ಯೋಗಿನಾರೇಯಣ ಯತೀಂದ್ರರು ಬ್ರಹ್ಮಜ್ಞಾನಿ, ತ್ರಿಕಾಲಜ್ಞಾನಿ: ಗುಬ್ಬಿಗೂಡು ರಮೇಶ್

| Published : Mar 15 2025, 01:03 AM IST

ಯೋಗಿನಾರೇಯಣ ಯತೀಂದ್ರರು ಬ್ರಹ್ಮಜ್ಞಾನಿ, ತ್ರಿಕಾಲಜ್ಞಾನಿ: ಗುಬ್ಬಿಗೂಡು ರಮೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಸಾವಿರಾರು ಕೀರ್ತನೆಗಳನ್ನು ರಚಿಸಿ, ಸಾಮಾನ್ಯ ಜನರಿಗೂ ಅರ್ಥ ಆಗುವ ರೀತಿಯಲ್ಲಿ ವಚನ ಸಾಹಿತ್ಯವನ್ನು ಪರಿಚಯಿಸಿದರು. ಯೋಗಿ ನಾರೇಯಣ ಯತೀಂದ್ರರು ದೇಶ ಹಾಗೂ ಪ್ರಪಂಚದಲ್ಲಿ ಮುಂದೆ ಏನೆಲ್ಲ ಆಗುತ್ತದೆ ಎಂಬ ಕಾಲಜ್ಞಾನವನ್ನು ಹೇಳುವ ಮೂಲಕ ಎಲ್ಲರನ್ನು ಅಚ್ಚರಿಪಡಿಸಿದ್ದರು. ಕೈವಾರ ತಾತಯ್ಯನವರು ನುಡಿದಿದ್ದ ಭವಿಷ್ಯಗಳಲ್ಲಿ ಬಹುತೇಖ ಘಟನೆಗಳು ಸತ್ಯವಾಗಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ವರಕವಿಗಳಾಗಿದ್ದ ಶ್ರೀಯೋಗಿನಾರೇಯಣ ಯತೀಂದ್ರರು ಬ್ರಹ್ಮಜ್ಞಾನಿಗಳಾದರು. ಅವರ ಜೀವನದಲ್ಲಿ ಘಟಿಸಿದ ಪವಾಡಗಳು ಅನೇಕ. ತ್ರಿಕಾಲ ಜ್ಞಾನಿಗಳಾಗಿದ್ದ ಅವರು ಇಚ್ಚಾಮರಣಿಯಾಗಿದ್ದರು ಮತ್ತು ಪರಾಕಾಯ ಪ್ರವೇಶದ ಸಿದ್ಧಿಯನ್ನು ಪಡೆದಿದ್ದರು ಎಂದು ಸಂಸ್ಕೃತಿ ಚಿಂತಕ ಡಾ. ಗುಬ್ಬಿಗೂಡು ರಮೇಶ್ ತಿಳಿಸಿರು.

ನಗರದ ಕಲಾಮಂದಿರದ ಕಿರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಶುಕ್ರವಾರ ಆಯೋಜಿಸಿದ್ದ ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿಯಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಕಾಲಜ್ಞಾನ ಎಂದರೆ ಯೋಗ ಸಿದ್ಧಿ ಪಡೆದ ತಪಸ್ವಿಯ ಮುಖದಿಂದ. ಕೈವಾರ ತಾತಯ್ಯ ತನ್ನ ಕೀರ್ತನೆಗಳು ಹಾಗೂ ತತ್ವ ಪದಗಳನ್ನು ಹೇಳುವ ಮೂಲಕ ಮನೆ ಮಾತಾಗಿದ್ದರು ಎಂದರು.

ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಸಾವಿರಾರು ಕೀರ್ತನೆಗಳನ್ನು ರಚಿಸಿ, ಸಾಮಾನ್ಯ ಜನರಿಗೂ ಅರ್ಥ ಆಗುವ ರೀತಿಯಲ್ಲಿ ವಚನ ಸಾಹಿತ್ಯವನ್ನು ಪರಿಚಯಿಸಿದರು. ಯೋಗಿ ನಾರೇಯಣ ಯತೀಂದ್ರರು ದೇಶ ಹಾಗೂ ಪ್ರಪಂಚದಲ್ಲಿ ಮುಂದೆ ಏನೆಲ್ಲ ಆಗುತ್ತದೆ ಎಂಬ ಕಾಲಜ್ಞಾನವನ್ನು ಹೇಳುವ ಮೂಲಕ ಎಲ್ಲರನ್ನು ಅಚ್ಚರಿಪಡಿಸಿದ್ದರು. ಕೈವಾರ ತಾತಯ್ಯನವರು ನುಡಿದಿದ್ದ ಭವಿಷ್ಯಗಳಲ್ಲಿ ಬಹುತೇಖ ಘಟನೆಗಳು ಸತ್ಯವಾಗಿವೆ ಎಂದರು.

