಜಗಳ ಸರಬರಾಜಿಗೆ ಮುಂದಾಗಬೇಕೆಂದು ಅವರು ಕೇಂದ್ರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಕಿರುಕುಳಗಳ ಸಲುವಾಗಿ ಕಾನೂನು ರೂಪಿಸಲು ಮುಂದಾಗಿರುವುದು ಸ್ವಾಗತಾರ್ಹವಾದರೂ ರೈತರು ಮೈಕ್ರೋ ಫೈನಾನ್ಸ್ ಬ್ಯಾಂಕ್ ಗಳಿಂದ ಪಡೆಯುವ ಕೃಷಿ ಸಾಲಕ್ಕೆ ಅತಿ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವಂತೆ ಕ್ರಮ ಕೈಗೊಳ್ಳಬೇಕು. ಜೊತೆಗೆ ಕೈಗಾರಿಕಾ ಉದ್ಯಮಿಗಳು ವ್ಯಾಪಾರಸ್ಥರು ಪಡೆಯುವ ಸಾಲಗಳಂತೆ ರೈತರ ಸಾಲಗಳಿಗೂ ರಿಯಾಯಿತಿ ಕಲ್ಪಿಸಬೇಕು. ಇದನ್ನು ಪಕ್ಷಾತೀತವಾಗಿ ಎಲ್ಲರೂ ಬೆಂಬಲಿಸಬೇಕೆಂದು ಆಗ್ರಹಿಸಿದರು.ಇದೇ ವೇಳೆ ಗುರು, ಮಂಜು, ಯೋಗೇಶ್, ಇನ್ನೂ ಹಲವು ಮುಖಂಡರು, ಗ್ರಾಮಸ್ಥರು ಇದ್ದರು.