ಯೋಗಿ ವೇಮನ ವಚನಗಳು ಇಂದಿಗೂ ಪ್ರಸ್ತುತ

| Published : Jan 20 2024, 02:02 AM IST

ಸಾರಾಂಶ

ಹೊಸಕೋಟೆ: ಮಹರ್ಷಿ ವೇಮನ ೧೫ನೇ ಶತಮಾನದ ಸಮಾಜ ಸುಧಾರಕರಲ್ಲೊಬ್ಬರಾದ ಮಹಾದರ್ಶನಿಕರಾಗಿದ್ದು ಅವರು ವಿಶಾಲ ನೋಟದ ಹೃದಯದವರಾಗಿದ್ದರು ಎಂದು ತಹಸೀಲ್ದಾರ್ ವಿಜಯ್ ಕುಮಾರ್ ತಿಳಿಸಿದರು.

ಹೊಸಕೋಟೆ: ಮಹರ್ಷಿ ವೇಮನ ೧೫ನೇ ಶತಮಾನದ ಸಮಾಜ ಸುಧಾರಕರಲ್ಲೊಬ್ಬರಾದ ಮಹಾದರ್ಶನಿಕರಾಗಿದ್ದು ಅವರು ವಿಶಾಲ ನೋಟದ ಹೃದಯದವರಾಗಿದ್ದರು ಎಂದು ತಹಸೀಲ್ದಾರ್ ವಿಜಯ್ ಕುಮಾರ್ ತಿಳಿಸಿದರು.

ತಾಲೂಕು ಕಚೇರಿ ಆವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಮಹರ್ಷಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನ್ನಡದಲ್ಲಿ ಸರ್ವಜ್ಞ, ತಮಿಳಿನಲ್ಲಿ ತಿರುವಳ್ಳೂರ್‌ ಅವರಂತೆ ವೇಮನರು ಕೂಡ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಇನ್ನೂ ಹಲವು ರಾಜ್ಯಗಳಲ್ಲಿ ದಾರ್ಶನಿಕರಾಗಿ ಪ್ರಸಿದ್ಧಿ ಪಡೆದಿದ್ದಾರೆ ಎಂದು ಹೇಳಿದರು.

ವೇಮನ ಹೆತ್ತವರಿಂದ, ಒಡಹುಟ್ಟಿದವರಿಂದ, ಸಂಬಂಧಿಕರಿಂದ ಅನಾದರಕ್ಕೆ ಗುರಿಯಾಗಿ ದುಶ್ಚಟಗಳ ದಾಸನಾಗುತ್ತಾನೆ. ವೇಶ್ಯೆಯೊಬ್ಬಳ ಸಹವಾಸ ಮಾಡಿ ಮನೆಯ ಸಂಪತ್ತು ಹಾಳುಗೆಡುವುತ್ತಾನೆ. ವೇಮನನ ಅತ್ತಿಗೆ ಹೇಮರೆಡ್ಡಿ ಮಲ್ಲಮ್ಮ ಮೈದುನನ ಮನ ತಿದ್ದುವಲ್ಲಿ ಪ್ರಯತ್ನಿಸಿ ಸಫಲ ಆಗುತ್ತಾಳೆ. ಜ್ಞಾನೋದಯ ಪಡೆದು ವೇಮನ ದಾರ್ಶನಿಕ ಕವಿಯಾಗಿ ರೂಪುಗೊಂಡರು ಎಂಬ ಇತಿಹಾಸವಿದೆ. ಯೋಗಿ ವೇಮನ ವಚನಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.

ರೆಡ್ಡಿ ಸಮುದಾಯದ ಮುಖಂಡ ನಿಖಿಲ್ ರೆಡ್ಡಿ, ಅನುಗೊಂಡನಹಳ್ಳಿ ಹಾಗೂ ಜಡಿಗೇನಹಳ್ಳಿ ಹೋಬಳಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೋಮಲಾಪುರ ಲತಾ ರೆಡ್ಡಿ, ಗ್ರೇಡ್ -2 ತಹಸೀಲ್ದಾರ್ ಪ್ರಭಾಕರ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಸಿದ್ದರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.ಫೋಟೋ : 19 ಹೆಚ್‌ಎಸ್‌ಕೆ 3

ಹೊಸಕೋಟೆ ತಾಲೂಕು ಕಚೇರಿಯಲ್ಲಿ ತಾಲೂಕು ಆಡಳಿತದಿಂದ ಮಹರ್ಷಿ ವೇಮನ ಜಯಂತಿಯಲ್ಲಿ ತಹಸೀಲ್ದಾರ್ ವಿಜಯ್ ಕುಮಾರ್ ಮಹರ್ಷಿ ವೇಮನ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.