ಕನ್ನಡಪ್ರಭ ವಾರ್ತೆ ಸಿದ್ದಾಪುರಯಾವುದೇ ಒಬ್ಬ ವ್ಯಕ್ತಿ ಸಂಸ್ಕೃತಿ ಹಾಗೂ ಸಂಸ್ಕಾರ ಅಳವಡಿಸಿಕೊಂಡಾಗ ಮಾತ್ರ ಶ್ರೇಷ್ಠವ್ಯಕ್ತಿಯಾಗಬಹುದು. ಅಲ್ಲದೇ ದೈವ ಭಕ್ತಿಯೂ ಅತ್ಯವಶ್ಯ ಎಂದು ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಡಾ. ಶಶಿಭೂಷಣ ಹೆಗಡೆ ದೊಡ್ಮನೆ ಹೇಳಿದರು.ತಾಲೂಕಿನ ವಾಜಗದ್ದೆ ಸಮೀಪದ ಶಾನಬಾಳೆಗದ್ದೆಯಲ್ಲಿ ಶ್ರೀ ಶನೇಶ್ವರ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯ ಲೋಕಾರ್ಪಣೆ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾನಬಾಳೆಗದ್ದೆ ಚಿಕ್ಕ ಊರಾದರೂ ಎಲ್ಲರಿಗೂ ಮಾದರಿ ಆಗಿದೆ. ಇಂತಹ ಊರಿನಲ್ಲಿ ದೇವಸ್ಥಾನ ನಿರ್ಮಾಣ ನಿರ್ಮಿಸಿರುವುದು ಒಂದು ಅನುಸರಣೀಯವಾಗಿದೆ ಎಂದರು.ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಮಾತನಾಡಿದರು.ಬಂಗಾರ್ಯ ರಾಮ ಹಸ್ಲರ್ ಅಧ್ಯಕ್ಷತೆ ವಹಿಸಿದ್ದರು. ಡಾ. ಕೆ.ಶ್ರೀಧರ ವೈದ್ಯ, ತಿಮ್ಮಪ್ಪ ಎಂ.ಕೆ., ರಾಘವೇಂದ್ರ ಭಟ್ಟ ಸ್ವಸ್ತಿಕ ಕಲ್ಲಾಳ, ನಂದನ ಬೋರ್ಕರ್, ದ್ಯಾವಾ ನಾರಾಯಣ ಗೌಡ, ಎಸ್.ಸಿ. ಕನ್ನಪ್ಪ, ಮಂಜುನಾಥ ಬಿ.ಹಸ್ಲರ್, ಅನಂತ ಹೆಗಡೆ ಹೊಸಗದ್ದೆ, ಶಂಕರನಾರಾಯಣ ಭಟ್ಟ ಎಲೆಸರ, ಪ್ರಸನ್ನ ಹೆಗಡೆ ಹೊಸಗದ್ದೆ, ದಿವಾಕರ ಸಂಪಖಂಡ ಇತರರಿದ್ದರು.ಇದೇ ಸಂದರ್ಭ ವೇ. ದತ್ತಾತ್ರೇಯ ಭಟ್ಟ ಮಗೇಗಾರ ದಂಪತಿ, ಯಕ್ಷಗಾನ ಪ್ರಸಾದನಕಾರ ಎಂ.ಆರ್. ನಾಯ್ಕ ಕರ್ಸೆಬೈಲ್, ಯಕ್ಷಗಾನ ಕಲಾವಿದ ಶ್ರೀಧರ ಭಟ್ಟ ಕಾಸರಕೋಡ ಇವರನ್ನು ಸನ್ಮಾನಿಸಲಾಯಿತು. ಗೌರೀಶ ಹಸ್ಲರ್ ಹೂವಿನಮನೆ ಹಾಗೂ ನಿಶಾ ಎಂ.ನಾಯ್ಕ ಹೊನ್ನೆಬಿಡಾರ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾರದಾ ಮನುವಿಕಾಸ ಸಂಘದ ಸದಸ್ಯರು ಸ್ವಾಗತ ಗೀತೆ ಹಾಡಿದರು. ಪ್ರಶಾಂತ ನಾಯ್ಕ ಚನ್ನಪಟ್ಟಣ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ರಮೇಶ ಹೆಗಡೆ ನಿರೂಪಿಸಿದರು.ನಂತರ ಆಯ್ದ ಅತಿಥಿ ಕಲಾವಿದರಿಂದ ಶ್ರೀ ಶನೇಶ್ವರ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತು. ಹಿಮ್ಮೇಳದಲ್ಲಿ ಶಂಕರ ಭಟ್ಟ ಬ್ರಹ್ಮೂರು, ಪರಮೇಶ್ವರ ಭಂಡಾರಿ, ವಿಘ್ನೇಶ್ವರ ಗೌಡ, ಮುಮ್ಮೇಳದಲ್ಲಿ ಅಶೋಕ ಭಟ್ಟ ಸಿದ್ದಾಪುರ, ವಿದ್ಯಾಧರ ಜಲವಳ್ಳಿ, ಸಂಜಯ ಬಿಳಯೂರು, ವಿನಯ ಬೇರೊಳ್ಳಿ, ವೆಂಕಟೇಶ ಬಗರಿಮಕ್ಕಿ, ನಾಗಶ್ರೀ ಜಿ.ಎಸ್., ದೀಪಕ ಕುಂಕಿ, ಶಿವು ಸರಳಗಿ, ಶ್ರೀಧರ ಭಟ್ಟ ಕಾಸರಕೋಡು, ಸುಬ್ರಹ್ಮಣ್ಯ ಭಟ್ಟ, ಅವಿನಾಶ ಕೊಪ್ಪ ಪಾತ್ರ ನಿರ್ವಹಿಸಿದರು.