ಆಹಾರವಿದ್ದರೂ ಕೊಳ್ಳಲು ಆಗಲ್ಲ, ದುಬಾರಿ ಜಗತ್ತಿನಲ್ಲಿ ವಿಚಿತ್ರ ಬರಗಾಲ, ಪತಿ- ಪತ್ನಿ ಸಂಬಂಧಕ್ಕೆ ಧಕ್ಕೆ ಸೇರಿದಂತೆ ಸಮಾಜದ ಬಗ್ಗೆ ಅನೇಕ ಪ್ರಚಲಿತ ವಿಷಯಗಳ ಬಗ್ಗೆ ಬಹಳ ಹಿಂದೆಯೇ ಉಲ್ಲೇಖಿಸಿದ್ದು, ಅಚ್ಚರಿ ಹಾಗೂ ಗಮನಾರ್ಹ ಎಂದರು.

ವಿಶ್ವಕ್ಕೆ ಉತ್ತಮ ಸಂದೇಶ ಸಾರಿದ ಶ್ರೀ ಯೋಗಿ ನಾರೇಯಣ ಯತೀಂದ್ರ ಅವರ ಆದರ್ಶ ಗುಣಗಳನ್ನು ಪ್ರತಿಯೊಬ್ಬನೂ ಜೀವನದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಸಾಗಬೇಕು. ಜಾತಿ- ಮತಗಳ ಕುಲಗೋತ್ರಗಳ ವರ್ಣಭೇದವನ್ನು ಖಂಡಿಸುತ್ತಾ ದೀನ-ದಲಿತರ-ಶೋಷಿತರ ಉದ್ಧಾರಕ್ಕಾಗಿ ವಿಶ್ವಮಾನವ ಸಂದೇಶ ಸಾರಿದ ನಾರೇಯಣ ಯತೀಂದ್ರ ಅವರ ಜಯಂತಿ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ. ಮಹಾನ್ ನಾಯಕರ ಆದರ್ಶ ಗುಣಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸಮಾನವಾಗಿ ಪ್ರೀತಿಸುತ್ತಿದ್ದರು:

ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಅವರು ಮನುಷ್ಯರನ್ನಷ್ಟೇ ಅಲ್ಲ ಎಲ್ಲಾ ಜೀವಿಗಳನ್ನು ಸಮಾನವಾಗಿ ಪ್ರೀತಿಸುತ್ತಿದ್ದರು. ಯಾವ ಜೀವಕ್ಕೂ ಕೂಡ ಒಂದು ಸಣ್ಣ ನೋವು ಆಗದ ಹಾಗೆ ಅವುಗಳನ್ನು ನೋಡುತ್ತಿದ್ದರು ಎಂದರು.

ಕೋಲಾರ ಜಿಲ್ಲೆಯಲ್ಲಿ ಸ್ಥಾಪಿತವಾದ ಸಂಸ್ಥೆ ಇವತ್ತು ಕರ್ನಾಟಕ ಸರ್ಕಾರ ಕೈವಾರ ಪ್ರದೇಶವನ್ನು ಬಯೋಲಾಜಿಕಲ್ ರಿಸರ್ವ್ ಅರಣ್ಯ ಎಂದು ಘೋಷಣೆ ಮಾಡಿದ್ದಾರೆ. ಅಲ್ಲಿರುವ ಜಿಂಕೆ, ನವಿಲುಗಳು ಇತ್ಯಾದಿಗಳನ್ನು ಯಾವುದೇ ಜೀವಿಗಳನ್ನು ಯಾರು ಮುಟ್ಟದ ಸ್ಥಿತಿಯಲ್ಲಿ ಇಟ್ಟಿದ್ದಾರೆ. ಏಕೆಂದರೆ ಕೈವಾರ ತಾತಯ್ಯನವರು ಎಲ್ಲಾ ಜೀವಿಗಳನ್ನು ಅಷ್ಟೇ ಪ್ರೀತಿಸುತ್ತಿದ್ದರು. ಮತ್ತು ಸುತ್ತಮುತ್ತ ಪರಿಸರವನ್ನು ಬೆಳೆಸಿದಂತ ಜೀವ ಆಧ್ಯಾತ್ಮಿಕ ಜೀವ ಅದು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಡಿ. ಸುದರ್ಶನ್, ವಿವಿಧ ಬಲಿಜ ಸಂಘಗಳ ಮುಖಂಡರಾದ ಮೀನಾ ತೂಗುದೀಪ್, ಆರ್. ಮಂಜುನಾಥ್, ಎಚ್.ಎ. ವೆಂಕಟೇಶ್, ಕೃಷ್ಣಪ್ಪ ಮೊದಲಾದವರು ಇದ್ದರು.ಭಾವಚಿತ್ರ ಮೆರವಣಿಗೆ

ಶ್ರೀ ಯೋಗಿನಾರೇಯಣ ಯತೀಂದ್ರರ (ಕೈವಾರ ತಾತಯ್ಯ) ಜಯಂತಿ ಅಂಗವಾಗಿ ಅವರ ಭಾವಚಿತ್ರ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ಹೊರಟ ಮೆರವಣಿಗೆಯು ಕೆ.ಆರ್. ವೃತ್ತ, ಡಿ. ದೇವರಾಜ ಅರಸು ರಸ್ತೆ, ಮೆಟ್ರೋಪೋಲ್ ವೃತ್ತ, ಹುಣಸೂರು ರಸ್ತೆಯ ಮೂಲಕ ಕಲಾಮಂದಿರಕ್ಕೆ ತಲುಪಿತು. ವಿವಿಧ ಬಲಿಜ ಸಂಘಗಳ ಮುಖಂಡರು ಪಾಲ್ಗೊಂಡಿದ್ದರು.