ಯೋಗಿನಾರೇಯಣ ಯತೀಂದ್ರ ಕೈವಾರ ತಾತಯ್ಯ ಜಯಂತಿ ಆಚರಣೆ

| Published : Mar 26 2024, 01:17 AM IST

ಸಾರಾಂಶ

ಯಾದಗಿರಿ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಯೋಗಿನಾರೇಯಣ ಯತೀಂದ್ರ ಕೈವಾರ ತಾತಯ್ಯನವರ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಯಾದಗಿರಿ

ಯೋಗಿನಾರೇಯಣ ಯತೀಂದ್ರ ಕೈವಾರ ತಾತಯ್ಯನವರ ತತ್ವಪದ ಇಂದಿಗೂ ಪ್ರಸ್ತುತವಾಗಿವೆ. ಅವರು ತಮ್ಮ ಕೀರ್ತನೆಗಳ ಮೂಲಕ ಸಮಾಜದ ಅಂಕು-ಡೊಂಕು ತಿದ್ದುವ ಪ್ರಯತ್ನ ಮಾಡಿದವರು ಎಂದು ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಹೇಳಿದರು.

ಲೋಕಸಭಾ ಚುನಾವಣೆ ನಿಮಿತ್ತ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸರಳ ಹಾಗೂ ಸಾಂಕೇತಿಕವಾಗಿ ಯೋಗಿನಾರೇಯಣ ಯತೀಂದ್ರ ಕೈವಾರ ತಾತಯ್ಯನವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಜಯಂತಿ ಆಚರಿಸಿ ಮಾತನಾಡಿದರು.

ಮಹನೀಯರ ಬದುಕು, ತತ್ವ, ಜೀವನ ಮೌಲ್ಯ ಅರಿಯುವುದು, ಅನುಸರಿಸುವುದರಿಂದ ಬದುಕು ಹಸನಾಗುತ್ತದೆ. ಅವರ ಆದರ್ಶಗಳನ್ನು ಜನರಿಗೆ ತಲುಪಿಸಲು ಇಂತಹ ಜಯಂತಿಗಳು ಸಹಕಾರಿ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ, ತಹಸೀಲ್ದಾರ್ ನಾಗಮ್ಮ ಎಂ. ಕಟ್ಟಿಮನಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಸರೋಜಾ, ಪಶುಪಾಲನೆ ಇಲಾಖೆ ಉಪನಿರ್ದೇಶಕ ಡಾ. ರಾಜು ದೇಶಮುಖ, ಸಹಾಯಕ ಸಾಂಖಿಕ ಇಲಾಖೆ ಅಧಿಕಾರಿ ನಾಗರಾಜ ನಾಗೂರ, ಲೆಕ್ಕ ಪರಿಶೋಧನಾಧಿಕಾರಿ ಸುರೇಶ ಪಾಣಿಬಾತೆ, ಕಾರ್ಮಿಕ ಇಲಾಖೆ ಭಗತ್ ವಾಡೇಕರ್, ಜಿಪಂ ಸಿಬ್ಬಂದಿ ರಾಮು ಹತ್ತಿಕುಣಿ ಸೇರಿ ಇತರರಿದ್ದರು.