ಸಾರಾಂಶ
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಕೊಟ್ಯಾಂತರ ರು. ಖರ್ಚು ಮಾಡುತ್ತಿದ್ದು, ಗ್ರಾಮೀಣ ಭಾಗದ ಮಕ್ಕಳು ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬಿಸಿಯೂಟ ಸಹಾಯಕ ನಿರ್ದೇಶಕ ಶಾಂತಪ್ಪ ಹೇಳಿದರು.
ಹೊಸದುರ್ಗ: ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರ ಕೊಟ್ಯಾಂತರ ರು. ಖರ್ಚು ಮಾಡುತ್ತಿದ್ದು, ಗ್ರಾಮೀಣ ಭಾಗದ ಮಕ್ಕಳು ಅದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬಿಸಿಯೂಟ ಸಹಾಯಕ ನಿರ್ದೇಶಕ ಶಾಂತಪ್ಪ ಹೇಳಿದರು.
ತಾಲೂಕಿನ ಶ್ರೀರಾಂಪುರ ಗ್ರಾಮದ ಕೆಪಿಎಸ್ ಶಾಲೆಯ ಪ್ರಾಥಮಿಕ ಶಾಲಾ ವಿಭಾಗದಿಂದ ಆಯೋಜಿಸಿದ್ದ ಸರಸ್ವತಿ ಪೂಜೆ ಹಾಗೂ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ತಾಲೂಕಿನಲ್ಲಿ ವಸತಿ ಶಾಲೆ ಸೇರಿದಂತೆ ಕೆಪಿಎಸ್ ಶಾಲೆಗಳಿಗೆ ಕೋಟ್ಯಾಂತರ ರು. ಬರುತ್ತದೆ. ಅದರ ಸದ್ಬಳಕೆಯನ್ನು ಸ್ಥಳೀಯ ಎಸ್‌ಡಿಎಂಸಿ ಘಟಕ ನಿರ್ವಹಿಸಬೇಕು. ಇದರ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಸಿಗಲು ಸಹಕಾರಿಯಾಗಬೇಕು. ಶಾಸಕರು ಶಾಲಾ ಅಭಿವೃದ್ದಿಗೆ ಆಸಕ್ತಿ ವಹಿಸಿದ್ದು, ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಅನುದಾನ ನೀಡಿದ್ದಾರೆ ಎಂದರು.
ಯಾವ ಮಕ್ಕಳು ದಡ್ಡರಲ್ಲ ಪ್ರತಿ ಮಗುವಿನಲ್ಲೂ ತನ್ನದೆ ಆದ ಪ್ರತಿಭೆ ಅಡಗಿರುತ್ತದೆ ಅದನ್ನು ಹೊರ ಹಾಕಲು ಪೋಷಕರು ಹಾಗೂ ಸಮುದಾಯ ಅವಕಾಶ ಕಲ್ಪಿಸಿಕೊಡಬೇಕು ಈ ನಿಟ್ಟಿನಲ್ಲಿ ಪ್ರತಿಭಾಕಾರಂಜಿ , ಶಾಲಾ ವಾರ್ಷಿಕೋತ್ಸವ ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ವೇದಿಕೆಯಾಗಲಿವೆ ಎಂದರು..ಮುಂದಿನ ತಿಂಗಳು ನಿವೃತ್ತಿ ಹೊಂದಲಿರುವ ಮೂವರು ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಎಸ್‌ಡಿಎಂಸಿ ಉಪಾಧ್ಯಕ್ಷ ರೇವಣ್ಣ, ಸದಸ್ಯರಾದ ಲೋಕೇಶಪ್ಪ, ಕೃಷ್ಣಮೂರ್ತಿ, ಆನಂದ್, ವಿಕ್ರಂ, ದಾದಾಪೀರ್, ಬಿಆರ್‌ಸಿ ಮಂಜುನಾಥ್, ಪ್ರಾಥಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಮಂಜುನಾಥ್, ಮುಶಿ ಧರಣಪ್ಪ ಹಾಜರಿದ್ದರು.